ಸಾರಾಂಶ
ಐಗೂರಿನ ಗುಳಿಗಪ್ಪ ಸ್ವಾಮಿ ದೇವಾಲಯದ 33ನೇ ವಾರ್ಷಿಕ ಪೂಜೆಯು ಭಕ್ತರ ಸಹಕಾರದಲ್ಲಿ ನೆರವೇರಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಐಗೂರಿನ ಶ್ರೀ ಗುಳಿಗಪ್ಪಸ್ವಾಮಿ ಮತ್ತು ಶ್ರೀ ವನದುರ್ಗಿ ದೇವಾಲಯದ 33ನೇ ವಾರ್ಷಿಕ ಪೂಜೆಯು ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದಲ್ಲಿ ಮಂಗಳವಾರ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಬೆಳಗ್ಗೆ ಮೆರವಣಿಗೆಯೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡಿತು. ನಂತರ ಗಣಪತಿಹೋಮ, ದೇವರಿಗೆ ಅಭಿಷೇಕ ನಡೆದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನೆರವೇರಿತು. ನಂತರ ಸಮಸ್ತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.-------------------------------
ಕರವೇ ಪ್ರವೀಣ್ ಶೆಟ್ಟಿ ಬಣದ ವಿವಿಧ ಸಮಿತಿಗಳಿಗೆ ಆಯ್ಕೆಕನ್ನಡಪ್ರಭವಾರ್ತೆ ಸೋಮವಾರಪೇಟೆಕನ್ನಡಪರ ಹೋರಾಟಕ್ಕಾಗಿ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ-ಪ್ರವೀಣ್‌ಶೆಟ್ಟಿ ಬಣವನ್ನು ಬಲಿಷ್ಠಗೊಳಿಸಲು ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಹೇಳಿದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ವಸಂತ್ ಆಚಾರ್ಯ, ಕುಶಾಲನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಶಶಿಕಲಾ, ಸೋಮವಾರಪೇಟೆ ಅಧ್ಯಕ್ಷರಾಗಿ ಲತಾ, ಯುವ ಘಟಕದ ಅಧ್ಯಕ್ಷರಾಗಿ ಪ್ರದೀಪ್‌ಶೆಟ್ಟಿ, ಶನಿವಾರಸಂತೆ ಹೋಬಳಿ ಅಧ್ಯಕ್ಷರಾಗಿ ಕಿಶೋರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ ರೈ, ಜಿಲ್ಲಾ ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಪರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ವಿನೋದ್, ಸಂ.ಕಾರ್ಯದರ್ಶಿಯಾಗಿ ಸಾದಿಕ್ ಮೋಣು ಹಾಗು ವಿವಿಧ ಘಟಕಗಳಿಗೆ ಶಬ್ಬೀರ್‌ಶೇಖ್, ಪುನಿತ್, ರವಿ, ಭರತ್, ವಿನಯ್, ಹರೀಶ್ ಆಯ್ಕೆ ಆಗಿದ್ದಾರೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.ರಕ್ಷಣಾ ವೇದಿಕೆ ವಿರುದ್ಧ, ಮೈಸೂರಿನ ವ್ಯಕ್ತಿಯೋರ್ವ ಸಲ್ಲದ ಆರೋಪ ಮಾಡಿದ್ದಾರೆ. ನಾವು ಕನ್ನಡ ಪರ ಹೋರಾಟಗಾರರಾಗಿದ್ದು, ಕರವೇ ಸದಸ್ಯರೆಲ್ಲರೂ ನಿಷ್ಠೆಯಿಂದ ಅನೇಕ ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಆಧಾರವಿಲ್ಲದೆ ಆರೋಪ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಕರವೇ ಪದಾಧಿಕಾರಿಗಳಾದ ವಸಂತ್ ಆಚಾರ್ಯ, ರವೀಶ್ ಕಲ್ಕಂದೂರು, ಮಂಜುನಾಥ್, ನಿತನ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))