ಸಾರಾಂಶ
ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ ಪತ್ರಿಕೆಯ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಹೊಟೇಲ್ ಉದ್ಯಮಿ ಬಸಲಿಂಗಯ್ಯ ಕಲ್ಯಾಣಿ ಅವರ ಅನ್ನಪೂರ್ಣೇಶ್ವರಿ ಹೊಟೇಲ್‌ನ 5ನೇ ಶಾಖೆಯನ್ನು ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಜಮಖಂಡಿ
ಏಷ್ಯಾನೆಟ್ ಸುವರ್ಣನ್ಯೂಸ್, ಕನ್ನಡಪ್ರಭ ಪತ್ರಿಕೆಯ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಹೊಟೇಲ್ ಉದ್ಯಮಿ ಬಸಲಿಂಗಯ್ಯ ಕಲ್ಯಾಣಿ ಅವರ ಅನ್ನಪೂರ್ಣೇಶ್ವರಿ ಹೊಟೇಲ್‌ನ 5ನೇ ಶಾಖೆಯನ್ನು ತಾಲೂಕಿನ ಸಾವಳಗಿ ಹೋಬಳಿಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು. ಶ್ರಾವಣ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನೂತನ ಶಾಖೆ ಪ್ರಾರಂಭಿಸಲಾಗಿದೆ. ಸಾವಳಗಿ ಗ್ರಾಮದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಸೂಕ್ತವಾದ ಸ್ಥಳ, ಗ್ರಾಮಸ್ಥರ ಸಹಕಾರ ದಿಂದ ನೂತನ ಶಾಖೆಯನ್ನು ಪ್ರಾರಂಭಿಸಿದ್ದಾಗಿ ಮಾಲಿಕ ಬಸಲಿಂಗಯ್ಯ ಕಲ್ಯಾಣಿ ತಿಳಿಸಿದರು. ಶಾಸಕ ಜಗದೀಶ ಗುಡಗುಂಟಿ ಅವರ ಪುತ್ರ ವಿರುಪಾಕ್ಷಯ್ಯ ಗುಡಗುಂಟಿ, ರೈತ ಮುಖಂಡ ಬಸವರಾಜ ಸಿಂಧೂರ ಸೇರಿದಂತೆ ಜಮಖಂಡಿ, ಗಲಗಲಿ,ಸಾವಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಸಾರ್ವಜನಿಕರು, ಕಲ್ಯಾಣಿ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.