ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನ

| Published : Jan 19 2024, 01:48 AM IST

ಸಾರಾಂಶ

ಈ ಬಾರಿ ಹಂಪಿ ಉತ್ಸವ ಕಳೆಗಟ್ಟಿಸಲು ಜಿರಾಫೆ ಆಗಮನವಾಗಿದೆ. ಈ ಜೋಡಿ ಜಿರಾಫೆಗಳು ಈಗ ಮೃಗಾಲಯದಲ್ಲಿ ಆಕರ್ಷಣೆ ಕೇಂದ್ರವಾಗಿವೆ.

ಹೊಸಪೇಟೆ: ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನವಾಗಿದೆ. ಕಳೆದ ವರ್ಷ ಹಂಪಿ ಉತ್ಸವದ ವೇಳೆಗೆ ಬಿಹಾರದ ಪಾಟ್ನಾದಿಂದ ಹೆಣ್ಣು ಜಿರಾಫೆ ತರಲಾಗಿತ್ತು. ಈಗ ಮೈಸೂರು ಮೃಗಾಲಯದಿಂದ ಗಂಡು ಜಿರಾಫೆ ಅತಿಥಿಯಾಗಿ ಬಂದಿದೆ.

ಈ ಬಾರಿ ಹಂಪಿ ಉತ್ಸವ ಕಳೆಗಟ್ಟಿಸಲು ಜಿರಾಫೆ ಆಗಮನವಾಗಿದೆ. ಈ ಜೋಡಿ ಜಿರಾಫೆಗಳು ಈಗ ಮೃಗಾಲಯದಲ್ಲಿ ಆಕರ್ಷಣೆ ಕೇಂದ್ರವಾಗಿವೆ. ಶಂಕರ್ ಎಂಬ ಗಂಡು ಜಿರಾಫೆ ಮೂರು ವರ್ಷದ್ದಾಗಿದ್ದು, ಮೈಸೂರು ಮೃಗಾಲಯದಿಂದ ತರಲಾಗಿದೆ. ಪಾಟ್ನಾದಿಂದ ತಂದಿರುವ ಹೆಣ್ಣು ಜಿರಾಫೆ ನಾಲ್ಕು ವರ್ಷದ್ದಾಗಿದೆ. ಈಗ ಜಿರಾಫೆ ಜೋಡಿಗಳು ಕೇಂದ್ರಬಿಂದುವಾಗಿವೆ. ಈಗಾಗಲೇ ವಿವಿಧ ಪ್ರಾಣಿ, ಪಕ್ಷಿಗಳನ್ನು ಹೊಂದಿರುವ ಮೃಗಾಲಯ, ಪ್ರವಾಸಿಗರನ್ನು ಸೆಳೆಯುತ್ತಿದೆ.