ಮತ್ತೇ ಆರ್‌ವಿಎನ್‌ ‘ಕೈ’ ಹಿಡಿದ ಮತದಾರ

| Published : Jun 05 2024, 12:30 AM IST

ಮತ್ತೇ ಆರ್‌ವಿಎನ್‌ ‘ಕೈ’ ಹಿಡಿದ ಮತದಾರ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕರನ್ನು ಅಭಿಮಾನಿಗಳು ಎತ್ತಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ (ಶೋರಾಪುರ) ಮತದಾರರು ವಿಧಾನಸಭೆ ಉಪ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್‌ "ಕೈ " ಹಿಡಿದಿದ್ದಾರೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ರಾಜಾ ವೆಂಕಟಪ್ಪ ನಾಯಕ್ (ಆರ್‌ವಿಎನ್‌)ರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌ವಿಎನ್‌ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ, ಮಾಜಿ ಸಚಿವ ಬಿಜೆಪಿ ನರಸಿಂಹ ನಾಯಕ (ರಾಜೂಗೌಡ) ವಿರುದ್ಧ ಸುಮಾರು 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಸುರಪುರ ಕಾಂಗ್ರೆಸ್‌ ಪಾಳೆಯದಲ್ಲಿ ಹರ್ಷ ಮೂಡಿದ್ದು, ವಿಜಯೋತ್ಸಾಹ ಮುಗಿಲು ಮುಟ್ಟಿದೆ. ಗೆಲುವು ಕಂಡ ರಾಜಾ ವೇಣು ಗೋಪಾಲ ನಾಯಕ ಅವರು ಖುಷಿಯ ಮಧ್ಯೆಯೂ ತಂದೆ ಆರ್‌ವಿಎನ್‌ ನೆನೆದು ಭಾವುಕರಾದರು. ಸುರಪುರ ನಾಯಕರ ಜಿದ್ದಾಜಿದ್ದಿ ಈ ಚುನಾವಣೆಯ ಭಾರಿ ಕುತೂಹಲ ಕೆರಳಿಸಿತ್ತು.

2023ರ ಚುನಾವಣೆಯಲ್ಲಿ ದಿ.ರಾಜಾ ವೆಂಕಟಪ್ಪ ನಾಯಕ ವಿರುದ್ಧ ಸುಮಾರು 25 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದ ಬಿಜೆಪಿ ರಾಜೂಗೌಡರು, ಇದೀಗ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ವಿರುದ್ಧವೂ ಸೋಲು ಕಂಡಿದ್ದಾರೆ. ಈ ಹಿಂದೆ ನಡೆದಿದ್ದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜಾ ವೇಣುಗೋಪಾಲ ನಾಯಕ, ಈಗ ಶಾಸಕ ಸ್ಥಾನಕ್ಕೆ ಭಾರಿ ಮತಗಳ ಅಂತರದಲ್ಲಿ ಆಯ್ಕೆಯಾಗಿರುವುದು ವಿಶೇಷ.

ಕಾಂಗ್ರೆಸ್‌ ನಿಷ್ಠ ಮನೆತನದ ದಿ.ರಾಜಾ ವೆಂಕಟಪ್ಪ ನಾಯಕ ಅವರಿಗೆ ಸಿದ್ದರಾಮಯ್ಯನವರ ಈ ಸರ್ಕಾರದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿಸಿ ನೇಮಿಸಲಾಗಿತ್ತು. ಆದರೆ, ದುರ್ವಿಧಿ ಅವರನ್ನು ಕೆಲವೇ ದಿನಗಳ (ಫೆ.15) ಅಂತರದಲ್ಲಿ ಬಲಿ ಪಡೆದಿತ್ತು. ಈ ಹಿನ್ನೆಲೆ ತೆರವಾದ ಸ್ಥಾನಕ್ಕೆ, ಮೇ 7ರಂದು ನಡೆದ ಲೋಕಸಭೆ ಚುನಾವಣೆ ಜೊತೆ ಜೊತೆಗೇ ಉಪ ಚುನಾವಣೆಯೂ ನಡೆದಿತ್ತು. 2ನೇ ಸುತ್ತಿನಿಂದಲೂ ಮುನ್ನಡೆ:

ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮತ ಎಣಿಕೆ ವೇಳೆ ಮೊದಲ ಸುತ್ತಿನಲ್ಲಿ ಕೇವಲ 14 ಮತಗಳ ಅಂತರದಿಂದ ಬಿಜೆಪಿ ರಾಜೂಗೌಡರು ಮುಂದಿದ್ದರೂ, ನಂತರ ಉಳಿದ 22 ಸುತ್ತುಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸುತ್ತ ಸಾಗಿತ್ತು. ಪ್ರತಿ ಸುತ್ತಿನಲ್ಲೂ ಸಾವಿರ, 2 ಸಾವಿರ, ಮೂರು ಸಾವಿರ, ನಾಲ್ಕು ಸಾವಿರ.. ಐದು. ಆರು... ಏಳು.. ಹೀಗೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ನಾಗಾಲೋಟ ಮುಂದುವರೆದಿತ್ತು.

