ಕನ್ನಡಪ್ರಭ ವಾರ್ತೆ ಮಳವಳ್ಳಿ

ಇದುವರೆಗಿನ ಯಾವುದೇ ಸರ್ಕಾರಗಳು ವೀಳ್ಯದೆಲೆ ಬೆಳೆಗಾರರಿಗೆ ಪೂರಕವಾಗಿ ಯಾವುದೇ ಯೋಜನೆಗಳನ್ನು ಜಾರಿ ಮಾಡಿಲ್ಲ, ಈ ಬಾರಿಯ ಬಜೆಟ್ ನಲ್ಲಾದರೂ ಹೊಸ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮನವಿ ಮಾಡಿದ್ದಾರೆ.

ಮೈಸೂರು ಪ್ರಾಂತ್ಯದಲ್ಲಿ ಬೆಸ್ತರು, ಗಂಗಾಮತ ಸಮುದಾಯದವರು ಮೀನುಗಾರಿಕೆ, ಸಣ್ಣಪುಟ್ಟ ವ್ಯಾಪಾರ ಬಿಟ್ಟರೆ ವೀಳ್ಯದೆಲೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಬೆಳೆಯನ್ನು ಮೂರು ವರ್ಷ ಮಗುವಂತೆ ಪೋಷಣೆ ಮಾಡಬೇಕು. ಹಲವು ಸಂದರ್ಭದಲ್ಲಿ ಅತಿವೃಷ್ಟಿ ಉಂಟಾದಾಗ ಬಳ್ಳಿಗಳು ಕೊಳೆಯುತ್ತವೆ. ಅನಾವೃಷ್ಟಿಯಿಂದ ಒಣಗಿ ಹೋಗುತ್ತದೆ. ಇದರಿಂದ ಅನೇಕ ಬೆಳೆಗಾರರು ನಷ್ಟ ಎದುರಿಸುತ್ತಿದ್ದಾರೆ. ನೂರಾರು ಮಂದಿ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದು ಬೆಳೆಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡ ಕುಟುಂಬಗಳಿಗೆ ನೆರವಾಗುವಂಥ ಯೋಜನೆಗಳನ್ನು ಈ ಬಾರಿ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.ಇಂದು ಮುದ್ರಣಕಾರರ ದಿನಾಚರಣೆ

ಕನ್ನಡಪ್ರಭ ವಾರ್ತೆ ಮಂಡ್ಯ


ಜಿಲ್ಲಾ ಮುದ್ರಣಕಾರರ ಸಂಘದಿಂದ ಮುದ್ರಣ ರಂಗದ ಪಿತಾಮಹಾ ಜೋಹಾನ್ಸ್ ಗುಟೆನ್ ಬರ್ಗ್‌ರವರ ಸವಿ ನೆನಪಿನಲ್ಲಿ ಫೆ.೨೪ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮುದ್ರಣಕಾರರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜೆ.ಲಕ್ಷ್ಮೀನಾರಾಯಣ್ ತಿಳಿಸಿದರು.

ಚಿನ್ನದ ಕೆಲಸ ಮಾಡುತ್ತಿದ್ದ ಜೋಹಾನ್ಸ್ ಗುಟೆನ್ ಬರ್ಗ್ ಅವರು ಬೈಬಲ್‌ನ ಪ್ರತಿಗಳನ್ನು ಇತರರಿಗೆ ಒದಗಿಸುವ ಉದ್ದೇಶದಿಂದ ಕಬ್ಬಿಣದಿಂದ ಮುದ್ರಣದ ಅಚ್ಚುಗಳನ್ನು ತಯಾರಿಸಿ ಒಂದು ರೂಪಕೊಟ್ಟು ಮುದ್ರಣ ಮಾಡುವ ವಿಧಾನ ಕಂಡು ಹಿಡಿದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಶಾಸಕ ಪಿ.ರವಿಕುಮಾರ್ ಕಾರ್ಯಕ್ರಕಮ ಉದ್ಘಾಟಿಸುವರು, ಸಂಘದ ಅಧ್ಯಕ್ಷ ಜಿ.ಲಕ್ಷ್ಮಿನಾರಾಯಣ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ಅೀಕ್ಷಕ ಡಾ.ವಿ.ಜೆ.ಶೋಭರಾಣಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಉಪಸಂಚಾಲಕ ಎಂ.ಎಸ್.ಸತೀಶ್, ಮಂಡ್ಯ ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಇದೇ ವೇಳೆ ಹಿರಿಯ ಮುದ್ರಣಕಾರ ಎ.ಎಂ.ಗಿರೀಶ್, ಅಂಗವಿಕಲ ಮುದ್ರಣಾಕಾರ ಜೆ.ಎನ್.ಮುಕುಂದರಾವ್ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು. ರಾಜ್ಯ ಸಂಚಾಲಕ ಎಂ.ಎಸ್.ಸತೀಶ್, ಕಾರ್ಯದರ್ಶಿ ಆರ್.ರವೀಂದ್ರ ಗೋಷ್ಠಿಯಲ್ಲಿದ್ದರು.