ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಪಟ್ಟಣದ ಮನೆಯೊಂದರಲ್ಲಿ ಸರ್ಕಾರದ ಅನ್ನಭಾಗ್ಯ (ಪಡಿತರ) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರು ಮತ್ತು ಪೊಲೀಸರು ದಾಳಿ ನಡೆಸಿ, ಸುಮಾರು ₹1,24,700 ಮೌಲ್ಯದ 4,300 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಹಾಗೂ ಇಂಡಿ ಶಹರ ಪೊಲೀಸ್ ಠಾಣೆ ಸಿಪಿಐ ರತನಕುಮಾರ ಜಿರಗ್ಯಾಳ ದಾಳಿ ಮಾಡಿದರು.
ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಮನೆಯೊಂದರಲ್ಲಿ ಸರ್ಕಾರದ ಅನ್ನಭಾಗ್ಯ (ಪಡಿತರ) ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರು ಮತ್ತು ಪೊಲೀಸರು ದಾಳಿ ನಡೆಸಿ, ಸುಮಾರು ₹1,24,700 ಮೌಲ್ಯದ 4,300 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಹಾಗೂ ಇಂಡಿ ಶಹರ ಪೊಲೀಸ್ ಠಾಣೆ ಸಿಪಿಐ ರತನಕುಮಾರ ಜಿರಗ್ಯಾಳ ದಾಳಿ ಮಾಡಿದರು.ಇಂಡಿ ಪಟ್ಟಣದ ಲಚ್ಯಾಣ ರಸ್ತೆಯಲ್ಲಿರುವ ಉಸ್ಮಾನಗಣಿ ಮೋಮಿನ ಮತ್ತು ಪಪ್ಪು ಮೋಮಿನ ಮತ್ತು ಇತರರು ಸೇರಿಕೊಂಡು ಮನೆಯಲ್ಲಿ ಸರ್ಕಾರದ ಅನ್ನಭಾಗ್ಯ ಆಹಾರ ಧಾನ್ಯ ಯೋಜನೆಗೆ ಬಿಡುಗಡೆ ಮಾಡಿದ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಅಕ್ರಮ ಪಡಿತರ ಆಹಾರಧಾನ್ಯದ ದಾಸ್ತಾನು ಕುರಿತು ಅರಿತ ಅಧಿಕಾರಿಗಳು, ದಾಳಿ ಮಾಡಿದಾಗ 89 ಚೀಲ ಅಕ್ಕಿ ತುಂಬಿದ ಪ್ಲಾಸ್ಟಿಕ್ ಕರಿ ಚೀಲಗಳು ಪತ್ತೆಯಾಗಿವೆ. ಅದರಲ್ಲಿ 5 ಅನ್ನಭಾಗ್ಯದ ಅಕ್ಕಿತುಂಬಿದ ಚೀಲಗಳು ಸಹ ಇದ್ದವು. 4 ಚೀಲಗಳಿಂದ ಒಂದು ಕೆಜಿ ಅಕ್ಕಿಯನ್ನು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಅಕ್ಕಿತುಂಬಿಟ್ಟ ಎಲ್ಲಾ ಚೀಲಗಳು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಇಲಾಖೆಯ ಕಂಪ್ಯೂಟರ್ ಆಪರೇಟರ್ ನಾರಾಯಣ ರಾಠೋಡ, ಎಎಸ್‌ಐ ಎಂ.ಎಸ್.ತಳವಾರ, ಪೊಲೀಸ್ ಸಿಬ್ಬಂದಿ ಎಂ.ಜಿ.ಸಾವಳೆ, ಎ.ಕೆ.ಹೆಗಡಿಹಾಳ, ಬಿ.ಜೆ.ಬಿರಾದಾರ ಹಾಗೂ ಪಂಚರು ಇದ್ದರು.