ಕುಡಿವ ನೀರು ಕಲ್ಪಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ

| Published : Mar 31 2024, 02:05 AM IST

ಕುಡಿವ ನೀರು ಕಲ್ಪಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗಿರುವ ನೀರಿನ ಪೈಪ್‌ನಿಂದ ಜನರಿಗೆ ನೀರು ಸಿಗುತ್ತಿಲ್ಲ. ಈ ನೀರಿನ ಪೈಪ್‌ ಸುಮಾರು 250 ಅಡಿಗಳ ದೂರದಲ್ಲಿರುವ ಮನೆಗಳಿಗೆ ನೀರು ಸಿಗುತ್ತಿಲ್ಲ. ನೀರು ದೊರಕಿಸುವಂತೆ ಆಗ್ರಹ.

ಕಲಬುರಗಿ: ಮಹಾನಗರ ಪಾಲಿಕೆಯ ತಾರಫೈಲ್ ವಾರ್ಡ್ ನಂ. 54, 9ನೇ ಕ್ರಾಸ್‍ನಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಬೇಸಿಗೆ ಕಾಲದಲ್ಲಿ ಎಲ್ಲರಿಗೂ ನೀರಿನ ಅವಶ್ಯಕತೆ ಇದೆ. ಈಗಿರುವ ನೀರಿನ ಪೈಪ್‌ನಿಂದ ಜನರಿಗೆ ನೀರು ಸಿಗುತ್ತಿಲ್ಲ. ಈ ನೀರಿನ ಪೈಪ್‌ ಸುಮಾರು 250 ಅಡಿಗಳ ದೂರದಲ್ಲಿರುವ ಮನೆಗಳಿಗೆ ನೀರು ಸಿಗುತ್ತಿಲ್ಲ. ಆದಕಾರಣ ಜನರಿಗೆ ನೀರು ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಕೊಪ್ಪುರ ಹಾಗೂ ನಗರ ಸಂಘಟನಾ ಸಂಚಾಲಕ ಸಂಜುಕುಮಾರ ಹುಗ್ಗಿ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ವಾರ್ಡ ನಂ. 54 9ನೇ ಕ್ರಾಸ್‍ನ ಕರಲಿಂಗ್ ವಾಡೆಕರ್ ಮನೆ ಮುಂದೆ ಸಾರ್ವಜನಿಕ ನೀರಿನ ಕೈ ಪಂಪು (ಬೋರ್‍ವೆಲ್)ಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿತ್ತು. ಆದರೆ ಮಾಹನಗರ ಪಾಲಿಕೆಯವರು ಈ ಕೈ ಪಂಪನ್ನು ತೆಗೆದು ವಿದ್ಯುತ್ ಚಾಲಿತ ಮೋಟಾರು ಮೂಲಕ ನೀರು ಒದಗಿಸುತ್ತೇವೆ ಎಂದು ಕೈ ಪಂಪು (ಹ್ಯಾಂಡ ಬೋರವೆಲ್) ತೆಗೆದುಕೊಂಡು ಹೋಗಿ ಒಂದು ವರ್ಷವಾಯಿತು. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಕೈ ಪಂಪು ಇಲ್ಲಾ ಮೋಟಾರು ಕೂಡ ಅಳವಡಿಸಿರುವುದಿಲ್ಲ.

ಸರಕಾರಿ ಆಸ್ಪತ್ರೆ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಬೀದಿ ದೀಪ ಇಲ್ಲದಿರುವುದರಿಂದ ಹಾವು ಹುಳ, ಕಸ-ಕಡ್ಡಿಗಳಿಂದ ಜನಸಾಮಾನ್ಯರಿಗೆ ಮತ್ತು ರಾತ್ರಿ ಹೊತ್ತಿನಲ್ಲಿ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಇನ್ನೂ 250 ಅಡಿಗಳ ನೀರಿನ ಪೈಪಲೈನ್ ವಿಸ್ತರಿಸಬೇಕು, ಈ ಬೇಡಿಕೆಗಳನ್ನು ಕೂಡಲೇ ಬಗೆಹರಿಸಬೇಕು ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.