ಕೈಕೊಟ್ಟ ಆ್ಯಪ್‌, ಸಮೀಕ್ಷೆದಾರ ಪರದಾಟ

| Published : Sep 26 2025, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆಯಾಗುತ್ತಿದೆ

ಕೊಪ್ಪಳ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿತ್ಯವೂ ಒಂದಿಲ್ಲೊಂದು ಸಮಸ್ಯೆಯಾಗುತ್ತಿದ್ದು, ಗುರುವಾರ ಆ್ಯಪ್ ಓಪನ್ ಆಗದೆ ಸಮೀಕ್ಷೆಗೆ ತೆರಳಿದ್ದವರು ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್‌ ಮನೆಗೆ ಮರಳಿದ್ದಾರೆ.

ಆ್ಯಪ್ ಸಮಸ್ಯೆಯಿಂದ ಮೊದಲ ದಿನದಿಂದಲೂ ಸಮಸ್ಯೆಯಾಗುತ್ತಲೇ ಇದ್ದು, ಸಮೀಕ್ಷೆ ಮಾಡುವ ಶಿಕ್ಷಕರು ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಆ್ಯಪ್‌ ಅಪ್ಡೇಟ್ ಮಾಡಲು ಮುಂದಾಗಿದ್ದರಿಂದ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ತೆರೆದುಕೊಳ್ಳಲೇ ಇಲ್ಲ.ಹೀಗಾಗಿ ಬಹುದೊಡ್ಡ ಸಮಸ್ಯೆಯಾಯಿತು.

ನೆಟ್ ವರ್ಕ್ ಸಮಸ್ಯೆ:ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆಯಾಗುತ್ತಿದೆ.ನಿಧಾನಗತಿಯಲ್ಲಿರುವುದರಿಂದ ಅಪ್ಲೋಡ್ ಮಾಡುವುದು ದೊಡ್ಡ ಸವಾಲು ಆಗಿದೆ. ಹೀಗಾಗಿ, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಸಮಿಕ್ಷೆ ಮಾಡುವವರನ್ನು ಕರೆದುಕೊಂಡು ಸುತ್ತಾಡುತ್ತಿರುವುದು ಕಂಡು ಬಂದಿದೆ. ಇಲ್ಲಿ ನೆಟ್ ವರ್ಕ್ ಬರುತ್ತದೆ, ಅಲ್ಲಿ ನೆಟ್ ವರ್ಕ್ ಬರುತ್ತದೆ ಎಂದು ಕರೆದುಕೊಂಡು ಸುತ್ತಾಡುವುದೇ ದೊಡ್ಡ ಸವಾಲು ಆಗಿದೆ. ಹೀಗಾಗಿ, ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

9930 ಅಪ್ಲೋಡ್ :ಗುರುವಾರ ಸಂಜೆಯವರೆಗೂ ಕೊಪ್ಪಳ ಜಿಲ್ಲಾದ್ಯಂತ 9930 ಸಮೀಕ್ಷೆಯಾಗಿದ್ದು, ರಾಜ್ಯದಲ್ಲಿ ಏಳನೇ ಸ್ಥಾನದಲ್ಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯೋರ್ವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸಂಜೆಯೂ ಸಹ ಸರ್ವೆ ನಡೆದಿದ್ದು, ಇನ್ನು ಈ ಸಂಖ್ಯೆ ಹೆಚ್ಚಳವಾಗುತ್ತದೆ. ಬೆಳಗ್ಗೆ ಸಮಸ್ಯೆಯಾಗಿದ್ದು ನಿಜ. ಮಧ್ಯಾಹ್ನದ ವೇಳೆಗೆ ಸರಿಪಡಿಸಿದ್ದಾರೆ. ಹೀಗಾಗಿ, ಸಮೀಕ್ಷೆ ನಡೆದಿದೆ ಎನ್ನುತ್ತಾರೆ.