ಮಗುವಿನ ಹೃದಯ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ

| Published : Aug 15 2024, 01:56 AM IST

ಸಾರಾಂಶ

ಮಗುವಿನ ಶಸ್ತ್ರಚಿಕಿತ್ಸೆ ಸಹಾಯ ಮಾಡುವಂತೆ ಸೇವ್‌ಲೈಫ್‌ ಚಾರಿಟಬಲ್‌ ಟ್ರಸ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಿದ್ದಿ ಕಾಮತ್‌ (5 ವರ್ಷ) ಎಂಬ ಮಗುವಿನ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಸೇವ್‌ಲೈಫ್‌ ಚಾರಿಟೇಬಲ್‌ ಟ್ರಸ್ಟ್‌ ಮನವಿ ಮಾಡಿದೆ.

ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆ.12ರಂದು ರಿದ್ದಿ ಕಾಮತ್‌ ಆಸ್ಪತ್ರೆಗೆ ದಾಖಲಾಗಿದ್ದು, ಕಾಯಿಲೆಯಿಂದ ಗುಣಮುಖರಾಗಲು ಶಸ್ತಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ 3.5 ಲಕ್ಷ ರು. ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಿದ್ದಿ ಕಾಮತ್‌ ಅವರ ತಂದೆ ವಿ. ರಮೇಶ್‌ ಕಾಮತ್‌ ಧ್ವನಿ ಮತ್ತು ಬೆಳಕು (ಟೆಂಟ್‌ಹೌಸ್‌) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ಮಗುವಿನ ಚಿಕಿತ್ಸೆಗೆ ಕೇವಲ 80 ಸಾವಿರ ರು.ಗಳನಷ್ಟೇ ಹೊಂದಿಸಲು ಶಕ್ತರಾಗಿದ್ದಾರೆ. ಉಳಿದ 2.70 ಲಕ್ಷ ರು.ಗಳ ಅಗತ್ಯತೆಯಿದ್ದು, ಮಗುವಿನ ಶಸ್ತ್ರಚಿಕಿತ್ಸೆ ಸಹಾಯ ಮಾಡುವಂತೆ ಸೇವ್‌ಲೈಫ್‌ ಚಾರಿಟಬಲ್‌ ಟ್ರಸ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ರಸ್ಟ್‌, ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದೆ. ಇಚ್ಛೆಯುಳ್ಳ ದಾನಿಗಳು ಸೇವ್‌ ಲೈಫ್‌ ಚಾರಿಟಬಲ್‌ ಟ್ರಸ್ಟ್‌, ಬ್ಯಾಂಕ್‌ ಖಾತೆ ಸಂಖ್ಯೆ: 50200050195799, ಐಎಫ್‌ಎಸ್‌ಸಿ ಕೋಡ್‌: ಎಚ್‌ಡಿಎಫ್‌ಸಿ0003316 ಇಲ್ಲಿಗೆ ಹಣ ಸಂದಾಯ ಮಾಡುವಂತೆ ಕೋರಲಾಗಿದೆ.