ಸಾರಾಂಶ
ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕೋತ್ಸವ ಇತ್ತೀಚೆಗೆ ನೆರವೇರಿತು. ಶಾಸಕ ಗುರುರಾಜ್‌ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ನಾವುಂದದ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ವಾರ್ಷಿಕೋತ್ಸವವು ಇತ್ತೀಚೆಗೆ ನೆರವೇರಿತು.ಬೈಂದೂರು ವಿಧಾನಸಭಾ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಾವುಂದ ಗ್ರಾ.ಪಂ. ಅಧ್ಯಕ್ಷರಾದ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ನಾವುಂದ ಗ್ರಾ.ಪಂ. ಸದಸ್ಯರಾದ ಜಾನಕಿ ಮೊಗವೀರ ಮತ್ತು ರಾಮ ಪೂಜಾರಿ ಅವರು ಅತಿಥಿಗಳಾಗಿ ಆಗಮಿಸಿದ್ದರು.ಕಾಲೇಜು ಪ್ರಾಂಶುಪಾಲರಾದ ಸುಜಾತಾ ಎಂ., ಉಪಪ್ರಾಂಶುಪಾಲರಾದ ಶಶಿಕಲಾ ನಾಯ್ಕ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಪ್ರವೀಣ್ ಪೂಜಾರಿ, ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಸತೀಶ್ ಚಂದನ್ ಅವರು ಉಪಸ್ಥಿತರಿದ್ದರು.
ಗಣಿತ ಅಧ್ಯಾಪಕಿಯಾದ ಮುಕ್ತಾ ಇವರು ಸ್ವಾಗತಿಸಿದರು. ಗಣಿತ ಉಪನ್ಯಾಸಕಿಯಾದ ಸಾವಿತ್ರಿ ಎಸ್. ವಂದಿಸಿದರು. ಇತಿಹಾಸ ಉಪನ್ಯಾಸಕರಾದ ಗಣೇಶ ಎಂ ಮತ್ತು ಅಧ್ಯಾಪಕರಾದ ಕರುಣಾಕರ್ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಿಸಿದರು.