ಅನ್ನದಾನ ಶ್ರೇಷ್ಠದಾನ: ಮಾಜಿ ಸಂಸದ ಬಚ್ಚೇಗೌಡ

| Published : Jul 05 2024, 12:45 AM IST

ಸಾರಾಂಶ

ಹೊಸಕೋಟೆ: ಸಮಾಜಕ್ಕೇನಾದರೂ ಮಾಡಬೇಕು ಎನ್ನುವ ಇಚ್ಚಾಸಕ್ತಿಯುಳ್ಳ ವ್ಯಕ್ತಿಗಳು ಜನಮನದಲ್ಲಿ ನೆಲೆಸಿರುತ್ತಾರೆ. ಅವರ ಸ್ಮರಣಾರ್ಥ ಹಸಿದವರಿಗೆ ಅನ್ನದಾನ ಮಾಡುತ್ತಿರುವುದು ಅತ್ಯಂತ ಶ್ರೇಷ್ಠ ಕೆಲಸ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಹೊಸಕೋಟೆ: ಸಮಾಜಕ್ಕೇನಾದರೂ ಮಾಡಬೇಕು ಎನ್ನುವ ಇಚ್ಚಾಸಕ್ತಿಯುಳ್ಳ ವ್ಯಕ್ತಿಗಳು ಜನಮನದಲ್ಲಿ ನೆಲೆಸಿರುತ್ತಾರೆ. ಅವರ ಸ್ಮರಣಾರ್ಥ ಹಸಿದವರಿಗೆ ಅನ್ನದಾನ ಮಾಡುತ್ತಿರುವುದು ಅತ್ಯಂತ ಶ್ರೇಷ್ಠ ಕೆಲಸ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ನಗರದಲ್ಲಿ ಪುರಸಭೆ ಮಾಜಿ ಸದಸ್ಯ ದಿ.ತ್ಯಾಗರಾಜ್ ಅವರ ಸ್ಮರಣಾರ್ಥ ಹಾಗೂ ದಿನಸಿ ಕಿಟ್ ವಿತರಣೆ ಕಾರ‍್ಯದಲ್ಲಿ ಮಾತನಾಡಿದ ಅವರು, ತ್ಯಾಗರಾಜ್‌ ಅವರು ಜನಾನುರಾಗಿ. ಸಮಾಜ ಸೇವೆಗೆ ಇಡೀ ಕುಟುಂಬ ಸದಾ ಮುಂದೆ ನಿಲ್ಲುತ್ತಿದ್ದರು. ತ್ಯಾಗರಾಜ್ ಸ್ಮರಣಾರ್ಥ ಅಭಯಾಶ್ರಮದ ೫೦ಕ್ಕೂ ಹೆಚ್ಚು ಮಕ್ಕಳು ಹಾಗೂ ವೃದ್ಧರಿಗೆ ದವಸ ಧಾನ್ಯ, ಬಟ್ಟೆ ಹಾಗೂ ಹೊದಿಕೆ ನೀಡಿದ್ದಾರೆ. ಜತೆಗೆ ತಾಲೂಕು ಕಚೇರಿಯಲ್ಲಿ ತಮ್ಮ ಜಮೀನು ಸಂಬಂಧ ಕೆಲಸಗಳಿಗೆ ಆಗಮಿಸುವ ನೂರಾರು ರೈತರಿಗೆ ಮಧ್ಯಾನ್ಹದ ಊಟದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.

ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ತ್ಯಾಗರಾಜ್ ಅವರ ಅಕಾಲಿಕ ನಿಧನ ನಮಗೆಲ್ಲಾ ತುಂಬಲಾರದ ನಷ್ಟವಾಗಿದ್ದರೂ ಅವರ ಸಾಮಾಜಿಕ ಸೇವೆ ಆದರ್ಶಗಳು ನಮಗೆಲ್ಲಾ ದಾರಿದೀಪ ಎಂದರು.

ನಗರಸಭೆ ಸದಸ್ಯೆ ಉಷಾರಾಣಿ ಸುದರ್ಶನ್, ಮುಖಂಡರಾದ ಸುಭಾಷ್‌ಗೌಡ, ಬಿ.ವಿ.ಬೈರೇಗೌಡ, ಅಣ್ಣಯ್ಯ, ಹೋ.ರಾ ವೆಂಕಟೇಶ್, ವಾಸುದೇವಯ್ಯ, ಅಬ್ದುಲ್ಲಾ ಸಾಬ್ ಹಾಜರಿದ್ದರು.

ಫೋಟೋ: 4 ಹೆಚ್‌ಎಸ್‌ಕೆ 4

ಹೊಸಕೋಟೆಯ ತ್ಯಾಗರಾಜ್ ಬಡಾವಣೆಯಲ್ಲಿ ಪುರಸಭೆ ಮಾಜಿ ಸದಸ್ಯ ದಿ.ತ್ಯಾಗರಾಜ್‌ ಸ್ಮರಣಾರ್ಥ ಬಡವರಿಗೆ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡರು ದಿನಸಿ ಕಿಟ್ ವಿತರಿಸಿದರು.