ಹೊಸ ಹಂಪಿಯಲ್ಲಿ ಕಿಡಿಗೇಡಿಗಳಿಂದ ಆಂಜನೇಯ ಮೂರ್ತಿ ವಿರೂಪ

| Published : Jun 01 2024, 01:45 AM IST

ಸಾರಾಂಶ

ಹೊಸ ಹಂಪಿ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಆಂಜನೇಯ ಮೂರ್ತಿ ವಿರೂಪಗೊಳಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹೊಸ ಹಂಪಿ ಗ್ರಾಮದಲ್ಲಿ ಯಾರೋ ಕಿಡಿಗೇಡಿಗಳು ಆಂಜನೇಯ ಮೂರ್ತಿ ವಿರೂಪಗೊಳಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಗ್ರಾಮದ ಕಾರ್ಯಸಿದ್ಧಿ ಆಂಜನೇಯ ದೇಗುಲದ ಮೂರ್ತಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ ಅಥವಾ ಯಾರೋ ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಡಿವೈಎಸ್ಪಿ ಶರಣಬಸವೇಶ್ವರ, ಸಿಪಿಐ ಮಲ್ಲಿಕಾರ್ಜುನ ಯಾತನೂರು, ಪಿಎಸ್‌ಐಗಳಾದ ಶಿವಕುಮಾರ ನಾಯ್ಕ, ಹನುಮಂತಪ್ಪ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಂಪಿಯಲ್ಲಿ ಈ ಕೃತ್ಯವನ್ನು ಗುರುವಾರ ತಡರಾತ್ರಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗಿದೆ. ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.