ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ

| Published : May 08 2025, 12:34 AM IST

ಸಾರಾಂಶ

ನಿರಂತರ ವಿದ್ಯುತ್ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಸದಸ್ಯರು ಸವದತ್ತಿ ಶಾಸಕ ವಿಶ್ವಾಸ ವೈದ್ಯಗೆ ಮನವಿ ಸಲ್ಲಿಸಿದರು

ಯರಗಟ್ಟಿ: ಸಮೀಪದ ಬೀರಪ್ಪನ ಗುಡ್ಡದ ಸುತ್ತಮುತ್ತಲಿರುವ 50 ಮನೆಗಳಿಗಿಂತ ಹೆಚ್ಚು ಜನರು ವಾಸವಿರುವ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇಲ್ಲದೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಅಭ್ಯಾಸ ಸೇರಿದಂತೆ ರಾತ್ರಿ ವೇಳೆ ವಿಷಜಂತುಗಳ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ನಿರಂತರ ವಿದ್ಯುತ್ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಸದಸ್ಯರು ಸವದತ್ತಿ ಶಾಸಕ ವಿಶ್ವಾಸ ವೈದ್ಯಗೆ ಬುಧವಾರ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು, ಬೀರಪ್ಪನ ಗುಡ್ಡದಲ್ಲಿ ವಾಸಿಸುತ್ತಿರುವ ಜನರಿಗೆ ವಿದ್ಯುತ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅಧಿಕಾರಿಗೆ ಶೀಘ್ರದಲ್ಲಿ ವಿದ್ಯುತ್ ಪೂರೈಯಿಸಲು ಸೂಚಿಸಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಗೀರೆಪ್ಪ ಗಂಗರಡ್ಡಿ, ಉಪಾಧ್ಯಕ್ಷ ಯಕ್ಕೇರೆಪ್ಪ ತಳವಾರ, ರಾಮಕೃಷ್ಣ ಎಳ್ಳೆಮ್ಮಿ, ಸೇಖರ ಕಿಲಾರಿ, ಶಾನೂರ ಶಿಕ್ಕಲಗಿ, ಯಕ್ಕೇರಪ್ಪ ಮಾಳಗಿ, ಸಿದ್ದಪ್ಪ ಅಡಕಲಗುಂಡಿ, ಅಜ್ಜಪ್ಪ ತಡಸಲೂರ, ಯಮನಪ್ಪ ಮಾಳಗಿ, ಪಡೆಯಪ್ಪ ಅಡಕಲಗುಂಡಿ ಇತರರಿದ್ದರು.