ನಗರದ ಹೊರವಲಯದಲ್ಲಿರುವ ಲಿಂಗಾರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ನಗರದ ಹೊರವಲಯದಲ್ಲಿರುವ ಲಿಂಗಾರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಎಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಯಿತು.

ವಿದ್ಯಾ ಭಂಡಾರಿ ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, 8ನೇ ಮಹಾ ದಾಸೋಹ ಪೀಠಾಧಿಪತಿ, ಶರಣ ಬಸವೇಶ್ವರ ಸಂಸ್ಥಾನ, ಕಲಬುರಗಿ ಹಾಗೂ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಮತ್ತು ಕುಲಾಧಿಪತಿಗಳು, ಶರಣಬಸವ ವಿಶ್ವ ವಿದ್ಯಾಲಯ , ಕಲಬುರಗಿ, ಪೂಜ್ಯ ದೊಡ್ಡಪ್ಪ ಎಸ್. ಅಪ್ಪ 9ನೇ ಮಹಾ ದಾಸೋಹ ಪೀಠಾಧಿಪತಿ, ಶರಣ ಬಸವೇಶ್ವರ ಸಂಸ್ಥಾನ, ಕಲಬುರಗಿ ಅವರ ಆಶೀರ್ವಾದ ದೊಂದಿಗೆ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಬಸವರಾಜ ಎಸ್. ದೇಶಮುಖ್ ಅವರ ಮಾರ್ಗದರ್ಶನದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ನಿರ್ದೇಶಕ ನರಾದ ಶರಣಬಸಪ್ಪ ಎಸ್. ದೇಶಮುಖ ಹಾಗೂ ಬ್ರಿಮ್ಸ್‌ನ ಓಬಿಜಿ ಹೆಚ್ಓಡಿ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ.ಉಮಾ ದೇಶಮುಖ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿ, ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಿತಾ ಪಾಟೀಲ್, ಚನ್ನಬಸಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ ಪ್ರತಾಪುರ, ಗೀತಾ ಟೆಕ್ನಾಲಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರಾದ ವಿಕಾಸ ಯೆಟ್ಟೆಲ್ಲಾ, ನಮೃತಾ ಫಟಾಟೆ, ಸೇರಿದಂತೆ ವಿವಿಧ ಕಂಪನಿಗಳ ಪ್ರಮುಖರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಸ್ಪರ್ಧೆಗಳಲ್ಲಿ ಕಲಬುರಗಿ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗಣಕ ಯಂತ್ರ ವಿಭಾಗದ ಪ್ರೊಫೆಸರ್ ಬಸವರಾಜ ಸೇಡಂ, ಪ್ರಾ.ಜೀಬಾ ಭಕ್ತಿಯಾರ್ ಹಾಗೂ ಎಂಬಿಎ ವಿಭಾಗದ ಸಂಗಮೇಶ ಐನಾಪುರ್ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೀದರ್ ಸಿಲ್ವರ್ ಸ್ಟಾರ್ ರೋಟರಿ ಕ್ಲಬ್‌ನ ಅಧ್ಯಕ್ಷೆ ಸ್ಫೂರ್ತಿ ಧನ್ನೂರು ಅವರು ಸ್ಪರ್ಧೆಗಳ ಪ್ರಾಯೋಜಕರಾಗಿ ಉಪಸ್ಥಿತರಿದ್ದರು. ಪ್ಲೇಸ್ಮೆಂಟ್ ಟ್ರೈನಿಂಗ್ ಅಧಿಕಾರಿ ವಿವೇಕಾನಂದ ಬಿರಾದರ್, ಪ್ರೊ. ಸಹನಾ ಪಾಟೀಲ್, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.