ಬೆಳ್ಳಾರಳ್ಳಿ ಗ್ರಾಮದ ಮಣಿ ಎಂಬಾತ ಇದೇ ಶಾಖೆಯಲ್ಲಿ 19 ಗ್ರಾಂ ತೂಕದ ಚಿನ್ನದ ಸರವನ್ನು ಅಡವಿಟ್ಟಿದ್ದು, ಬಿಡಿಸಿಕೊಂಡ ನಂತರ ತಾನು 22 ಗ್ರಾಂ ತೂಕದ ಚೈನ್‌ ಅಡ ಇಟ್ಟಿದ್ದೆ. 3 ಗ್ರಾಂ ಕಳವಾಗಿದೆ ಎಂದು ಶಾಖೆಯ ಸಿಬ್ಬಂದಿ ಜತೆ ಕ್ಯಾತೆ ತೆಗೆದು ಈ ಶಾಖೆಯಲ್ಲಿ ಭಾರೀ ಮೋಸ ನಡೆಯುತ್ತಿದೆ. ಇಲ್ಲಿ ಚಿನ್ನ ಅಡವಿಟ್ಟಿರುವ ಎಲ್ಲರೂ ಬಂದು ಪರಿಶೀಲನೆ ಮಾಡಿಸಿಕೊಳ್ಳಿಕೊಳ್ಳಿ ಎಂದು ವಿಡಿಯೋ ಮಾಡಿ ವಾಡ್ಸಾಪ್‌ ಗ್ರೂಪ್‌ಗಳಲ್ಲಿ ಅಪಪ್ರಚಾರ ಮಾಡಿದ್ದರು. ಜಿಲ್ಲೆಯ ಶನಿವಾರ ಸಂತೆಯ ಗುಳಗಳಲೆ ಕೆನರಾ ಬ್ಯಾಂಕ್‌ ಶಾಖೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದ ವ್ಯಕ್ತಿಯೊಬ್ಬ ಕಡೆಗೆ ಕ್ಷಮೆ ಕೇಳಿದ್ದಾನೆ.

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚೆಗೆ ಮೈಸೂರಿನ ಇಲವಾಲದ ಕೆನರಾ ಬ್ಯಾಂಕ್‌ನಲ್ಲಿ ನಡೆದ ಘಟನಾವಳಿಗಳನ್ನೇ ಮುಂದಿಟ್ಟುಕೊಂಡು ವ್ಯಕ್ತಿಯೊಬ್ಬ ಜಿಲ್ಲೆಯ ಶನಿವಾರ ಸಂತೆಯ ಗುಳಗಳಲೆ ಕೆನರಾ ಬ್ಯಾಂಕ್‌ ಶಾಖೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದ ವ್ಯಕ್ತಿಯೊಬ್ಬ ಕಡೆಗೆ ಕ್ಷಮೆ ಕೇಳಿದ್ದಾನೆ.

ಬೆಳ್ಳಾರಳ್ಳಿ ಗ್ರಾಮದ ಮಣಿ ಎಂಬಾತ ಇದೇ ಶಾಖೆಯಲ್ಲಿ 19 ಗ್ರಾಂ ತೂಕದ ಚಿನ್ನದ ಸರವನ್ನು ಅಡವಿಟ್ಟಿದ್ದು, ಬಿಡಿಸಿಕೊಂಡ ನಂತರ ತಾನು 22 ಗ್ರಾಂ ತೂಕದ ಚೈನ್‌ ಅಡ ಇಟ್ಟಿದ್ದೆ. 3 ಗ್ರಾಂ ಕಳವಾಗಿದೆ ಎಂದು ಶಾಖೆಯ ಸಿಬ್ಬಂದಿ ಜತೆ ಕ್ಯಾತೆ ತೆಗೆದು ಈ ಶಾಖೆಯಲ್ಲಿ ಭಾರೀ ಮೋಸ ನಡೆಯುತ್ತಿದೆ. ಇಲ್ಲಿ ಚಿನ್ನ ಅಡವಿಟ್ಟಿರುವ ಎಲ್ಲರೂ ಬಂದು ಪರಿಶೀಲನೆ ಮಾಡಿಸಿಕೊಳ್ಳಿಕೊಳ್ಳಿ ಎಂದು ವಿಡಿಯೋ ಮಾಡಿ ವಾಡ್ಸಾಪ್‌ ಗ್ರೂಪ್‌ಗಳಲ್ಲಿ ಅಪಪ್ರಚಾರ ಮಾಡಿದ್ದರು.

ಈ ಅಪಪ್ರಚಾರದ ವಿರುದ್ಧ ಶಾಖೆಯ ವ್ಯವಸ್ಥಾಪಕರಾದ ಮಹಾರಾಜನ್‌ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮಣಿಯನ್ನು ಕರೆದು ವಿಚಾರಣೆ ಮಾಡಿದಾಗ ದಾಖಲೆ ನೋಡುವಾಗ ನನಗೆ ಕಣ್ಣು ಮಂಜಾಗಿ ಸರಿಯಾಗಿ ಕಾಣದ ಕಾರಣ ನಾನು ಇಟ್ಟಿದ್ದು 22 ಗ್ರಾಂ ಎಂದುಕೊಂಡಿದ್ದೆ. ಹಾಗಾಗಿ ನನ್ನಿಂದ ತಪ್ಪಾಗಿದೆ ಎಂದು ಪೊಲೀಸರ ಮುಂದೆ ಕ್ಷಮಾಪಣೆ ಕೋರಿದ್ದಾರೆ.