ನಗರದ ಮಂಡಿಪೇಟೆಯ ಮಾರಿಯಮ್ಮದೇವಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಪತ್ನಿಕನ್ನಿಕಾ ಪರಮೇಶ್ವರ್ ಭೇಟಿ ನೀಡಿ ಮಾರಿಯಮ್ಮ ದೇವಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಮಂಡಿಪೇಟೆಯ ಮಾರಿಯಮ್ಮದೇವಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಪತ್ನಿಕನ್ನಿಕಾ ಪರಮೇಶ್ವರ್ ಭೇಟಿ ನೀಡಿ ಮಾರಿಯಮ್ಮ ದೇವಿಗೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಶ್ರೀ ಮಾರಿಯಮ್ಮ ಯುವಕರ ಸಂಘದಿಂದ ಮನವಿ ನೀಡಿ ಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ಕಳೆದ 70 ವರ್ಷಗಳಿಂದ ಪರಿಶಿಷ್ಟ ಜಾತಿ ಪರೆಯನ್ ಸಮುದಾಯಕ್ಕೆ ಸೇರಿದ ಕೂಲಿಕಾರ್ಮಿಕರು ವಾಸಿಸುತ್ತಿದ್ದು ತುಮಕೂರು ಕಸಬಾ ಸರ್ವೇ ನಂ,120ರ 38 ಗುಂಟೆ ಸರ್ಕಾರಿ ಜಾಗದ ಪೈಕಿ ನಮ್ಮ ಸಾಂಸ್ಕೃತಿಕ ಧಾರ್ಮಿಕತೆಯ ಶ್ರೀ ಮಾರಿಯಮ್ಮ ದೇವಿಯ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಹೊಂದಿಕೊಂಡಿರುವ 8 ಗುಂಟೆ ಜಮೀನು ಸರ್ಕಾರಿ ಖರಾಬ್‌ ಆಗಿದ್ದು ಈ ಜಮೀನನ್ನು ಮಂಜೂರು ಮಾಡಿಸಿ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದಿಂದ ಅನುಧಾನ ನೀಡಲು ತುಮಕೂರು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾರಿಯಮ್ಮಯುವಕರ ಸಂಘದ ಪದಾಧಿಕಾರಿಗಳಾದ ಕಣ್ಣನ್, ಕೃಷ್ಣ, ರಾಜ, ಮಾರಿ, ಮಾಧವನ್‌ ತುಮಕೂರು ಸ್ಲಂ ಸಮಿತಿ ಅರುಣ್‌ ಮನವಿ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಡಾ.ಜಿ.ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲೆ ನಿರ್ಧೇಶನ ನೀಡಿ ದೇವಸ್ಥಾನದ ಜಾಗ ಮಂಜೂರು ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಭೆ ಕರೆಯಲು ಸೂಚಿಸಿದರು. ಈ ಸಂದರ್ಭದಲ್ಲಿ ಯುವ ಭೀಮ ಪಡೆಯ ಪದಾಧಿಕಾರಿಗಳು ಮತ್ತು ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.