23 ಸುತ್ತುಗಳ ಬಳಿಕ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ ಅವರು ಬಿಜೆಪಿ ರಾಜೂಗೌಡರಿಗಿಂತ 18,238 ಮತಗಳ ಅಂತರದಿಂದ ಮುಂದಿದ್ದರು. ಅಂಚೆ ಮತಗಳಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು (82 ಲೀಡ್‌) ದೊರೆತವು.

ಹಲವು ಸುತ್ತುಗಳ ನಂತರ ಕಾಂಗ್ರೆಸ್‌ ಗೆಲುವಿನತ್ತ ನಾಗಾಲೋಟ ಮುಂದುವರೆದಂತೆ, ರಾಜೂಗೌಡರು ಮತ ಎಣಿಕೆ ಕೇಂದ್ರದಿಂದ ಹೊರನಡೆದರು.

ತಂದೆಯ ಸಾವಿನ ನೋವನ್ನು ಮರೆಯಬೇಕೋ, ಗೆಲುವಿಗೆ ಸಂಭ್ರಮಿಸಬೇಕೋ ಗೊತ್ತಾಗುತ್ತಿಲ್ಲ. ನನ್ನ ಗೆಲುವಿಗೆ ಕಾರಣರಾದವರಿಗೆಲ್ಲ ಋುಣಿ. ತಂದೆ ದಿ. ರಾಜಾ ವೆಂಕಟಪ್ಪ ನಾಯಕ ಅವರು ಕಂಡ ಅಭಿವೃದ್ಧಿಯ ಕನಸು ಈಡೇರಿಸುವೆ. ಎಲ್ಲರ ವಿಶ್ವಾಸಕ್ಕೆ ತೆಗೆದುಕೊಳ್ಳುವೆ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವೆ.

ರಾಜಾ ವೇಣುಗೋಪಾಲ ನಾಯಕ, ವಿಜೇತ ಕಾಂಗ್ರೆಸ್‌ ಅಭ್ಯರ್ಥಿ, ಸುರಪುರ ವಿಧಾನಸಭೆ ಉಪ ಚುನಾವಣೆ.

ನನಗೆ ಗೆಲ್ಲುವ ನಿರೀಕ್ಷೆ- ವಿಶ್ವಾಸವಿತ್ತು. ಆದರೆ, ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಅಂದ್ಮೇಲೆ ಇದು ಸಹಜ. ಉಪ ಚುನಾವಣೆ ಯಾರೂ ಬಯಸಿದ್ದಲ್ಲ, ಅನಿವಾರ್ಯವಾಗಿತ್ತು. ತಂದೆ (ಆರ್ವಿಎನ್‌) ಅನುಕಂಪ ಹಾಗೂ ಸಿಎಂ ಸಿದ್ದರಾಮಯ್ಯನವರ ಗಾಳಿಗೆ ನಾವು (ಬಿಜೆಪಿ) ಸೋತಿದ್ದೇವೆ. ಕಾರ್ಯಕರ್ತರು ನನ್ನ ಪಾಲಿಗೆ ದೇವರಂತೆ ನಿಂತು ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾಗಳು. ಸದಾ ಅವರ ಜೊತೆ ಇರುವೆ.

ನರಸಿಂಹ ನಾಯಕ (ರಾಜೂಗೌಡ), ಪರಾಜಿತ ಬಿಜೆಪಿ ಅಭ್ಯರ್ಥಿ, ಸುರಪುರ ವಿಧಾನಸಭೆ ಉಪ ಚುನಾವಣೆ.

ಸುತ್ತುಗಳು : ಮತಗಳು :

1ನೇ ಸುತ್ತು : 14 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ

2ನೇ ಸುತ್ತು : 928 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

3ನೇ ಸುತ್ತು : 2,255 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

4ನೇ ಸುತ್ತು : 3,628 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

5ನೇ ಸುತ್ತು : 5,743 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

6ನೇ ಸುತ್ತು : 6,833 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

7ನೇ ಸುತ್ತು : 9,142 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

8ನೇ ಸುತ್ತು : 12,272 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

9ನೇ ಸುತ್ತು : 13,659 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

10ನೇ ಸುತ್ತು : 14,407 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

11ನೇ ಸುತ್ತು : 14,770 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

12ನೇ ಸುತ್ತು : 15,946 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

13ನೇ ಸುತ್ತು : 16,651 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

14ನೇ ಸುತ್ತು : 16,989 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

15ನೇ ಸುತ್ತು : 17,905 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

16ನೇ ಸುತ್ತು : 19,291 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

17ನೇ ಸುತ್ತು : 19,144 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

18ನೇ ಸುತ್ತು : 21,255 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

19ನೇ ಸುತ್ತು : 20,482 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

20ನೇ ಸುತ್ತು : 18,550 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

21ನೇ ಸುತ್ತು : 17,955 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

22ನೇ ಸುತ್ತು : 17,417 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

23ನೇ ಸುತ್ತು : 18,238 ಮತಗಳ ಅಂತರದಿಂದ ಕಾಂಗ್ರೆಸ್‌ ಮುನ್ನಡೆ

ಅಂಚೆ ಮತಗಳು : 82 ಕಾಂಗ್ರೆಸ್‌ಗೆ ಲೀಡ್‌