ಸಾರಾಂಶ
ಮಡಿಕೇರಿ: ನಗರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ 26ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ನ.3ರ ಸಂಜೆಯಿಂದಲೇ ದೇವಾಲಯದಲ್ಲಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.ಸೋಮವಾರ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ನಗರದ ವಿವಿಧ ಬಡಾವಣೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
----------------------------------------ಕೊಡಗಿನಲ್ಲೂ ವಕ್ಫ್ ಬೋರ್ಡ್ ನೊಟೀಸ್
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನಲ್ಲೂ ವಕ್ಫ್ ಬೋರ್ಡ್ ನೊಟೀಸ್ ಮಾಡಲಾಗಿದ್ದು, ಬೆಂಗಳೂರಿನ ವಕ್ಫ್ ಬೋರ್ಡ್ ಕೋರ್ಟಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಡಿಕೇರಿ ನಗರದ ಅಂಬೇಡ್ಕರ್ ನಗರ, ರಾಣಿಪೇಟೆಯ 16 ಕುಟುಂಬಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಖಬರಸ್ಥಾನದ ಸುತ್ತಮುತ್ತಲಿನ ಜಾಗ ಒತ್ತುವರಿ ಆಗಿದೆಯೆಂದು ನೊಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.ಮಡಿಕೇರಿಯ ಉಷಾ ಬೆಳ್ಳಿಯಪ್ಪ ಮತ್ತು ಸಹೋದರರಿಗೆ ನೊಟೀಸ್ ಮಾಡಲಾಗಿದ್ದು, ಖಬರಸ್ಥಾನದ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.
2019 ರಲ್ಲೇ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಅ. 24 ರಂದು ನೊಟೀಸ್ ಜಾರಿಯಾಗಿದ್ದು, ಆ ಬಳಿಕ ಹಲವು ಬಾರಿ ವಕ್ಫ್ ಮಂಡಳಿಗೆ ತಮ್ಮ ಮನೆಗಳ ದಾಖಲೆಯನ್ನು ಕುಟುಂಬಸ್ಥರು ಸಲ್ಲಿಸಿದ್ದಾರೆ. ಆದರೂ ಅದನ್ನು ಪರಿಗಣಿಸಿಲ್ಲ ಎಂದು ಇಲ್ಲಿನ ಜನರು ಹೇಳಿದ್ದಾರೆ.40 ವರ್ಷಗಳ ಹಿಂದೆಯೇ ನಮ್ಮ ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಮನೆಗಳಿಗೆ ಪಟ್ಟ ದಾಖಲೆಗಳನ್ನು ನೀಡಲಾಗಿದೆ. ನಮ್ಮ ಮನೆಗಳಿಗೆ ಅಂದಿನಿಂದ ಇದುವರೆಗೆ ಕಂದಾಯ ಕಟ್ಟುತ್ತಿದ್ದೇವೆ. ಆದರೂ ವಕ್ಫ್ ಕೋರ್ಟಿನಲ್ಲಿ ಪ್ರಕರಣ ಹಾಕಿ ತೊಂದರೆ ನೀಡಲಾಗುತ್ತಿದೆ. 40 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಆಗಿದ್ದ ಗುಂಡೂರಾವ್ ಹಕ್ಕು ಪತ್ರ ನೀಡಿದ್ದರು. ಹಕ್ಕುಪತ್ರ ನೀಡುವಾಗ ವಕ್ಫ್ ನವರು ಕತ್ತೆ ಕಾಯುತ್ತಿದ್ದರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.