21ರಿಂದ ಅನುಭಾವ ದರ್ಶನ ಪ್ರವಚನ ಮಾಲಿಕೆ

| Published : Jul 18 2024, 01:39 AM IST

ಸಾರಾಂಶ

ಜು. 5 ರಂದು ಸಂಜೆ 7 ಗಂಟೆಗೆ ಅನುಭಾನ ದರ್ಶನ ಪ್ರವಚನ ಮಾಲಿಕೆ ಮಂಗಲೋತ್ಸವ ಜರುಗಲಿದ್ದು, ಡಂಬಳ-ಗದಗ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು

ಮುಂಡರಗಿ: ಪಟ್ಟಣದ ತೋಂಟದಾರ್ಯ ಮಠದಲ್ಲಿ ಪ್ರತಿ ವರ್ಷದಂತೆ ಆಷಾಢ ಮಾಸದ ಅಂಗವಾಗಿ ಜು. 21 ರಿಂದ ಆ. 5ರವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ 8.30ರ ವರೆಗೆ ತೋಂಟದಾರ್ಯ ಮಠದ ಆವರಣದ ಪ್ರವಚನ ವೇದಿಕೆಯಲ್ಲಿ ಅನುಭಾದ ದರ್ಶನ ಪ್ರವಚನ ಮಾಲಿಕೆ ಜರುಗಲಿದೆ ಎಂದು ತೋಂಟದಾರ್ಯ ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 21 ರಂದು ಸಂಜೆ 7 ಗಂಟೆಗೆ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಲಿಂಗಮ್ಮನವರ ಸ್ಮರಣೋತ್ಸವದೊಂದಿಗೆ 57ನೇ ತ್ರೈಮಾಸಿಕ ಶಿವಾನುಭವ ಮತ್ತು ಅನುಭಾವ ದರ್ಶನ ಪ್ರವಚನ ಮಾಲಿಕ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಲಿದ್ದು, ಜ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಬಿಜೆಪಿ ಮುಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪುರಸಭೆ ಮಾಜಿ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಧಾರವಾಡ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಲಿಂಗರಾಜಗೌಡ ಪಾಟೀಲ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿಬಸಣ್ಣವರ, ರಾಷ್ಟ್ರಮಟ್ಟದ ಶ್ರೇಷ್ಠ ಗೋಡಂಬಿ ಬೆಳೆಗಾರ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳಗೆ ಶ್ರೀಮಠದಿಂದ ಗೌರವ ಸತ್ಮಾರ ಜರುಗಲಿದೆ.

ಜು. 22 ರಂದು ಹಾರೋಗೇರಿ ಶರಣರ ವಿಚಾರ ವಾಹಿನಿಯ ಐ.ಆರ್. ಮಠಪತಿ, ಜು. 23 ರಂದು ಸಿಂಧನೂರು ಬಸವ ಕೇಂದ್ರದ ವೀರಭದ್ರಪ್ಪ ಕುರಕುಂದಿ, ಜು. 24 ರಂದು ಶಿರಗುಪ್ಪಿ ಬಸವ ವನದ ಬಸವರಾಜಪ್ಪ ಶರಣರು, ಜು. 25 ರಂದು ಹಾಸನದ ಬೇಲೂರಿನ ವಿರಕ್ತ ಮಠದ ಮಹಾಂತಸ್ವಾಮೀಜಿ, ಜು. 26 ರಂದು ಬೆಳವಿ ವಿರಕ್ತ ಮಠದ ಶರಣಬಸವ ಸ್ವಾಮೀಜಿ, ಜು. 27 ರಂದು ಬೈಲೂರು ಶಿಕ್ಷಕ ವಿವೇಕ ಕುರಗುಂದ ಅನುಭಾವದ ನುಡಿಗಳನ್ನಾಡಲಿದ್ದಾರೆ.

