ಸಾರಾಂಶ
ಕಡೂರು, ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸ ಬೇಕೆಂದು ಸಂಘದ ಅಧ್ಯಕ್ಷ ಅರೇಹಳ್ಳಿ ಎಸ್ . ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸ ಬೇಕೆಂದು ಸಂಘದ ಅಧ್ಯಕ್ಷ ಅರೇಹಳ್ಳಿ ಎಸ್ . ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.ತಹಸೀಲ್ದಾರ್ ಕಚೇರಿಗೆ ತೆರಳಿದ ನೌಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಉಪ ತಹಸೀಲ್ದಾರ್ ನಾಗರತ್ನ ಅವರಿಗೆ ಮನವಿ ಸಲ್ಲಿಸಿದ ಬಳಿಕ ನೌಕರರ ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, 7 ನೇ ವೇತನ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದನ್ನು ಅನುಷ್ಠಾನಗೊಳಿಸಬೇಕು. ಫಿಟ್‍ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ 27.50ಕ್ಕೆ ಹೆಚ್ಚಿಸಿ ಜು.1ಕ್ಕೆ ಅನ್ವಯವಾಗುವಂತೆ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ನೌಕರರ ಜೀವನ ನಿರ್ವಹಣೆ ಹಾಗೂ ನಿವೃತ್ತಿ ನಂತರ ಬದುಕು ಅತ್ಯಂತ ಕಷ್ಟಕರವಾದ್ದರಿಂದ ಎನ್‍ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ರಾಜಸ್ಥಾನ, ಪಂಜಾಬ್ ಸೇರಿದಂತೆ ಅನೇಕ ರಾಜ್ಯದಲ್ಲಿ ಹಳೆ ಪಿಂಚಣಿ ಜಾರಿಗೆ ತಂದಿರುವಂತೆ ಸರ್ಕಾರ ನೀಡಿರುವ ಭರವಸೆಯಂತೆ ಎನ್‍ಪಿಎಸ್ ಯೋಜನೆ ಜಾರಿಗೊಳಿಸಲಿ ಎಂದರು.ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ ನೌಕರರ ಕುಟುಂಬ ಅವಲಂಭಿತರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಘೋಷಿಸಬೇಕೆಂದರು. ರಾಜ್ಯ ಸರ್ಕಾರ 3 ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಲ್ಲಿ ವಿಳಂಬವಾಗುತ್ತಿದ್ದು ಶೀಘ್ರವೇ ಸರ್ಕಾರ ಆದೇಶ ನೀಡಬೇಕು ಎಂದು ನೌಕರ ಸಂಘದ ಸದಸ್ಯರು ಒತ್ತಾಯಿಸಿ ಮನವಿ ನೀಡಿದರು. ಕಾರ್ಯದರ್ಶಿ ಅನಿಲ್‍ಕುಮಾರ್, ಉಪಾಧ್ಯಕ್ಷ ಬಿ.ಪಿ.ರಾಜಪ್ಪ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಎಚ್.ಎಂ. ಚೈತ್ರಾ, ಯಮುನಾ ಮೋಹನ್, ಪುಷ್ಪಲತಾ ಸಿ.ಕೆ.ಮೂರ್ತಿ, ಅಶೋಕ್, ಎಪಿಎಸ್ ಅಧ್ಯಕ್ಷ ಪ್ರಶಾಂತ್, ಇಸಿಒ ಮಂಜಪ್ಪ, ಜಗದೀಶ್, ಲಿಂಗರಾಜು, ಹನುಮಂತಪ್ಪ, ಖಜಾನೆ ಅಧಿಕಾರಿ ಶಶಿಕಲಾ, ಟಿ.ಬಿ. ಮೂರ್ತಿ ಗೀತಾ, ಭಾಗ್ಯಮ್ಮ, ವೀರಮಾರುತಿ ಸೇರಿದಂತೆ ಮತ್ತಿತರರು ಇದ್ದರು.12ಕೆಕೆಡಿಯು2.ಕಡೂರು ತಾಲೂಕು ಸರ್ಕಾರಿ ನೌಕರರ ಸಂಘದಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))