ಸಾರಾಂಶ
Appeal to locate missing boy
ಮೊಳಕಾಲ್ಮುರು:ಬಾಲಕನೋರ್ವ ಕಾಣೆಯಾಗಿರುವ ಘಟನೆ ತಾಲೂಕಿನ ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿ ನಡೆದಿದೆ. ಕಾಣೆಯಾದ ಬಾಲಕ ರಾಜಾಪುರ ಗ್ರಾಮದ ಆರ್.ಆರ್. ಕಾರ್ತಿಕ್ (15)ಎಂಬುದಾಗಿದೆ. ಈ ಬಾಲಕ ತಮ್ಮೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆ.8 ರಂದು ರಾಂಪುರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಈವರೆಗೂ ಮನೆಗೆ ಬಂದಿಲ್ಲ. ಸಂಬಂಧಿಕರ ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಪತ್ತೆಯಾಗಿಲ್ಲ. 5.2 ಅಡಿ ಎತ್ತರ ಕಪ್ಪು ಬಣ್ಣ, ಕೋಲು ಮುಖ ತೆಳ್ಳನೆಯ ಮೈಕಟ್ಟು ಹೊಂದಿರುವ ಬಾಲಕ ಕನ್ನಡ ಮತ್ತು ತೆಲಗು ಭಾಷೆಯನ್ನು ಬಲ್ಲವನಾಗಿದ್ದಾನೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟೀ ಶರ್ಟ್ ಕಂದು ಬಣ್ಣದ ಬರ್ಮೋಡ ಧರಿಸಿದ್ದಾನೆ. ಬಾಲಕ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ 9480803262 ಹಾಗೂ 9480803236 ಸಂಖ್ಯೆಗೆ ಕರೆ ಮಾಡಲು ಕೋರಿದೆ.