ಸಾರಾಂಶ
ಮುಂಡರಗಿ: 2026ರ ಜ. 19ರಿಂದ 31ರ ವರೆಗೆ ಅನ್ನದಾನೀಶ್ವರ ಶಿವಯೋಗಿಗಳ ಯಾತ್ರಾ ಮಹೋತ್ಸವ ಜರುಗಲಿದ್ದು, ಯಾತ್ರಾ ಸಮಿತಿ ಅಧ್ಯಕ್ಷರಾಗಿ ಕೈಲಾಸಪತಿ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಬುಧವಾರ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವ ಸಮಾರಂಭ ಕುರಿತು ಹಾಗೂ 2026ನೇ ಸಾಲಿನ ಯಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಸಮಾರಂಭ 2026ರ ಜ. 17 ಹಾಗೂ 18ರಂದು ಜರುಗಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು. ಯಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀಮಠದ ಹಳೇ ದಾಖಲೆಗಳ ಪ್ರದರ್ಶನ ಸೇರಿ ನಮ್ಮ ಗ್ರಂಥಗಳ ಕುರಿತು ವಿಚಾರಸಂಕಿರಣ ಸೇರಿದಂತೆ ವಿಶೇಷ ಕಾರ್ಯಕ್ರಮ ನಡೆಯಲಿವೆ ಎಂದರು.ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜ. 19ರಿಂದ ಅನ್ನದಾನೀಶ್ವರ ಯಾತ್ರಾ ಕಾರ್ಯಕ್ರಮ ಆರಂಭಗೊಂಡು 31ರ ವರೆಗೆ ನಡೆಯುವುದು. ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಯಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ಈ ಭಾಗದಲ್ಲಿ ಶಿಕ್ಷಣ ಇಲ್ಲದ ಕಾಲದಲ್ಲಿ 1924ರಲ್ಲಿ ಜ.ಅ. ವಿದ್ಯಾ ಸಂಸ್ಥೆ ಆರಂಭಗೊಂಡು ಈ ಭಾಗದಲ್ಲಿ ಶಿಕ್ಷಣ ನೀಡುವ ಕಾರ್ಯ ಪ್ರಾರಂಭಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ ಎಂದರು.ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಶತಮಾನೋತ್ಸವ ಹಾಗೂ ಯಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ನಾಡಿನ ಜನಪ್ರತಿನಿಧಿಗಳು, ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಕೈಲಾಸಪತಿ ಹಿರೇಮಠ, ಉಪಾಧ್ಯಕ್ಷರಾಗಿ ಮಹೇಶ ಜಂತ್ಲಿ, ಕಾರ್ಯದರ್ಶಿಯಾಗಿ ಶಿವು ವಾಲಿಕಾರ, ಖಜಾಂಚಿಯಾಗಿ ಆನಂದಗದೌಡ ನಾಡಗೌಡ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಕರಬಸಪ್ಪ ಹಂಚಿನಾಳ, ಆರ್.ಎಲ್. ಪೊಲೀಸಪಾಟೀಲ, ಎಸ್.ಬಿ.ಕೆ. ಗೌಡರ, ವಿ.ಎಫ್. ಗುಡದಪ್ಪನವರ, ವಿ.ಜೆ. ಹಿರೇಮಠ, ನಾಗೇಶ ಹುಬ್ಬಳ್ಳಿ, ಎಸ್.ಬಿ. ಹಿರೇಮಠ, ಮಂಜುನಾಥ ಇಟಗಿ, ಯು.ಸಿ. ಹಂಪಿಮಠ, ಕುಮಾರ ಬನ್ನಿಕೊಪ್ಪ, ಟಿ.ಬಿ. ದಂಡಿನ, ಹಾಲಯ್ಯ ಹಿರೇಮಠ ಸೇರಿ ಅನೇಕರು ಉಪಸ್ಥಿತರಿದ್ದರು. ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಆರ್. ರಿತ್ತಿ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))