ಸಾರಾಂಶ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ವೈ. ಎಸ್. ವೀರಭದ್ರಪ್ಪನವರು ಇತ್ತೀಚೆಗೆ ಕೇರಳ ರಾಜ್ಯದ ವಯನಾಡಿನ ಪ್ರದೇಶದಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಅನಾಥರಾದ ಇಬ್ಬರು ಮಕ್ಕಳನ್ನು ತಾವು ದತ್ತು ಪಡೆಯಲು ನೆರವು ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು. ಅನಾಥ ಮಕ್ಕಳ ಸೇವೆ ಮಾಡಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ವೈ. ಎಸ್. ವೀರಭದ್ರಪ್ಪನವರು ಇತ್ತೀಚೆಗೆ ಕೇರಳ ರಾಜ್ಯದ ವಯನಾಡಿನ ಪ್ರದೇಶದಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಅನಾಥರಾದ ಇಬ್ಬರು ಮಕ್ಕಳನ್ನು ತಾವು ದತ್ತು ಪಡೆಯಲು ನೆರವು ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.ಬೆಟ್ಟಗುಡ್ಡಗಳ ಕುಸಿತದಿಂದ ಉಂಟಾದ ಭಯಾನಕ ಭೂಕುಸಿತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಅಥವಾ ಕಷ್ಟಕ್ಕೆ ಸಿಲುಕಿದ ಕುಟುಂಬದಿಂದ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಪರ್ಕಿಸಿ ಹೆಣ್ಣಾಗಲಿ ಅಥವಾ ಗಂಡಾಗಲಿ ಯಾವುದಾದರೂ ಎರಡು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸಹಕರಿಸಬೇಕೆಂದು, ಎರಡೂ ಮಕ್ಕಳನ್ನು ಪ್ರೌಢಾವಸ್ಥೆಯವರೆಗೂ ಅವರ ಆಶ್ರಯ, ಆಹಾರ, ವಿದ್ಯೆ, ಉದ್ಯೋಗ ದೊರಕಿಸಲು ಖರ್ಚಾಗುವ ವೆಚ್ಚವನ್ನು ಸಂಪೂರ್ಣ ಭರಿಸಲು ಸಿದ್ಧವಿದ್ದು, ಅಂತಹ ಅನಾಥ ಮಕ್ಕಳ ಸೇವೆ ಮಾಡಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.