ಸಾರಾಂಶ
ಚುನಾವಣೆಗೆ ಸ್ಪರ್ಧಿಸಲು ಯುವಮನಸ್ಸುಗಳಲ್ಲಿ ಮೂಡುತ್ತಿರುವ ಆಸಕ್ತಿ
ಮಾಜಿ ಶಾಸಕ ಹೆಗಡೆ ಕುಟುಂಬದ ಕುಡಿ ನಯನ ಹೆಗಡೆ ರಾಜಕೀಯಕ್ಕೆ ಸೇರಿಸಲು ಯುವಸ್ನೇಹಿತರ ತಯಾರಿಕನ್ನಡಪ್ರಭ ವಾರ್ತೆ ಹಳಿಯಾಳಪುರಸಭೆಯ ಆಡಳಿತ ಮಂಡಳಿಯ ಆಡಳಿತಾವಧಿಯು ಮುಗಿದ ಹಿನ್ನೆಲೆ ಪ್ರಕಟಗೊಂಡ ವಾರ್ಡ್ ಮೀಸಲಾತಿ ಬೆನ್ನಲ್ಲೇ ಹಳಿಯಾಳದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಬಾರಿ ಪುರಸಭಾ ಚುನಾವಣೆಗೆ ಸ್ಪರ್ಧಿಸಲು ಯುವಮನಸ್ಸುಗಳಲ್ಲಿ ಆಸಕ್ತಿ ಮೂಡಿರುವ ಆಶಾದಾಯಕ ಬೆಳವಣಿಗೆ ಕಂಡು ಬಂದಿದೆ. ಹಳಿಯಾಳ ಪಟ್ಟಣದ ಅಭಿವೃದ್ಧಿಯ ದಿಸೆಯಲ್ಲಿ ಇದೊಂದು ಸಕಾರಾತ್ಮಕ ಪ್ರಗತಿಪರ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರತಿಯೊಂದರಲ್ಲೂ ರಾಜಕೀಯ:ರಾಜಕೀಯಕ್ಕೂ ಹಳಿಯಾಳಕ್ಕೂ ಬಿಡಿಸಲಾರದೂ ನಂಟು! ಇಲ್ಲಿ ರಾಜಕೀಯವು ಚುನಾವಣೆಗಷ್ಟೇ ಸೀಮಿತವಾಗದು. ಚುನಾವಣೆಗೆ ಆರಂಭಗೊಂಡ ರಾಜಕೀಯ ಮುಂದಿನ ಚುನಾವಣೆ ವರೆಗೂ ಮುಂದುವರಿಯುತ್ತದೆ. ಚುನಾವಣೆಯಲ್ಲಿ ಗೆಲುವು ದಕ್ಕಿಸಲು, ಎದುರಾಳಿಯನ್ನು ಹಣಿಯಲು ದ್ವೇಷದ ರಾಜಕಾರಣ ನಡೆದರೆ ಇತ್ತೀಚಿನ ವರ್ಷಗಳಲ್ಲಿ ಮಾಟ-ಮಂತ್ರದ ಹೊಸ ರಾಜಕಾರಣವು ಹೊಸದಾಗಿ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ.ಅಭಿವೃದ್ಧಿಗೆ ಯುವ ಮನಸ್ಸುಗಳಿರಲಿ:
ಹಾಗೆಯೇ ಹಿಂದಿನ ವರ್ಷಗಳಲ್ಲಿ ನೋಡಿದರೆ ಹಳಿಯಾಳ ಪಟ್ಟಣದ ರಾಜಕಾರಣದಲ್ಲಿ ಯುವಜನತೆಯ ಭಾಗವಹಿಸುವಿಕೆಯ ತುಂಬಾ ಕಡಿಮೆಯಾಗಿತ್ತು. ಹಳಿಯಾಳ ಪಟ್ಟಣದ ರಾಜಕೀಯ ಕ್ಷೇತ್ರದಲ್ಲಿರುವ ಸರಾಸರಿ ಪ್ರಾಯ ಐವತ್ತರಿಂದ-ಅರವತ್ತು, ಎಪ್ಪತ್ತರ ಆಸುಪಾಸಿನಲ್ಲಿದೆ. ಈ ಪ್ರಾಯದವರು ಮಾಡಿರುವ ಹಳಿಯಾಳ ಪಟ್ಟಣದ ಅಭಿವೃದ್ಧಿ ಅಥವಾ ಹಳಿಯಾಳ ಪಟ್ಟಣದ ಅಭಿವೃದ್ಧಿಯ ಬಗ್ಗೆಯಿರುವ ಕಾಳಜಿಯನ್ನು ನೋಡಿರುವ ಹಳಿಯಾಳಕ್ಕೆ ನಿರಾಶೆ, ಅಸಮಾಧಾನವಿರುವುದು ಕಂಡು ಬರುತ್ತಿದೆ. ಈಗ ಹಳಿಯಾಳ ಪಟ್ಟಣದ ಅಭಿವೃದ್ಧಿ ಹಿತದೃಷ್ಟಿಯಿಂದ ಯುವಶಕ್ತಿಯನ್ನು ತೊಡಗಿಸಬೇಕು ಎಂಬ ವಿಚಾರಧಾರೆ ಕೇಳಿ ಬರುತ್ತಿದೆ. ಪೌರಸಂಸ್ಥೆಗಳ ಮೀಸಲಾತಿ ಘೋಷಣೆಯಾದ ಆನಂತರ ಈ ವಿಚಾರಧಾರೆಗೆ ಭಾರಿ ಬಲಬಂದಿದೆ. ಬದಲಾವಣೆ ಗಾಳಿ:ಹಳಿಯಾಳ ಪಟ್ಟಣದಲ್ಲಿ ಬೆಳೆದ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳು, ಇಲ್ಲಿನ ರಾಜಕಾರಣವು ಅಪರಾಧ ಪ್ರವೃತ್ತಿಯುಳ್ಳವರಿಗೆ ನೀಡುವ ಆದ್ಯತೆಯನ್ನು ಕಂಡಿರುವ ಇಲ್ಲಿನ ಯುವಮನಸ್ಸುಗಳು ಈ ಅನಿಷ್ಟಗಳಿಗೆ ವಿರಾಮ ಹಾಕಲು ಈಗ ಸದ್ದಿಲ್ಲದೇ ಕಾರ್ಯ ಆರಂಭಿಸಿವೆ. ಹಳಿಯಾಳ ಪಟ್ಟಣದ ರಾಜಕಾರಣ ಗಮನಿಸಿದಾಗ ಇಲ್ಲಿ ವಿದ್ಯಾವಂತ ಸುಶಿಕ್ಷಿತ ಯುವಮನಸ್ಸುಗಳ ಸಹಭಾಗಿತ್ವದ ಕೊರತೆಯೂ ಎದ್ದು ಕಾಣುತ್ತದೆ. ಹಳಿಯಾಳದ ರಾಜಕಾರಣಕ್ಕೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿಲ್ಲ ಎಂಬ ಕುಹಕದ ಮಾತುಗಳಿಗೆ ಉತ್ತರವೆಂಬಂತೆ ಈಗ ಹಳಿಯಾಳ ಪಟ್ಟಣದ ರಾಜಕಾರಣದಲ್ಲಿ ನಿಧಾನವಾಗಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ನಯನ ಹೆಗಡೆ:
ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಈಗ ಹಳಿಯಾಳ ಪಟ್ಟಣದ ಅಭಿವೃದ್ಧಿಗಾಗಿ ಕೈಜೋಡಿಸಲು ಹೆಜ್ಜೆಯಿಡುತ್ತಿದ್ದಾರೆ. ಈ ದಿಸೆಯಲ್ಲಿ ಇಲ್ಲಿನ ಯುವಸ್ನೇಹಿತರ ಬಳಗವು ಹೆಗಡೆ ಕುಟುಂಬದ ಕುಡಿ ನಯನ ಹೆಗಡೆ ಹೆಸರನ್ನು ಮುಂದೆ ಮಾಡುವ ಮೂಲಕ ತನ್ನ ಮೊದಲ ದಾಳವನ್ನು ಬೀಸಿದೆ. ನಯನ ಹೆಗಡೆ ವಿಪ ಮಾಜಿ ಸದಸ್ಯ, ಹಿರಿಯ ರಾಜಕಾರಣಿ ವಿ.ಡಿ. ಹೆಗಡೆ ಅವರ ಮೊಮ್ಮಗ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಅವರ ಪುತ್ರ. ಎಂಜಿನಿಯರಿಂಗ್ ಪದವೀಧರರಾಗಿರುವ ನಯನ ಅಭಿವೃದ್ಧಿಯ ಬಗ್ಗೆ ಹೊಸ ವಿಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ನಯನ ಹೆಸರು ಈಗ ಮೂಂಚೂಣಿಗೆ ಬಿಟ್ಟಿರುವ ಯುವಸ್ನೇಹಿತರ ಬಳಗವು ಹಳಿಯಾಳ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ಸ್ಪರ್ಧಿಸಲು ಆಸಕ್ತಿಯುಳ್ಳ ವಾರ್ಡವಾರು ಪದವೀಧರ ಸುಶಿಕ್ಷಿತ ಯುವಕ ಮತ್ತು ಯುವತಿಯರ ಬಳಗವನ್ನೇ ಹೊಂದಿದೆ ಎಂದು ಹೇಳಿದೆ.ರಾಜಕೀಯದಲ್ಲಿ ನೈತಿಕತೆ, ಪಾರದರ್ಶಕತೆ ಮತ್ತು ಹೊಸ ಚಿಂತನೆ ತರಲು ಸುಶಿಕ್ಷಿತ ಯುವಕರ ಪಾತ್ರ ಬಹುಮುಖ್ಯವಾಗಿದೆ. ಹಳಿಯಾಳ ಅಭಿವೃದ್ಧಿಯ ದಿಸೆಯಲ್ಲಿ ಸುಶಿಕ್ಷಿತ ಯುವಸಮೂಹವು ಮುಂದಾಗಿರುವುದು ಸ್ವಾಗತಾರ್ಹ. ಹಳಿಯಾಳ ಅಭಿವೃದ್ಧಿ ದೃಷ್ಟಿಯಿಂದ ಈ ಸುಶಿಕ್ಷಿತ ಮುಖಗಳಿಗೆ ನಮ್ಮ ಬೆಂಬಲವಿದೆ ಎಂದು ಕ್ರೀಡಾ ತರಬೇತುದಾರ ಉದಯ ಜಾಧವ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))