ಪಪಂ ಮತದಾರರ ಪಟ್ಟಿ ಸಮರ್ಪಕ ಪರಿಷ್ಕರಣೆಗೆ ಮನವಿ

| Published : Nov 23 2025, 03:00 AM IST

ಸಾರಾಂಶ

ಪಟ್ಟಣ ಪಂಚಾಯಿತಿಯ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ರಾಜಕೀಯ ಹಸ್ತಕ್ಷೇಪ ಇಲ್ಲದೇ ಸಮರ್ಪಕವಾಗಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಟ್ಟಣ ಪಂಚಾಯಿತಿಯ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ರಾಜಕೀಯ ಹಸ್ತಕ್ಷೇಪ ಇಲ್ಲದೇ ಸಮರ್ಪಕವಾಗಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿಗೆ ಮನವಿ ಸಲ್ಲಿಸಲಾಯಿತು.

ಹಿಂದಿನ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಲೋಪವಾಗಿದೆ. ಕೋರ್ಟವಾಡದಲ್ಲಿ ವಾಸಿಸುವ ಮತದಾರರನ್ನು ಅಕ್ಬರಗಲ್ಲಿಗೆ, ಸಬಗೇರಿಯ ಮತದಾರರನ್ನು ಶಿವಾಜಿ ನಗರಕ್ಕೆ, ಇಸ್ಲಾಂ ಗಲ್ಲಿಯ ಮತದಾರರನ್ನು ಗೋಪಾಲಕೃಷ್ಣ ನಗರಕ್ಕೆ, ಗ್ರಾಮದೇವಿ ನಗರದ ಮತದಾರರನ್ನು ವಲೀಷಾಗಲ್ಲಿಗೆ ಹೀಗೆ ಎಲ್ಲಾ ವಾರ್ಡಗಳಲ್ಲಿ ಅಸಮರ್ಪಕವಾಗಿ ಮತದಾರರನ್ನು ಸೇರಿಸಲಾಗಿದೆ.

ವಾರ್ಡ್‌ವಾರು ವಿಗಂಡಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಈ ಬಾರಿಯಾದರೂ ಮತದಾರರ ಪಟ್ಟಿಯನ್ನು ರಾಜಕೀಯ ಹಸ್ತಕ್ಷೇಪವಿಲ್ಲದೇ ಸರಿಯಾಗಿ ಪರಿಷ್ಕರಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಈ ಸಂದರ್ಭ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಪದಾಧಿಕಾರಿಗಳಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ನಗರ ಮಹಾಪ್ರಧಾನ ಕಾರ್ಯದರ್ಶಿ ವಿನೋದ ತಳೇಕರ, ಪಕ್ಷದ ಪದಾಧಿಕಾರಿಗಳಾದ ದೊಂಡು ಪಾಟೀಲ, ವಿಠ್ಠು ಪಾಂಡ್ರಮೀಸೆ, ಗಜಾನನ ನಾಯ್ಕ, ವಿಶ್ವನಾಥ ಹಳೇಮನೆ, ರವಿ ದೇವಡಿಗ, ಮಂಜುನಾಥ ಹರಿಜನ ಉಪಸ್ಥಿತರಿದ್ದರು.ಇಂದು ವಿಶೇಷ ಕಾರ್ಯಾಗಾರ:

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪದವಿ ಪೂರ್ವ ಕಾಲೇಜು ಹಾಗೂ ಧಾರವಾಡದ ಪ್ರತಿಷ್ಠಿತ ಐ.ಎಸ್.ಒ ಪ್ರಮಾಣಿತ ಶೈಕ್ಷಣಿಕ ಸಲಹಾ ಕಂಪನಿ, ನಿರ್ಮಲಾ ಎಜುಕೇಶನ್ ಟ್ರಸ್ಟ್‌ನ ಇಮ್ಯಾಕ್ಯುಲೇಟ್ ಓರಾಕಲ್, ಎಸ್.ಎಸ್.ಎಲ್.ಸಿ ಹಾಗೂ ಸಿ.ಬಿ.ಎಸ್.ಇ.ಯ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ನ.೨೩ರಂದು ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ ೯.೩೦ಕ್ಕೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯ ಒಳಗೊಂಡ ಕಾರ್ಯಗಾರವು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಪರಿಣಿತ ವಿಷಯ ತಜ್ಞರು ಹಾಗೂ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರಶ್ನೆ ಪತ್ರಿಕೆ ರಚನೆ ಸಮಿತಿಯ ಸದಸ್ಯರು ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.ಅದೇ ದಿನ ಪೋಷಕರಿಗಾಗಿ ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವೃತ್ತಿ ಮಾರ್ಗದರ್ಶನ, ಎಸ್.ಎಸ್.ಎಲ್.ಸಿ ನಂತರದ ಕೋರ್ಸ್ ಆಯ್ಕೆಗಳು, ತಮ್ಮ ಮಗುವಿಗೆ ಸರಿಯಾದ ಕಾಲೇಜು ಆಯ್ಕೆ ಮಾಡುವ ವಿಧಾನ, ಮೌಲ್ಯಗಳು, ಶಿಸ್ತು, ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ಪಾಲಕರು ಹೊಂದಿರುವ ಜವಾಬ್ಧಾರಿ ಹಾಗೂ ಮಹತ್ವದ ಕುರಿತು ವಿಚಾರ ವಿನಿಮಯ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ವಿನಾಯಕ ಭಟ್ಟ ಮೊ. ೯೮೪೪೨೫೭೫೮೩, ನಾಗರಾಜ ಹೆಗ್ಡೆ ಮೊ. ೯೯೦೦೬೧೬೫೮೯ ಸಂಪರ್ಕಿಸಬಹುದು.