ಮಹಾಲಿಂಗಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅರಿಶಿಣ ಖರೀದಿ ಕೇಂದ್ರ ಆರಂಭಕ್ಕೆ ಅವಕಾಶ ನೀಡಿದ್ದರಿಂದ ಎಪಿಎಂಸಿಗೆ ಮೂರೇ ತಿಂಗಳಲ್ಲಿ ಅರಿಶಿಣ ಮಾರಾಟದಿ₹ದ ₹೧೫ ಲಕ್ಷ ತೆರಿಗೆ ಹಣ ಸಂಗ್ರಹವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಎಪಿಎಂಸಿ ಆವರಣದಲ್ಲಿ ಅರಿಶಿಣ ಖರೀದಿ ಕೇಂದ್ರ ಆರಂಭಕ್ಕೆ ಅವಕಾಶ ನೀಡಿದ್ದರಿಂದ ಎಪಿಎಂಸಿಗೆ ಮೂರೇ ತಿಂಗಳಲ್ಲಿ ಅರಿಶಿಣ ಮಾರಾಟದಿ₹ದ ₹೧೫ ಲಕ್ಷ ತೆರಿಗೆ ಹಣ ಸಂಗ್ರಹವಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ ಸಂತಸ ವ್ಯಕ್ತಪಡಿಸಿದರು.ಸ್ಥಳೀಯ ಎಪಿಎಂಸಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಹಿಂದಿನ ೨ ತಿಂಗಳ ಖರ್ಚುವೆಚ್ಚಗಳ ಪರಿಶೀಲನೆ, ಭದ್ರತಾ ಸಿಬ್ಬಂದಿ ಸೇವೆಯ ದರಪಟ್ಟಿ ಪರಿಶೀಲನೆ, ವಿವಿಧ ಕಟ್ಟಡಗಳ ಹಂಚಿಕೆಯ ಅವಧಿ ಮತ್ತು ಲೈಸೆನ್ಸ್ ದರಗಳನ್ನು ತಾಂತ್ರಿಕ ಶಾಖೆಯಿಂದ ಪರಿಷ್ಕೃರಿಸುವ, ಹಮಾಲಿ ಲೈಸೆನ್ಸ್ ನವೀಕರಣ ಅರ್ಜಿ ಪರಿಶೀಲನೆ, ಸಮಿತಿಯಿಂದ ವಿದ್ಯುನ್ಮಾನ ತೂಕದ ಯಂತ್ರ ನಿರ್ಮಿಸುವ ಬಗ್ಗೆ, ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಅಳವಡಿಸುವ, ಮಾರುಕಟ್ಟೆ ಪ್ರಾಂಗಣದ ಟೋಟಲ್ ಸ್ಟೇಷನ್ ಉಪಕರಣದಿಂದ ಸರ್ವೇ ಮಾಡಿ ನೀಲನಕ್ಷೆ ತಯಾರಿಸುವ ವಿಷಯಗಳನ್ನು ಚರ್ಚಿಸಿ ಸಮ್ಮತಿಸಲಾಯಿತು.
ಮೂಲಸೌಲಭ್ಯ ಕಲ್ಪಿಸಲು ದಲಾಲ ವರ್ತಕರ ಆಗ್ರಹ:ಸಭೆಯ ಮಧ್ಯೆ ಆಗಮಿಸಿದ ದಲಾಲ ವರ್ತಕ ಸಂಘದ ಪದಾಧಿಕಾರಿಗಳು ಆವರಣದಲ್ಲಿ ಕುಡಿವ ನೀರು ಮತ್ತು ಸಮರ್ಪಕ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದರು. ಬೇಸಿಗೆ ಸಮಯದಲ್ಲಿ ವರ್ತಕರಿಗೆ, ಹಮಾಲರಿಗೆ, ರೈತರಿಗೆ ಸಮರ್ಪಕ ಕುಡಿಯಲು ನೀರು ಪೂರೈಕೆ ಆಗುತ್ತಿಲ್ಲ ಎಂದು ದೂರಿದರು. ಪುರಸಭೆಯವರು ಸ್ವಚ್ಛತಾ ತೆರಿಗೆ ವಸೂಲಿ ಮಾಡಿದರೂ ಎಪಿಎಂಸಿ ಆವರಣದಲ್ಲಿ ಕಸ ತೆರವುಗೊಳಿಸುವುದಿಲ್ಲ, ಚರಂಡಿ ಸ್ವಚ್ಛ ಮಾಡುವುದಿಲ್ಲ ಎಂದು ಆರೋಪಿಸಿದರು.
ಆವರಣದಲ್ಲಿ ರಾತ್ರಿ ಕುಡುಕರು ಪಾರ್ಟಿ ಮಾಡುತ್ತಿದ್ದಾರೆ. ಇದರಿಂದ ಆವರಣ ಗಲೀಜಾಗಿ ಗಬ್ಬೆದ್ದು ನಾರುತ್ತಿದೆ. ಅಲ್ಲಲ್ಲಿ ವಿದ್ಯುದ್ದೀಪ ಮತ್ತು ಸಿಸಿ ಕ್ಯಾಮೆರಾ ಅಳವಡಿಸಿ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ದಲಾಲ ವರ್ತಕ ಸಂಘದ ಅಧ್ಯಕ್ಷ ಷಣ್ಮುಖ ನಿಜಗುಣಿ ಆಗ್ರಹಿಸಿದರು.ಒಂದು ವಾರದಲ್ಲಿ ಎಲ್ಲವನ್ನೂ ಸುಧಾರಿಸುವುದಾಗಿ ಕಾರ್ಯದರ್ಶಿ ಭರವಸೆ ನೀಡಿದರು. ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ, ಉಪಾಧ್ಯಕ್ಷ ಎಸ್.ಎಂ. ಪಾಟೀಲ, ಇಲಾಖ ಪ್ರತಿನಿಧಿ ಬಿ.ಎಸ್. ಬಾವಿಹಾಳ, ಎಲ್.ಬಿ. ಲಮಾಣಿ, ಕಾರ್ಯದರ್ಶಿ ಡಿ.ಜಿ. ಪಟ್ಟಣಶೆಟ್ಟಿ, ದುಂಡಪ್ಪ ಜಾಧವ, ರಾಮನಗೌಡ ಉಳ್ಳಾಗಡ್ಡಿ, ಗುರುನಾಥ ಕಾಂಬಳೆ, ಹೊಳೆಬಸಪ್ಪ ತಳವಾರ, ಸಿದ್ದಪ್ಪ ಝಳಕಿ, ಸಿದ್ದಪ್ಪ ಸೋರಗಾವಿ, ಲಕ್ಷ್ಮೀಬಾಯಿ ಹುಂಡರಗಿ, ಮಹಾಂತೇಶ ಶಿರಹಟ್ಟಿ, ಬಾಪುಗೌಡ ಪಾಟೀಲ, ವಿನಯ ಚಮಕೇರಿ, ಶ್ರೀಶೈಲ ನುಚ್ಚಿ ಇದ್ದರು.೧೪ ಎಂಎಲ್‌ಪಿ ೨ಮಹಾಲಿಂಗಪುರದ ಎಪಿಎಂಸಿಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ದಲಾಲ ವರ್ತಕರು ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿದರು.