ಸಾರಾಂಶ
ಮುಂಡಗೋಡ: ಪಟ್ಟಣದ ನೆಹರುನಗರ ಬಡಾವಣೆಯ ಅಕ್ಕಮಹಾದೇವಿ ಮೈದಾನದಲ್ಲಿ ನೂತನ ಆಂಜನೇಯ ದೇವಾಲಯ ಉದ್ಘಾಟನೆ, ದೇವರ ಪುನರ್ ಪ್ರತಿಷ್ಠಾಪನೆ, ಅತ್ತಿ ಗಿಡ ಶುದ್ಧೀಕರಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು.ಮೊದಲಿಗೆ ಗಣ ಹೋಮ, ಜಾಗ ಶುದ್ಧೀಕರಣ, ಅತ್ತಿ ಗಿಡ ಶುದ್ಧೀಕರಣ (ಉಪನಯನ) ಜರುಗಿದ ಬಳಿಕ ನೂತನವಾಗಿ ನಿರ್ಮಾಣ ಮಾಡಲಾದ ಆಂಜನೇಯ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಹಣ್ಣು ಕಾಯಿ ಸಮರ್ಪಣೆ ಸೇರಿದಂತೆ ವಿವಿಧ ಸೇವೆಗಳು ಜರುಗಿದವು. ಬಳಿಕ ಹನುಮ ಜಯಂತಿ ಪ್ರಯುಕ್ತ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಲಾಯಿತು. ಮಹಿಳೆಯರು ಪಾಲ್ಗೊಂಡು ಶಾಸ್ತ್ರೋಕ್ತವಾಗಿ ಈ ಕಾರ್ಯವನ್ನು ನೆರವೇರಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಸಂಜೆ ಆಂಜನೇಯ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.ಹೊನ್ನಾವರ ಕರ್ಕಿ ಜ್ಞಾನೇಶ್ವರಿ ಮಠದ ಮುರಾರಿ ಭಟ್ ಪೂಜಾ ಕಾರ್ಯ ನೆರವೇರಿಸಿ ಮಾತನಾಡಿ, ನಮ್ಮ ಬಳಿ ಎಷ್ಟೆ ಹಣ ಆಸ್ತಿ ಇದ್ದರೂ ಮನಶಾಂತಿ, ನೆಮ್ಮದಿಗಾಗಿ ಪರಮಾತ್ಮನ ಮೊರೆ ಹೋಗುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ದ್ವೇಷ, ಅಸೂಯೆ ಬಿಟ್ಟು ಪ್ರೀತಿ, ಸೌಹಾರ್ದ, ಸಮೃದ್ಧವಾಗಿ ಜೀವನ ಸಾಗಿಸಬೇಕಾದರೆ ಭಯ ಭಕ್ತಿ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಪೂರ್ವಜರು ದೇವಾಲಯಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್ ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ, ಸಾಮಾಜಿಕ ಧುರೀಣ ನಾಗರಾಜ ಕುನ್ನೂರ, ರಾಜು ಕುದರ್ಗಿ, ಶ್ರೀಕಾಂತ ಸಾನು, ಆರ್.ಎಸ್ ಸಜ್ಜನಶೆಟ್ಟರ, ಮಂಜುನಾಥ ಶೇಟ್, ವಿಶ್ವನಾಥ ಪವಾಡಶೆಟ್ಟರ, ರವಿ ಪಾಟೀಲ, ರವಿ ಪಾಟೀಲ, ವಿನಾಯಕ ಓಣಿಕೇರಿ, ಸಿದ್ದಲಿಂಗ ಕುಂಬಾರ, ಮಹೇಶ ಉಪಸ್ಥಿತರಿದ್ದರು.ಮುಂಡಗೋಡ: ಪಟ್ಟಣದ ನೆಹರುನಗರ ಬಡಾವಣೆಯ ಅಕ್ಕಮಹಾದೇವಿ ಮೈದಾನದಲ್ಲಿ ನೂತನ ಆಂಜನೇಯ ದೇವಾಲಯ ಉದ್ಘಾಟನೆ, ದೇವರ ಪುನರ್ ಪ್ರತಿಷ್ಠಾಪನೆ, ಅತ್ತಿ ಗಿಡ ಶುದ್ದಿಕರಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.