ಬಾಳೆಹೊನ್ನೂರು, ಸಂಪುಟ ವಿಸ್ತರಣೆಯಾದರೆ ಜಿಲ್ಲೆಗೆ ಒಂದು ಪ್ರಾತಿನಿಧ್ಯ ನೀಡಿ ಎಂದು ಮುಖಂಡರ ಬಳಿ ಕೇಳಿದ್ದೇನೆ. ನನಗೆ ಅವಕಾಶ ಮಾಡಿಕೊಟ್ಟರೆ ನಾನೂ ಕೆಲಸ ಮಾಡುತ್ತೇನೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

- ಜಿಪಂ ಅಧ್ಯಕ್ಷನಾಗಿ ಸಚಿವ ದರ್ಜೆಯಲ್ಲಿ ಕೆಲಸ ಮಾಡಿದ ಅನುಭವ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಂಪುಟ ವಿಸ್ತರಣೆಯಾದರೆ ಜಿಲ್ಲೆಗೆ ಒಂದು ಪ್ರಾತಿನಿಧ್ಯ ನೀಡಿ ಎಂದು ಮುಖಂಡರ ಬಳಿ ಕೇಳಿದ್ದೇನೆ. ನನಗೆ ಅವಕಾಶ ಮಾಡಿಕೊಟ್ಟರೆ ನಾನೂ ಕೆಲಸ ಮಾಡುತ್ತೇನೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಹಿಂದೆ ಜಿಪಂ ಅಧ್ಯಕ್ಷನಾಗಿ ಸಚಿವ ದರ್ಜೆಯಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದು ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರಿಗೆ ಹೇಳಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಉಸ್ತುವಾರಿ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಂಧನ ಇಲಾಖೆಯಡಿ ಜಿಲ್ಲೆಗೆ ಕೇಳಿದ ಅನುದಾನವೆಲ್ಲ ನೀಡಿದ್ದಾರೆ. ಅರಣ್ಯ, ಕಂದಾಯ ಭೂಮಿ ಸಮಸ್ಯೆ ಪರಿಹಾರಕ್ಕೆ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದರು.

ನಾನು ಮೂಲತಃ ಕಾಂಗ್ರೆಸ್ಸಿಗನಾಗಿದ್ದು, ನಮ್ಮ ಹೈಕಮಾಂಡ್ ಇದೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ನಾನು ಬದ್ಧ. ದೆಹಲಿಗೆ ನಾನು ಹೋಗಿದ್ದು ರಾಜಕೀಯ ಲೆಕ್ಕಾಚಾರಕ್ಕಾಗಿ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದರು. ಆದರೆ ನಾನು ಎರಡು ದಿನ ಮೊದಲೇ ದೆಹಲಿಗೆ ಹೋಗಿದ್ದೆ. ವಸ್ತಾರೆ-ಶೃಂಗೇರಿ ರಸ್ತೆ ತುಂಬಾ ಹಾಳಾಗಿದ್ದು, ಅದರ ದುರಸ್ಥಿಗೆ ಅನುದಾನ ಇಟ್ಟಿದ್ದೆವು. ಈ ರಸ್ತೆ ಇನ್ನೂ ಗುಣಮಟ್ಟದಲ್ಲಿ ಅಭಿವೃದ್ಧಿಯಾಗಲಿ, ರಾಷ್ಟ್ರೀಯ ಹೆದ್ದಾರಿಯಾಗಲಿ ಎಂದು ಬಿಜೆಪಿ ಸಂಸದರನ್ನು ಸಂಪರ್ಕ ಮಾಡಿ ಒತ್ತಡ ತರುವ ಕೆಲಸ ಮಾಡಿದ್ದೇನೆ.

ನವೀಕರಿಸಬಹುದಾದ ಇಂಧನ ನಿಗಮದಲ್ಲಿ ಯುಜಿಎಫ್ ಅನುದಾನವನ್ನು ಸೋಲಾರ್ ಪ್ಲಾಂಟ್ ಹಾಕಲು ನೀಡುತ್ತಾರೆ. ಇದನ್ನು ಕೇಳಲು ತೆರಳಿದ್ದೆ. ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಇದನ್ನು ಪ್ರಸ್ತಾವಿಸಿ, ಇಂಧನ ಸಚಿವರ ಬಳಿ ಇದು ಹೋಗಿ ಅವರಿಂದ ಅನುಮೋದನೆಗೊಂಡು ಸಬ್ಸಿಡಿ ಬರಬೇಕು. ಈ ವಿಚಾರ ಮಾತನಾಡಲು ನಾನು ತೆರಳಿದ್ದೆ ಎಂದು ಹೇಳಿದರು.

ಬೇಗಾರು-ಶೃಂಗೇರಿ, ಕೊಪ್ಪದಿಂದ ಶಿವಮೊಗ್ಗ ಏರ್‌ಪೋಟ್‌ರ್ಟ ವರೆಗೂ ಉತ್ತಮ ರಸ್ತೆ ಮಾಡಬೇಕು ಎಂದು ಕೇಳಲು ಹೋಗಿದ್ದೆ. ಈ ಬಗ್ಗೆ ಎಲ್ಲಾ ಪತ್ರಗಳು ನನ್ನ ಬಳಿ ಇವೆ. ಇದರ ಜೊತೆಗೆ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದೇನೆ. ಇದರಲ್ಲಿ ಬೇರೆ ಉದ್ದೇಶವಿಲ್ಲ ಎಂದರು.

ರಾಜ್ಯದಲ್ಲಿ ಎಲ್ಲೂ ಆನೆಗಳನ್ನು ಹಿಡಿದಿಲ್ಲ. ನಮ್ಮ ಕ್ಷೇತ್ರದಲ್ಲಿ ಹಾನಿ ಮಾಡಿದ ಐದು ಆನೆಗಳನ್ನು ಹಿಡಿಸಲಾಗಿದೆ. ನಮ್ಮ ಕ್ಷೇತ್ರದ ಕಾರ್ಯವೈಖರಿ ನೋಡಿ ಕೆಲವು ಕಡೆಗಳಲ್ಲಿ ಮನುಷ್ಯರಿಗೆ ಹಾನಿ ಮಾಡಿದ ಹುಲಿಗಳನ್ನು ಹಿಡಿಯಲಾಗಿದೆ. ಇನ್ನೂ ನಾಲ್ಕೈದು ಆನೆಗಳು ಕ್ಷೇತ್ರದಲ್ಲಿ ಸ್ವಲ್ಪ ಉಪಟಳ ಮಾಡುತ್ತಿದ್ದು, ಹಂತ ಹಂತವಾಗಿ ಅವುಗಳನ್ನು ಹಿಡಿಯುವ ಕೆಲಸ ಮಾಡಲಾಗುವುದು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಜಾಗದಲ್ಲಿನ ಜನರು ಸ್ಥಳಾಂತರ ಮಾಡಲು ಸಿದ್ಧರಾಗಿದ್ದಾರೆ. ಸ್ಥಳಾಂತರ ಮಾಡಲು ಭೂಮಿ ವ್ಯಾಲ್ಯುವೇಶನ್ ಹಣ ಕೇಂದ್ರ ಸರ್ಕಾರ ನೀಡಬೇಕು. ಪುನರ್ವಸತಿ ಸೌಲಭ್ಯ ರಾಜ್ಯ ಸರ್ಕಾರ ನೀಡಬೇಕು. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದರು.೨೪ಬಿಹೆಚ್‌ಆರ್ ೨: ರಾಜೇಗೌಡ