ಶ್ರೀ ತಲಕಾವೇರಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಆಚರಣೆ

| Published : Aug 20 2024, 12:49 AM IST

ಶ್ರೀ ತಲಕಾವೇರಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ನಡೆಯಿತು. ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಶ್ರೀ ತಲಕಾವೇರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಆಚರಿಸಲಾಯಿತು.

ಭಾನುವಾರ ಶ್ರೀರಾಮ ಮಂದಿರದಲ್ಲಿ ಸಭಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಮಾರಂಭವನ್ನು ಮಡಿಕೇರಿ ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿ ಮಾತನಾಡಿದರು.

ಸಾಲ ಪಡೆಯುವುದು ಮರುಪಾವತಿಗೆ ಮಾತ್ರ ಸದಸ್ಯರು ಸೀಮಿತವಾಗದೆ ಸಮಾಜಕ್ಕೆ ತಮ್ಮ ಕೊಡುಗೆಗಳ ಬಗ್ಗೆ ಅರಿವು ಮೂಡಿಸಿದರಲ್ಲದೆ ಇಂದಿನ ದಿನಗಳಲ್ಲಿ ಪ್ರತಿ ಸದಸ್ಯರು ತನ್ನ ವೈಯಕ್ತಿಕ ಕೌಶಲ್ಯವನ್ನು ಬೆಳೆಸಿಕೊಳ್ಳುವ ದಿಸೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಲವಷ್ಟು ತರಬೇತಿಗಳನ್ನು ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳುವುದರಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಜ್ಞಾನ ವಿಕಾಸ ಮಾಹಿತಿ ಕೇಂದ್ರದ ವತಿಯಿಂದಲೂ ಪ್ರತಿ ತಿಂಗಳು ಮಾಹಿತಿ ಇತರೆ ವಿಚಾರಗಳ ಕುರಿತು ಮಾಹಿತಿ ತರಬೇತಿಯನ್ನು ನೀಡುವ ಮೂಲಕ ಪ್ರತಿ ಸದಸ್ಯರಿಗೂ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪುರುಷೋತ್ತಮ್ ಹೇಳಿದರು.

ದಿನದ ಅಂಗವಾಗಿ ತಲಕಾವೇರಿ ಜ್ಞಾನವಿಕಾಸ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಸಮನ್ವಯ ಅಧಿಕಾರಿ ಮಾಲಿನಿ, ಒಕ್ಕೂಟದ ಅಧ್ಯಕ್ಷರಾದ ಖತ್ತೀಜ ಹಾಗೂ ಭವ್ಯ ಬಹುಮಾನಗಳನ್ನು ವಿತರಿಸಿದರು.

ಸಮಾರಂಭದಲ್ಲಿ ಸಂಘದ ಸದಸ್ಯೆ ದೇವಕ್ಕಿ, ಸೇವಾ ಪ್ರತಿನಿಧಿ ಯಶೋಧ ನಿರೂಪಿಸಿ, ಭವ್ಯ ವಂದಿಸಿದರು.