ಶಿವಗಂಗೆ ತಪ್ಪಲಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ

| Published : Nov 27 2024, 01:07 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಸೀಗೇಪಾಳ್ಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ಶಿವಗಂಗೆ ಬೆಟ್ಟದ ಅಕ್ಕಪಕ್ಕದಲ್ಲಿ ಚಿರತೆಗಳ ಉಪಟಳ ಹೆಚ್ಚಿದ್ದು, ಜಾನುವಾರಗಳ ಜೊತೆಗೆ ಮನುಷ್ಯರನ್ನು ಬಲಿ ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ತೀವ್ರಗೊಂಡಿದೆ. ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಮುದ್ವೀರೇಶ್ವರ ದೇವಾಲಯದ ಬಳಿಯ ಇರಿಸಿದ್ದ ಬೋನಿಗೆ ಎಂಟೊಂಬತ್ತು ವರ್ಷದ ಹೆಣ್ಣು ಚಿರತೆ ಮಂಗಳವಾರ ಬೆಳಗ್ಗೆ ಬಿದ್ದಿದೆ. ಆರ್‌ಎಫ್ ಮಂಜುನಾಥ್ ನೇತೃತ್ವದಲ್ಲಿ ೬೦ಕ್ಕೂ ಹೆಚ್ಚು ಸಿಬ್ಬಂದಿ ಒಂಬತ್ತು ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬನ್ನೇರುಘಟ್ಟ ಪಶು ವೈದ್ಯ ಡಾ.ಕಿರಣ್ ಬೋನಿಗೆ ಬಿದ್ದ ಚಿರತೆಗೆ ಅರವಳಿಕೆ ನೀಡಿ, ಬನ್ನೇರುಘಟ್ಟಕ್ಕೆ ಸಾಗಿಸಲಾಯಿತು. ಅರಣ್ಯಾಧಿಕಾರಿಗಳಾದ ಡಿಸಿಎಫ್ ಸರೀನಾ ಸಿಕ್ಕಲಿಗಾರ್, ಎಸಿಎಫ್ ನಿಜಾಮುದ್ದೀನ್, ಆರ್‌ಎಫ್‌ಒ ಮಂಜುನಾಥ್ ಹಾಜರಿದ್ದರು.