ಸಮಾನತೆಯ ಹರಿಕಾರ ಅಣ್ಣ ಬಸವಣ್ಣ: ಸಿದ್ಧರಾಮ ಯಳವಂತಗಿ

| Published : Oct 27 2024, 02:08 AM IST

ಸಾರಾಂಶ

Anna Basavanna, the pioneer of equality: Siddarama Yalavantagi

-ಬಸವಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಸಭೆಯಿಂದ ಬಸವ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಶಹಾಪುರ

ಬಸವಣ್ಣನವರು ತಳ ಸಮುದಾಯದವರ ಬದುಕು ಗಟ್ಟಿ ಮಾಡಿಕೊಳ್ಳಲು ಅಡಿಪಾಯ ಹಾಕಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹ ಮಾಡುವ ಮೂಲಕ ಎಲ್ಲರೂ ಸರಿಸಮಾನರು ಎಂದು ತೋರಿಸಿಕೊಟ್ಟರು. ವೈದಿಕ ವ್ಯವಸ್ಥೆ ರೂಪಿಸಿದ್ದ ಎಲ್ಲ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಸಮಾನತೆಯ ಅನುಭವ ಮಂಟಪ ಕಟ್ಟಿದವರು ಬಸವಣ್ಣನವರು ಎಂದು ಕಲಬುರಗಿಯ ಬಸವ ತತ್ವ ಪ್ರಸಾರಕ ಸಿದ್ಧರಾಮ ಯಳವಂತಗಿ ಹೇಳಿದರು.

ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯಿಂದ ಸಿದ್ಧಾರೂಡ ಮತ್ತು ಶ್ರವಣ ಆನೇಗುಂದಿಯವರ ಸ್ಮರಣೆಯ ನಿಮಿತ್ತ ನಡೆದ ತಿಂಗಳ ಬಸವ ಬೆಳಕು 119ರ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯ ಕುರಿತು ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಮಾಡಿದ ಕ್ರಾಂತಿಯಿಂದ ಅವರು ಎಲ್ಲರ ಮನೆ-ಮನಗಳನ್ನು ಬೆಳಗಿ, ಅಂತರ್ಜಾತಿ ವಿವಾಹ ಮಾಡಿಸಿ ಜಾತಿ, ಮತ ಎಂಬ ಪಿಡುಗು ತೊಲಗಿಸಿದರು. ನೀತಿಯ ತಳಹದಿಯ ಮೇಲೆ ಸಮಾಜವನ್ನು ಕಟ್ಟ ಬಯಸಿದ ಮನಶುದ್ಧಿ ಮಾಡಿ ಸಮಾಜಕ್ಕೆ ನವಚೈತನ್ಯ, ತತ್ವಾದರ್ಶಗಳನ್ನು ನೀಡಿದರು ಎಂದರು.

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಅವರು, ಶರಣರ ಸಾಹಿತ್ಯದ ಓದು ಮಾತ್ರ ನಮ್ಮ ಅಧಃಪತನವನ್ನು ತಪ್ಪಿಸಬಲ್ಲವು. ಇಂದಿನ ಸಾಮಾಜಿಕರಣ, ಜಾಗತಿಕರಣದ ಸಂದರ್ಭದಲ್ಲಿ ಬಸವ ತತ್ವವೊಂದೆ ನಮ್ಮೆಲ್ಲರ ಆಶಾ ಕಿರಣ ಎಂದರು.

ಭಾಲ್ಕಿ ಹಿರೇಮಠದ ಪೂಜ್ಯ ಮಹಾಲಿಂಗ ಸ್ವಾಮಿ ಮಾತನಾಡಿ, ಇಲ್ಲಿ ಸಮಾನತೆಯ ತತ್ವಗಳು ಉಸಿರಾಡಿವೆ. ಜಗತ್ತಿನಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ತಂದು ಕೊಟ್ಟ ಅಪರೂಪದ ಪರಿಸರ. ಬಸವಾದಿ ಶರಣರು ಮೆಟ್ಟಿದ ಧರೆಯನ್ನು ಸ್ಪರ್ಶಿಸುವುದೆ ಪಾವನ ಎಂದರು.

ಶೋಭಾ ಬಸವರಾಜ ಆನೇಗುಂದಿ, ಶರಣಮ್ಮ ಸಿದ್ಧಾರೂಢ ಆನೇಗುಂದಿ, ಬಸವ ತತ್ವಾಭಿಮಾನಿ ಅಯ್ಯಣ್ಣ ನಂದಿ ಮೊದಲಾದವರು ವೇದಿಕೆಯಲ್ಲಿದ್ದರು.

ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭೆಯ ತಾಲೂಕು ಅಧ್ಯಕ್ಷ ಸಿದ್ದಣ್ಣ ಆರಬೋಳ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಾಹಿತಿ ಸಿದ್ಧರಾಮ ಹೊನ್ಕಲ್, ಮೀನಾಕ್ಷಿ ಆರ್. ಹೊಸ್ಮನಿ ಮತ್ತು ಸಂಗೀತಾ ದೇಸಾಯಿಯವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಿದ್ಧಲಿಂಗಪ್ಪ ಆನೇಗುಂದಿ ವಹಿಸಿದ್ದರು. ಸೂಗಮ್ಮ ಹಿರೇಮಠ ವಚನ ಪ್ರಾರ್ಥನೆ ಮಾಡಿದರು.

ಶಿವಯೋಗಪ್ಪ ಮುಡಬೂಳ, ಷಣ್ಮುಖ ಅಣಬಿ, ಆರ್. ಎಂ. ಹೊನ್ನಾರೆಡ್ಡಿ ವಕೀಲರು, ಶಂಭುಲಿಂಗ ದೇಸಾಯಿ, ತಿಪ್ಪಣ್ಣ ಜಮಾದಾರ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಲಕ್ಷ್ಮಣ ಲಾಳಸೇರಿ, ಕವಿತಾ ಗುಡಗುಂಟಿ, ಜ್ಯೋತಿ ವಾಗಾ, ಕವಿತಾ ಗುಡಗುಂಟಿ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ, ಹಣಮಂತ ಕೊಂಗಂಡಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದು ಕೇರವಂಟಿಗಿ, ಭೀಮನಗೌಡ, ಬಸವರಾಜ ಹುಣಸಗಿ, ಭೀಮಣ್ಣ ಪಾಡಮುಖಿ, ರಾಜು ಕುಂಬಾರ, ಶಿವರುದ್ರ ಉಳ್ಳಿ, ಗುಂಡಪ್ಪ ಕೋರಿ, ಉಮೇಶ ಗೋಗಿ ಇದ್ದರು.

----

26ವೈಡಿಆರ್7: ಶಹಾಪುರ ನಗರದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ನಡೆದ ತಿಂಗಳ ಬಸವ ಬೆಳಕು 119 ರ ಕಾರ್ಯಕ್ರಮ ನಡೆಯಿತು.