ಸಮೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಲು ಮನವಿ

| Published : Oct 17 2025, 01:00 AM IST

ಸಾರಾಂಶ

ಜಿಲ್ಲೆಯಲ್ಲಿ ಶೇಕಡ 90 ಸಮೀಕ್ಷೆ ಆಗಿರುವುದು ಪ್ರಸಂಶನೀಯ. ಇದಕ್ಕೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಗಣತಿದಾರರನ್ನು ಅಭಿನಂದಿಸುತ್ತೇವೆ.

ಕನ್ನಡಪ್ರಭ ವಾರ್ತೆ ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಜಿಲ್ಲೆಯಲ್ಲಿ ಸಾಮಾಜಿಕ, ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮರ್ಪಕವಾಗಿ ಮತ್ತು ಪ್ರಮಾಣಿಕವಾಗಿ ನಡೆಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.ಜಿಲ್ಲೆಯಲ್ಲಿ ಶೇಕಡ 90 ಸಮೀಕ್ಷೆ ಆಗಿರುವುದು ಪ್ರಸಂಶನೀಯ. ಇದಕ್ಕೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಗಣತಿದಾರರನ್ನು ಅಭಿನಂದಿಸುತ್ತೇವೆ ಉಳಿದ 10% ಸಮೀಕ್ಷೆಯನ್ನು ಪೂರ್ಣಗೊಳಿಸಿ ಶೇ, 100 ರಷ್ಟು ತಲುಪಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿಲಾಯಿತು. ಜಿಲ್ಲಾಧಿಕಾರಿ ಶುಭಕಲ್ಯಾಣ್ ಪ್ರತಿಕ್ರಿಯಿಸಿ ನಿಗದಿತ ಕಾಲಮಿತಿಯಲ್ಲಿ ಶೇ. 100 ರಷ್ಟು ಸಮೀಕ್ಷೆಯನ್ನು ಸಂಪೂರ್ಣಗೊಳಿಸುವುದಾಗಿ ಹೇಳಿದರು.ಸರ್ಕಾರ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವುದು ಸಂವಿಧಾನದ ಆಶಯವಾಗಿದೆ. ಕರ್ನಾಟಕರಾಜ್ಯ ಹಿಂದುಳಿದ ವರ್ಗಗಳ ಆಯೋಗದ 1995 ಕಾಯ್ದೆಯನ್ವಯ ಪ್ರತಿ 10 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ರಾಜ್ಯದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡಿ ಅವರ ಸ್ಥಿತಿಗತಿಗಳ ಮಾಹಿತ ಆಧಾರದ ಮೇಲೆ ಮೀಸಲಾತಿಯನ್ನು ಪರಿಷ್ಕರಿಸಿ ಇದಕ್ಕೆ ಪೂರಕವಾದ ಯೋಜನೆಯನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವುದು ಆಯೋಗದ ಕರ್ತವ್ಯವಾಗಿದೆ ಎಂದರು.ದುರ್ಬಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವುದು ವಿರೋಧ ಪಕ್ಷದ ಕೆಲವು ಮುಖಂಡರು ಮೇಲ್ವರ್ಗದ ಬಲಿಷ್ಠ ಜಾತಿಗಳು ಧಾರ್ಮಿಕ ಕ್ಷೇತ್ರದ ಸ್ವಾಮಿಜಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಅಸಮಾನತೆಯ ಸರ್ವಾಧಿಕಾರದ ಧೋರಣೆಯಾಗಿದ್ದು ಇದು ಖಂಡನೀಯ. ಈ ಸಮೀಕ್ಷೆಯನ್ನು ಜಿಲ್ಲೆಯನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ವಿಡಂಬಣೆ ಮಾಡಿರುವುದು ತಮ್ಮಜಾತಿ ಮನಸ್ಸಿಗೆ ಸಾಕ್ಷಿಯಾಗಿದೆ. ಆದ್ದರಿಂದ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕ ಮತ್ತು ಪಾರದರ್ಶಕತೆಯಿಂದ ನಡೆಸಿ ರಾಜ್ಯದ ಯಾವೊಂದು ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ, ಮುಬಾರಕ್, ಗೋವಿಂದರಾಜ್, ಶರಾದಮ್ಮ, ಮಂಗಳಮ್ಮ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯ ಅನುಪಮಾ, ಗಂಗಾ, ರಾಜೀವ್‌ಗಾಂಧಿ ಬಡಾವಣೆಯ ಮಾರಣ್ಣ, ಶಾಂತಪ್ಪ, ರಮೇಶ್,ಹನುಮಂತ, ಅಶ್ವತ್, ಕೆಂಪಣ್ಣ, ಮುಂತಾದವರು ಪಾಲ್ಗೊಂಡಿದ್ದರು.