ಸಾರಾಂಶ
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಘಟಿಕೋತ್ಸವ ಇದಕ್ಕೆ ಸಾಕ್ಷಿಯಾಯಿತು. ಈ ಚಿನ್ನದ ಹುಡುಗಿಗೆ ತಂದೆಯ ಅಗಲಿಕೆಯ ನೋವಿದೆ, ತಾಯಿಯ ಸಹಕಾರ ಮಾತ್ರವಲ್ಲ, ಅಜ್ಜ-ಅಜ್ಜಿ ಮತ್ತು ದೊಡ್ಡಪ್ಪ-ದೊಡ್ಡಮ್ಮನ ಶ್ರಮದಿಂದ ಅನುಷಾ ತಕ್ಕನ್ನವರ ಇಂದು ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಭಾಗದದಲ್ಲಿ 4 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾಳೆ.
ವಿಶೇಷ ವರದಿ
ವಿಜಯಪುರ: ಯಾವುದನ್ನೂ ಕಷ್ಟ ಅಂದುಕೊಳ್ಳಬಾರದು. ಅಸಾಧ್ಯವಾದದ್ದು ಏನೂ ಇಲ್ಲ. ಇದಕ್ಕೆ ಪ್ರತಿಭೆಯನ್ನು ಓರೆಗಲ್ಲಿಗೆ ಹಚ್ಚಿ, ಅಜ್ಜ-ಅಜ್ಜಿಯರ ಕನಸನ್ನು ನನಸಾಗಿಸಿದ ಹೆಗ್ಗಳಿಕೆಗೆ ಪಾತ್ರಳಾಗಿರುವವಳು ಅನುಷಾ ತಕ್ಕನ್ನವರ.ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಘಟಿಕೋತ್ಸವ ಇದಕ್ಕೆ ಸಾಕ್ಷಿಯಾಯಿತು. ಈ ಚಿನ್ನದ ಹುಡುಗಿಗೆ ತಂದೆಯ ಅಗಲಿಕೆಯ ನೋವಿದೆ, ತಾಯಿಯ ಸಹಕಾರ ಮಾತ್ರವಲ್ಲ, ಅಜ್ಜ-ಅಜ್ಜಿ ಮತ್ತು ದೊಡ್ಡಪ್ಪ-ದೊಡ್ಡಮ್ಮನ ಶ್ರಮದಿಂದ ಅನುಷಾ ತಕ್ಕನ್ನವರ ಇಂದು ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಭಾಗದದಲ್ಲಿ 4 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾಳೆ.
ಬೆಳಗಾವಿ ಪಟ್ಟಣದ ಅನುಷಾ ತಕ್ಕನ್ನವರ ಆಹಾರ ಸಂಸ್ಕರಣೆ ವಿಷಯ ಆಯ್ದುಕೊಂಡು, ಸಾಧನೆ ಮಾಡಿ ಸಾಧಕರಲ್ಲಿ ಒಬ್ಬಳಾಗಿದ್ದಾಳೆ. ಪದವಿಯಲ್ಲಿ ವಿಜ್ಞಾನ ಆಯ್ದುಕೊಂಡ ಸ್ನಾತಕೋತ್ತರದಲ್ಲಿ ಆಹಾರ ಸಂಸ್ಕರಣೆ ವಿಷಯವನ್ನು ಸವಾಲಾಗಿ ಸ್ವೀಕರಿಸಿ, ಅದರಲ್ಲಿ ತನ್ನ ಪ್ರತಿಭೆಯನ್ನು ಓರೆಗಲ್ಲಿಗೆ ಹಚ್ಚಿ, ಅಜ್ಜ-ಅಜ್ಜಿಯರ ಕನಸನ್ನು ನನಸಾಗಿಸಿದ್ದಾಳೆ. ಅಗಲಿದ ತಂದೆ ನೆನಪಿನಲ್ಲಿ ಎಲ್ಲರ ಸಹಕಾರದಿಂದ ಕಲಿತ ಈಕೆಗೆ ಅಜ್ಜ- ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ಎಂದರೇ ಪಂಚ ಪ್ರಾಣವಂತೆ.ಪಿಯುಸಿ ಫೇಲ್, ಎಂಎನಲ್ಲಿ ಗೋಲ್ಡ್ ಮೆಡಲ್:
ಹಿಡಿದ ಕೆಲಸವನ್ನು ಛಲದಿಂದ ಸಾಧಿಸಿದ ಲಕ್ಷ್ಮೀ ಬಾಗಲಕೋಟ ಮೊದಲಿಂದಲೂ ಪತ್ರಿಕೋದ್ಯಮದೆಡೆಗೆ ಒಲವು ಹೊಂದಿದ್ದಾಕೆ. ಸ್ನಾತಕೋತ್ತರ ಪದವಿಯಲ್ಲಿ ನಿಷ್ಠೆಯಿಂದ ಕಲಿತು ಅಂತಿಮ ವರ್ಷದಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾಳೆ.ನಾಲ್ಕು ವರ್ಷಗಳ ಹಿಂದೆ ಲಕ್ಷ್ಮೀಗೆ ತಂದೆಯಿಲ್ಲ ಎಂಬುದನ್ನು ಸಹಿಸಲಾಗದೇ ನೊಂದಿದ್ದಳು. ಅದನ್ನೇ ಸವಾಲಾಗಿ ಸ್ವೀಕರಿಸಿ ಪಿಯುಸಿಯಲ್ಲಿ ಅನುತೀರ್ಣಳಾದರೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಈಗ ವಿದ್ಯುನ್ಮಾನ ಮಾಧ್ಯಮದಲ್ಲಿ ವಾರ್ತಾ ವಾಚನದಲ್ಲಿ ನೈಪುಣ್ಯತೆಯನ್ನು ಸಾಧಿಸಿರುವ ಲಕ್ಷ್ಮೀ, ತಾನು ಸಾಧಿಸಬಲ್ಲೆ ಎಂಬುದನ್ನು ನಿರೂಪಿಸಿದ್ದಾಳೆ.
ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಲಕ್ಷ್ಮೀ ಗೆ ಆಕೆಯ ತಾಯಿಯೇ ಸರ್ವಸ್ವ. ಅಣ್ಣ ಸಂಚಾರಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಂಗಿ ಗಂಗಾ ಇನ್ನೂ ಕಲಿಯುತ್ತಿದ್ದಾಳೆ.