ನರ್ಸಿಂಗ್‌ ವಿದ್ಯಾರ್ಥಿಗಳಿಂದ ಬಾಲ ಕಾರ್ಮಿಕ ವಿರೋಧಿ ರ್‍ಯಾಲಿ

| Published : Jun 19 2024, 01:00 AM IST

ನರ್ಸಿಂಗ್‌ ವಿದ್ಯಾರ್ಥಿಗಳಿಂದ ಬಾಲ ಕಾರ್ಮಿಕ ವಿರೋಧಿ ರ್‍ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಬಾಲ ಕಾರ್ಮಿಕ ವಿರೋಧಿ ದಿನವನ್ನು ಬಾಗಲಕೋಟ ನಗರದ ಮೋಟಗಿ ಬಸವೇಶ್ವರ ದೇವಸ್ಥಾನದ ಹತ್ತಿರದ ಅಂಗನವಾಡಿ ಕೇಂದ್ರ ಸಂಖ್ಯೆ-67ರಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಬಾಲ ಕಾರ್ಮಿಕ ವಿರೋಧಿ ದಿನವನ್ನು ಬಾಗಲಕೋಟ ನಗರದ ಮೋಟಗಿ ಬಸವೇಶ್ವರ ದೇವಸ್ಥಾನದ ಹತ್ತಿರದ ಅಂಗನವಾಡಿ ಕೇಂದ್ರ ಸಂಖ್ಯೆ-67ರಲ್ಲಿ ಹಮ್ಮಿಕೊಳ್ಳಲಾಗಿತ್ತು.

ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯೆ ಜಯಶ್ರೀ ಇಟ್ಟಿ ಅವರು ರ್‍ಯಾಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರ್‍ಯಾಲಿಯಲ್ಲಿ ಬಾಲ ಕಾರ್ಮಿಕರ ವಿರೋಧಿ ಧ್ಯೇಯೋಕ್ತಿಗಳಾದ ದುಡಿಮೆ ಬೇಡ ಶಿಕ್ಷಣ ಬೇಕು, ನನ್ನ ಬಾಲ್ಯ ನನ್ನ ಹಕ್ಕು, ಪೆನ್ಸಿಲ್ ಹಿಡಿಯುವ ಕೈಗಳು ಸುತ್ತಿಗೆ ಹಿಡಿಯದಂತಾಗಲಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ಕೂಲಿಗಲ್ಲ ಎಂದು ಜನರಿಗೆ ಬಾಲ ಕಾರ್ಮಿಕ ವಿರೋಧಿ ಕುರಿತು ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಬೋರಮ್ಮ ಸನಗೇರಿ ಬಾಲ ಕಾರ್ಮಿಕರ ವಿರೋಧ ಪದ್ಧತಿ ಮತ್ತು ಮಾಹಿತಿಯನ್ನು ನೀಡಿದರು. ಅಲ್ಲದೇ, 2023ರ ಪ್ರಕಾರ 7.8 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ. ಅವರು ವಿಭಿನ್ನ ಕ್ಷೇತ್ರಗಳಲ್ಲಿ ಅಂದರೆ ಶೇ.62 ಹೊಲಗದ್ದೆ ಕೆಲಸದಲ್ಲಿ, ಶೇ.26 ಮನೆ ಗೆಲಸದಲ್ಲಿ, ಶೇ.10 ಕಟ್ಟಡ ಕೆಲಸಗಳಲ್ಲಿ, ಶೇ.2 ಮಕ್ಕಳು ಇತರೆ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರಿಗೆ ಬಾಲಕಾರ್ಮಿಕರು ಕೆಲಸಕ್ಕೆ ಹೋಗುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸ್ವಾತಿ ಲಿಂಗನಗೌಡರ್ ಉಪಸ್ಥಿತರಿದ್ದರು, ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಜಿಎನ್ಎಂ ದ್ವೀತಿಯ ವರ್ಷದ ಮತ್ತು ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.