ಕರುಳಿನ ಕರೆಗೆ ಓಗೊಟ್ಟು ನಡೆಯುತ್ತಿರುವ ಈ ಹೋರಾಟದ 200ನೇ ದಿನಕ್ಕೆ ಪತ್ನಿ ಸಮೇತ ಆಗಮಿಸುವುದಾಗಿ ಘೋಷಿಸಿದರು

ಕೊಪ್ಪಳ: ಬಲ್ಡೋಟ ಕಾರ್ಖಾನೆ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಗರಸಭೆ ಬಳಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಭಾನುವಾರ 150ನೇ ಪೂರೈಸಿದೆ.ಹೋರಾಟಕ್ಕೆ 150ನೇ ದಿನದ ಭಾಗವಾಗಿ ನಗರದ ಅಶೋಕ ವೃತ್ತದಲ್ಲಿ ಬಸಾಪುರ ಕೆರೆ ಪರಭಾರೆ ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಡಳಿತ ಕ್ರಮ ಪ್ರತಿಭಟನಾಕಾರರು ವಿರೋಧಿಸಿದರು.

ಹೋರಾಟದ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಬಾಧಿತ ಗ್ರಾಮಗಳ ಭೇಟಿ ಮಾಡಿ, ಮಮ್ಮಲ ಮರುಗಿದರು. ನಮಗೆ ಒಂದು ಗಂಟೆ ಈ ಗ್ರಾಮಗಳಲ್ಲಿ ಓಡಾಡಲು ಕಷ್ಟ ಆಯ್ತು.ಇಡೀ ಬದುಕನ್ನು ಅವರು ಅಲ್ಲಿ ಹೇಗೆ ಸವೆಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಜನಪ್ರತಿನಿಧಿ, ಸರ್ಕಾರ ಅವರನ್ನು ಮತ್ತು ಮುಂದೆ ಅಂತದ್ದೇ ಪರಿಸ್ಥಿತಿಗೆ ಒಳಗಾಗುವ ಕೊಪ್ಪಳ, ಭಾಗ್ಯನಗರದ ಜನರನ್ನು ಕೇವಲ ಮತದಾರರು, ಬೆಂಬಲಿಗರು ಎಂದು ಭಾವಿಸದೆ ಮನುಷ್ಯರೆಂದು ಭಾವಿಸಬೇಕು ಎಂದು ಹೇಳಿದರು.

ಕರುಳಿನ ಕರೆಗೆ ಓಗೊಟ್ಟು ನಡೆಯುತ್ತಿರುವ ಈ ಹೋರಾಟದ 200ನೇ ದಿನಕ್ಕೆ ಪತ್ನಿ ಸಮೇತ ಆಗಮಿಸುವುದಾಗಿ ಘೋಷಿಸಿದರು.

ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಹೋರಾಟ ಎಷ್ಟೇ ದಿನ ನಡೆದರೂ ಮುನ್ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ಸರ್ಕಾರ ಬೇಗ ಜನರ ಗೋಳನ್ನು ಅರಿಯಬೇಕು. ಇಲ್ಲವಾದಲ್ಲಿ ಜನರೇ ಯಾರು ಏನೆಂದು ಅರಿತು ಆಲೋಚಿಸುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ನೀಡಿದರು. ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕೆರೆ ರಕ್ಷಣೆಗೆ ಇರುವ ಕಾನೂನು ಕುರಿತು ವಿವರಣೆ ನೀಡಿದರು. ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಡಾ.ಮಂಜುನಾಥ ಸಜ್ಜನ್, ಸಂತೋಷ ದೇಶಪಾಂಡೆ, ರಮೇಶ ತುಪ್ಪದ, ಶರಣು ಡೊಳ್ಳಿನ, ಶಿವಕುಮಾರ ಕುಕನೂರು, ಎನ್.ಕೆ‌.ಪಿ.ಎಂ‌. ಶಾಲೆಯ ಸ್ಥಾಪಕ ಬಿ.ಕೆ.ಪಟ್ಟಣಶೆಟ್ಟಿ, ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಸಾವಿತ್ರಿ ಮುಜುಮದಾರ, ಸರೋಜಾ ಬಾಕಳೆ, ಕಾವ್ಯ ಗಡಾದ, ಸೌಮ್ಯ ನಾಲ್ವಾಡ, ವಿದ್ಯಾ ನಾಲ್ವಾಡ, ಸಿ.ವಿ.ಜಡಿಯವರ, ಬಿ.ಜಿ. ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ, ಮಂಗಳೇಶ ರಾಠೋಡ್, ಹನುಮಂತ ಕಟಗಿ, ಸಂಗಪ್ಪ ವಾರದ,ಗ್ಯಾನೇಶ ಹ್ಯಾಟಿ, ರಾಜೇಶ ಸಸಿಮಠ, ಜಿ.ಎಸ್. ಕಡೇಮನಿ, ಗುಡದಪ್ಪ ಹಡಪದ, ನಾಗರಾಜ ಕುಷ್ಟಗಿ, ವೈ.ಸತ್ಯನಾರಾಯಣ, ಪಂಪಣ್ಣ ಚಿಂತಪಲ್ಲಿ, ಮಹಾಂತೇಶ ಕೊತಬಾಳ, ರವಿ ಕಾಂತನವರ, ವಿಜಯ ಮಹಾಂತೇಶ ಹಟ್ಟಿ, ಶ್ರೀನಿವಾಸ ಪಂಡಿತ ಮುಂತಾದವರಿದ್ದರು.