ಜು. 28ರಂದು ಧಾರವಾಡ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಡಾ. ನಾಗೇಶ ಅಜ್ಜವಾಡಿಮಠ ಅನುಭಾವದ ನುಡಿಗಳನ್ನಾಡಲಿದ್ದು, ಹರ್ಲಾಪುರದ ಸಿವೈಸಿಡಿ ಕಲಾ ತಂಡದವರಿಂದ ಜನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜು. 29 ರಂದು ಧಾರವಾಡದ ಸಾಹಿತಿ ಸಂಗಮನಾಥ ಲೋಕಾಪುರ ಅನುಭಾವದ ನುಡಿಗಳನ್ನಾಡಲಿದ್ದಾರೆ. ಅಂದು ಇದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತಿದ್ದು, ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವರೂ ಪಾಲ್ಗೊಳ್ಳಲಿದ್ದಾರೆ.

ಜು. 30 ರಂದು ಗದಗನ ಅನುಭಾವಿ ಅಶೋಕ ಬರಗುಂಡಿ, ಜು. 31ರಂದು ಧಾರವಾಡದ ಬೀಜ ಘಟಕದ ಅಧಿಕಾರಿ ಡಾ. ಕುಮಾರ ಸಿ.ಟಿ. ಇನ್ನೊರ್ವ ಧಾರವಾಡದ ಡಾ. ಬಸವರಾಜ ಏಣಗಿ, ಆ. 1ರಂದು ಬೈಲಹೊಂಗಲದ ಶರಣೆ ಪ್ರೇಮಕ್ಕ ಅಂಗಡಿ, ಆ. 2 ರಂದು ಧಾರವಾಡ ಪಕ್ಷಿ ತಜ್ಞ ಪ್ರಕಾಶಗೌಡ ಪಾಟೀಲ, ಆ. 3ರಂದು ಧಾರವಾಡ ಪುರ ಟ್ರಸ್ಟಿನ ಅಧ್ಯಕ್ಷ ವಿಜಯಾನಂದ ದೊಡವಾಡ, ಆ. 4 ರಂದು ನವಲಗುಂದದ ಹಾಸ್ಯ ಕಲಾವಿದ ಶರಣು ಯಮನೂರು ಅನುಭಾವದ ನುಡಿಗಳನ್ನಾಡಲಿದ್ದಾರೆ.

ಕೊಟ್ರೇಶ ಅಂಗಡಿ ಮಾತನಾಡಿ, ಜು. 5 ರಂದು ಸಂಜೆ 7 ಗಂಟೆಗೆ ಅನುಭಾನ ದರ್ಶನ ಪ್ರವಚನ ಮಾಲಿಕೆ ಮಂಗಲೋತ್ಸವ ಜರುಗಲಿದ್ದು, ಡಂಬಳ-ಗದಗ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀಮಠದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಹತ್ತರಗಾ ಗೋಣಿರುದ್ರೇಶ್ವರ ಮಠದ ಗೋಣಿ ರುದ್ರಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಾವೇರಿ ನೂತನ ಸಂಸದ ಬಸವರಾಜ ಬೊಮ್ಮಾಯಿಗೆ ಗೌರವ ಸತ್ಕಾರ ಜರುಗಲಿದೆ.

ಅತಿಥಿಗಳಾಗಿ ಶಾಸಕರಾದ ಡಾ. ಚಂದ್ರು ಲಮಾಣಿ, ಎಸ್‌.ವಿ. ಸಂಕನೂರ, ಸಲೀಂಅಹ್ಮದ್, ಪುರಸಭೆ ಮಾಜಿ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ ಪಾಲ್ಗೊಳ್ಳಲಿದ್ದಾರೆ ಎಂದರು.

ನಿತ್ಯ ಪ್ರವಚನದ ನಂತರ ಮಹಾಪ್ರಸಾಧ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಚ್. ವಿರುಪಾಕ್ಷಗೌಡ, ಈಶಣ್ಣ ಬೆಟಗೇರಿ, ದೇವಪ್ಪ ರಾಮೇನಹಳ್ಲಿ, ಬಸಯ್ಯ ಗಿಂಡಿಮಠ, ಸದಾಶಿವಯ್ಯ ಕಬ್ಬೂರಮಠ, ಅಡಿವೆಪ್ಪ ಛಲವಾದಿ, ವಿರೇಂದ್ರ ಅಂಗಡಿ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಉಮೇಶ ಹಿರೇಮಠ, ಗಿರೀಶಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.