ಸಾರಾಂಶ
ಕಕ್ಕುಂದಕಾಡಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ. 8ರಿಂದ 10 ರ ವರೆಗೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಕ್ಕುಂದ ಕಾಡಿನ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏಪ್ರಿಲ್ 8ರಿಂದ 10 ರವರೆಗೆ ನಡೆಯಲಿದೆ.ಕಕ್ಕುಂದ ಕಾಡು ಲಕ್ಷ್ಮಿ ವೆಂಕಟೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ 8 ರಂದು ಮಂಗಳವಾರ ಬೆಳಗ್ಗೆ ಮಹಾಪೂಜೆ, ಬಳಿಕ ಧ್ವಜಾರೋಹಣ, ದೀಪಾರಾಧನೆ, ಮಹಾಪೂಜೆ, ದೇವರ ಬಲಿ ನಡೆಯಲಿದೆ. ಏ. 9 ರಂದು ಬುಧವಾರ ದೇವರ ದರ್ಶನ ಬಲಿ, ಮಹಾಭಿಷೇಕ, ವಿಶೇಷ ಸೇವೆಗಳು ಮಧ್ಯಾಹ್ನ ಮಹಾಪೂಜೆ ಹಾಗೂ ದೇವರ ಬಲಿ ನಡೆಯಲಿದೆ. ಎರಡು ದಿನಗಳು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಏಪ್ರಿಲ್ 9 ರಂದು ದೇವರ ಮೆರವಣಿಗೆಯಲ್ಲಿ ಸಾಗಿ ಪವಿತ್ರ ಕಾವೇರಿ ನದಿಯಲ್ಲಿ ತೀರ್ಥ ಸ್ನಾನ ಮಾಡಿ ದೇವಾಲಯಕ್ಕೆ ಹಿಂತಿರುಗಲಾಗುವುದು. ಬಳಿಕ ದೇವರ ದರ್ಶನ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ. ಏಪ್ರಿಲ್ 10 ರಂದು ಗುರುವಾರ ಶುದ್ಧ ನವಕ ಕಲಶ ಜರುಗಲಿದೆ ಎಂದು ಆಡಳಿತ ಮಂಡಳಿ ಪದಾಧಿಕಾರಿಗಳು ಕೋರಿದ್ದಾರೆ.