ಸಾರಾಂಶ
ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ೧೪೦ ಕೋಟಿ ಜನತೆಯ ಸಾರ್ವಭೌಮತ್ವಕ್ಕೆ ಮಾಡಿದ ಅಪಮಾನವಾಗಿದೆ. ಇದು ಕೇವಲ ನ್ಯಾಯಮೂರ್ತಿ ಗವಾಯಿ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಕೋಮುವಾದಿ ಸಂಘಟನೆ ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂತಹ ಕೃತ್ಯ ನಡೆದಿರುವುದು ಮನುಸ್ಮ್ರತಿ ಅನುಷ್ಠಾನಗೊಳಿಸುವ ಹುನ್ನಾರವಾಗಿದೆ .
ಕನ್ನಡಪ್ರಭ ವಾರ್ತೆ ಕೋಲಾರ
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಆಸೀನರಾಗಿದ್ದ ಪೀಠದ ಮೇಲೆ ಹಿರಿಯ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲೆತ್ನಿಸಿ ಸಂವಿಧಾನದ ಪೀಠಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ, ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರಿಂದ ಕೋಲಾರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ಮಾಡುವ ಮೂಲಕ ಅ.17ರಂದು ಶುಕ್ರವಾರದ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು.ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ೧೪೦ ಕೋಟಿ ಜನತೆಯ ಸಾರ್ವಭೌಮತ್ವಕ್ಕೆ ಮಾಡಿದ ಅಪಮಾನವಾಗಿದೆ. ಇದು ಕೇವಲ ನ್ಯಾಯಮೂರ್ತಿ ಗವಾಯಿ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಕೋಮುವಾದಿ ಸಂಘಟನೆ ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂತಹ ಕೃತ್ಯ ನಡೆದಿರುವುದು ಮನುಸ್ಮ್ರತಿ ಅನುಷ್ಠಾನಗೊಳಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಬೈಕ್ ರ್‍ಯಾಲಿಯಲ್ಲಿ ಸಿಪಿಐ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ದಸಂಸ ಮುಖಂಡ ಟಿ.ವಿಜಯಕುಮಾರ್, ಗಮಕ ಶಾಂತಮ್ಮ, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಅಲ್ಪಸಂಖ್ಯಾತರ ಮುಖಂಡ ಅನ್ವರ್‌ಪಾಷ, ಸಂಯುಕ್ತ ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ಡಿಲಿಟ್ ಡಾ.ಎಂ.ಚಂದ್ರಶೇಖರ್, ಪಿ.ವಿ.ಸಿ.ಕೃಷ್ಣಪ್ಪ, ಎ.ಎಸ್.ಎಫ್.ಐ ರಾಜ್ಯ ಮಾಜಿ ಅಧ್ಯಕ್ಷ ವಿ.ಅಂಬರೀಷ್, ವರದೇನಹಳ್ಳಿ ವೆಂಕಟೇಶ್, ಹಾರೋಹಳ್ಳಿ ರವಿ, ಡಿ.ಎಸ್.ಎಸ್. (ಅಂಬೇಡ್ಕರ್ ವಾದ) ಶ್ರೀರಂಗ, ಸಂಗಸಂದ್ರ ವಿಜಯ ಕುಮಾರ್, ಸುಬ್ರಮಣಿ, ಈ-ನೆಲ ಈ-ಜಲ ವೆಂಕಟಚಲಪತಿ ಇದ್ದರು.