ಸಾರಾಂಶ
ಮಹಾಭಾರತದಲ್ಲಿ ಪಾಂಡವರ ಪರ ನಿಂತ ಶ್ರೀಕೃಷ್ಣ ಕಡೆಯವರೆವಿಗೂ ಅವರೊಂದಿಗೆ ಸ್ನೇಹದೊಂದಿಗೆ ಇದ್ದು, ಧರ್ಮಪಾಲನೆ ಮಾಡಿದರು. ಆತನ ಸ್ನೇಹ ಎಲ್ಲರಿಗೂ ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ವಿಷ್ಣುವಿನ ಮತ್ತೊಂದು ಅವತಾರವಾದ ಶ್ರೀಕೃಷ್ಣ ಸ್ನೇಹದ ಪ್ರತೀಕ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಬಿ.ಕೆ.ಗೌರಿಅಕ್ಕ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀಜಯಮ್ಮ ಮಾರೇಗೌಡ ಕನ್ವೆನ್ಷನ್ ಹಾಲ್‌ನಲ್ಲಿ ಭಾರತ ವಿಕಾಸ ಪರಿಷದ್ ಬೌದ್ಧಾಯನ ಶಾಖೆ ಆಶ್ರಯದಲ್ಲಿ ನಡೆದ ಶ್ರೀಕೃಷ್ಣವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿಕ ಪ್ರತಿ ಬಿಂಬಿಸುವ ವೇಷಭೂಷಣ ತೋರಿಸಿದರೆ ಚಿಂತಿಸುವ ಮನೋಜ್ಞಾನ ಹೆಚ್ಚಾಗಲಿದೆ ಎಂದರು.
ಭಾರತ ವಿಕಾಸ ಪರಿಷದ್‌ನ ಮೈಸೂರು ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ಮಾತನಾಡಿ, ಮಹಾಭಾರತದಲ್ಲಿ ಪಾಂಡವರ ಪರ ನಿಂತ ಶ್ರೀಕೃಷ್ಣ ಕಡೆಯವರೆವಿಗೂ ಅವರೊಂದಿಗೆ ಸ್ನೇಹದೊಂದಿಗೆ ಇದ್ದು, ಧರ್ಮಪಾಲನೆ ಮಾಡಿದರು. ಆತನ ಸ್ನೇಹ ಎಲ್ಲರಿಗೂ ಮಾದರಿಯಾಗಿದೆ ಎಂದರು.ಪರಿಷದ್ ಭಾರತೀನಗರ ಶಾಖೆ ಅಧ್ಯಕ್ಷ ಶಿವಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಆರ್.ಕೆ.ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಆನಂದ್, ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ್, ಸೆಂಟರ್ ಮೆರಿಸ್ ಶಾಲೆ ಹಿಂದಿ ಭಾಷೆ ಶಿಕ್ಷಕಿ ಎಚ್.ಕೆ.ಶೋಭಾ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ 10 ಮಕ್ಕಳಿಗೆ ವಿಶೇಷ ಬಹುಮಾನ, ಉಳಿದ ಮಕ್ಕಳಿಗೆ ಸಮಧಾನಕರ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಗ್ರಾಪಂ ಪಿಡಿಒ ಎನ್.ಸುಧಾ, ಸಮಾಜ ಸೇವಕ ಮಧುಸೂಧನ್ (ದೊಂದಾಸ್), ಕಾರ್ಯದರ್ಶಿ ಶಿವರಾಮು, ಸದಸ್ಯರಾದ ದಾಸೇಗೌಡ, ಜಿ.ಕೆ.ವೆಂಕಟೇಶ್, ಶೆಟ್ಟಹಳ್ಳಿ ಬೋರಯ್ಯ, ವೈ.ಬಿ.ಶ್ರೀಕಂಠಸ್ವಾಮಿ, ಗಿರೀಶ್, ನಾಗರಾಜು, ಎ.ಎಲ್.ರಮೇಶ್, ಜವರೇಗೌಡ, ಮಂಚೇಗೌಡ, ರವೀಂದ್ರ, ಸುಧಾಕರಶೆಟ್ಟಿ, ಪತ್ರಕರ್ತ ಅಣ್ಣೂರು ಸತೀಶ್, ನಾಗರಾಜಚಾರಿ, ಸಿದ್ದರಾಜು, ವೆಂಕಟೇಶ್, ಎಚ್.ಜಿ.ನಾಗರಾಜು, ಗಾಯತ್ರಿ, ಸುಶೀಲಮ್ಮ, ಪುಟ್ಟರಾಮರಾಜೇಅರಸು, ರಾಜೇಗೌಡ, ಮೆಣಸಗೆರೆ ರಮೇಶ್, ತಿಟ್ಟಮಾರನಹಳ್ಳಿ ವೆಂಕಟೇಶ್ ಸೇರಿದಂತೆ ಹಲವರಿದ್ದರು.