ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ದೂಧಗಂಗಾ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಣ್ಣಾಸಾಬ ಪಾಟೀಲರ ನೇತೃತ್ವದ ರೈತ ಸಹಕಾರಿ ಪೆನಲ್ ಜಯಭೇರಿ ಸಾಧಿಸುವ ಮೂಲಕ ಮತ್ತೊಮ್ಮೆ ವಿಜಯದ ಪತಾಕೆ ಹಾರಿಸಿದ್ದಾರೆ.ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 5 ವರ್ಷಗಳ ಕಾಲದ ಅವಧಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ ಅಣ್ಣಾಸಾಬ್ ಪಾಟೀಲರ ಪೆನಲ್‌ನ ಒಬ್ಬರು ಬಾಬಗೌಡ ಪಾಟೀಲ ಅವಿರೋಧವಾಗಿ ಆಯ್ಕೆಗೊಂಡಿದ್ದು, 10 ಸ್ಥಾನಗಳಿಗೆ ಚುನಾವಣೆ ನಡೆದು ಅಣ್ಣಾಸಾಬ್ ಪಾಟೀಲ ಗುಂಪಿನ 11 ಜನ ಸದಸ್ಯರು ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಿರೋಧಿ ಗುಂಪು ಹೀನಾಯ ಸೋಲು ಅನುಭವಿಸಿದೆ.
ಜುಗೂಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1951 ಸಾಲಗಾರ ಸದಸ್ಯರು ಹಾಗೂ 491 ಬಿನ್ ಸಾಲಗಾರ ಸದಸ್ಯರಿದ್ದಾರೆ. 10 ಸ್ಥಾನಗಳ ಚುನಾವಣೆಯಲ್ಲಿ 1719 ಸಾಲಗಾರ ಮತದಾರರು ಹಾಗೂ ಬಿನ್ ಸಾಲಗಾರರು 416ನ ಮತಗಳು ಚಲಾಯಿಸಿದ್ದು, ಅಧ್ಯಕ್ಷ ಅಣ್ಣಾಸಾಬ ಪಾಟೀಲ 1252 ಮತಗಳನ್ನು ಪಡೆದು 5ನೇ ಬಾರಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಆದಿನಾಥ ಮಗದುಮ್ 939, ಚಿದಾನಂದ ಮಿನಚೆ 849, ಶಿವಗೌಡ ಪಾಟೀಲ 825, ಶಿವಾನಂದ ಕಡೋಲೆ 1010, ಮಾಲತಿ ಸುರೇಶ ಪಾಟೀಲ 970, ಸೇವಂತಿ ವಿಶ್ವನಾಥ ಶಮನೇವಾಡಿ 1006, ಮಹಮ್ಮದಪೀರ್ ಮುಜಾವರ 1194, ಮಚ್ಚಂದ್ರನಾಥ ಗಸ್ತೆ 1002, ಕುಸುಮಾ ಜಯಪಾಲ ಯಮಕನಮರಡಿ 259 ಮತಗಳನ್ನು ಪಡೆದು ಜಯಭೇರಿ ಸಾಧಿಸಿದ್ದಾರೆ.ಚುನಾವಣಾಧಿಕಾರಿಯಾಗಿ ರಾಂವೇಂದ್ರ ನೂಲಿ ಸಹಾಯಕರಾಗಿ ಚಿದಾನಂದ ಬೇಡಿಕಿಹಾಳೆ ಕಾರ್ಯನಿರ್ವಹಿಸಿದರು. ಸಂಭ್ರಮಾಚರಣೆ : ಫಲಿತಾಂಶ ಹೊರಬಿಳುತ್ತಿದ್ದಂತೆ ಬೆಂಬಲಿಗರು ಗುಲಾಲು ಎರಚಿ, ಫಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಅನೀಲ ಕಡೋಲೆ, ಸುಧಾಕರ ಗಣೇಶವಾಡಿ, ಬಾಬಾಸಾಬ ಪಾಟೀಲ, ರವೀಂದ್ರ ವ್ಹಾಂಟೆ, ಸುರೇಶ ಪಾಟೀಲ, ಅಸ್ಲಂ ಅಪರಾಜ, ರಾಜು ಕಡೋಲೆ, ಅನೀಲ ಸುಂಕೆ, ಅವಿನಾಶ ಪಾಟೀಲ,ರಾಜು ಕಡೋಲಿ, ಅವಿನಾಶ ಪಾಟೀಲ, ನಿಖಿಲ ಪಾಟೀಲ, ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.