ಕುದೂರು: ಕುದೂರು ಗ್ರಾಮದಲ್ಲಿ ಶನಿವಾರ ಸಂತೆಯನ್ನು ಮತ್ತೆ ಪ್ರಾರಂಭಿಸುವ ಹಾಗೂ ಭೈರವನದುರ್ಗದ ತಪ್ಪಲಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಕುರಿತು ಚರ್ಚೆ ನಡೆಯಿತು.
ಕುದೂರು: ಕುದೂರು ಗ್ರಾಮದಲ್ಲಿ ಶನಿವಾರ ಸಂತೆಯನ್ನು ಮತ್ತೆ ಪ್ರಾರಂಭಿಸುವ ಹಾಗೂ ಭೈರವನದುರ್ಗದ ತಪ್ಪಲಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಕುರಿತು ಚರ್ಚೆ ನಡೆಯಿತು.
ಕುದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಲತಾಗಂಗಯ್ಯ ಶನಿವಾರ ಸಂತೆ ಪ್ರಾರಂಭಿಸುವುದರಿಂದ ರೈತರು ಮತ್ತು ಜನರಿಗೆ ಆಗುವ ಅನುಕೂಲ, ಭೈರವನದುರ್ಗದ ಚರಿತ್ರೆ ಕಾಪಾಡಬೇಕೆಂದು ಸಲಹೆ ನೀಡಿದರು.ಸ್ವಾತಂತ್ರ್ಯ ಬಂದಾಗಿನಿಂದ ಕುದೂರು ಗ್ರಾಮದಲ್ಲಿ ಶನಿವಾರ ಸಂತೆ ನಡೆಯುತ್ತಿತ್ತು. ಆದರೆ ಕೋವಿಡ್ ನಂತರ ಸಂತೆಯ ಸ್ವರೂಪವೇ ಬದಲಾಯಿತು. ಮತ್ತೆ ಸಂತೆಗೆ ಚಾಲನೆ ನೀಡಬೇಕು. ಸುತ್ತ ಹಳ್ಳಿಗಳಿಗೆ ಒಂದು ತಿಂಗಳ ಕಾಲ ಧ್ವನಿವರ್ಧಕದ ಮೂಲಕ ಸಂತೆ ಮಾಹಿತಿ ನೀಡಿ ರೈತರು ತಮ್ಮ ಬೆಳೆಗಳನ್ನು ತರಲು ತಿಳಿಸಬೇಕು ಎಂದು ಸದಸ್ಯೆ ಲತಾಗಂಗಯ್ಯ ಸಲಹೆ ನೀಡಿದರು.
ಕುದೂರು ಗ್ರಾಪಂ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಶಾಸಕರಿಗೆ ಸರ್ವ ಸದಸ್ಯರು ಮನವಿ ಮಾಡಬೇಕಿದೆ. ಪಟ್ಟಣ ಪಂಚಾಯ್ತಿಗೆ ಇರಬೇಕಾದ ಎಲ್ಲಾ ಮಾನದಂಡಗಳು ಕುದೂರು ಗ್ರಾಮ ಪಂಚಾಯ್ತಿಗೆ ಇದೆ. ಆದರೆ ಕೆಲವರ ಸ್ವಾರ್ಥಕ್ಕೆ ಪಟ್ಟಣ ಪಂಚಾಯ್ತಿಯನ್ನು ಪರೋಕ್ಷವಾಗಿ ವಿರೋಧಿಸಿ ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೆಂಪೇಗೌಡರ ಚರಿತ್ರೆಗೆ ಸಾಕ್ಷಿ ಒದಗಿಸುವ ಕುದೂರು ಭೈರವನದುರ್ಗದ ತಪ್ಪಲಿನಲ್ಲಿ ಗ್ರಾಮದ ಕಸ ಸುರಿಯುವುದು ತಪ್ಪಿಸಬೇಕು. ಆದಿಚುಂಚನಗಿರಿ ಶ್ರೀಗಳು ಬೆಟ್ಟಕ್ಕೆ ಬರುವವರಿದ್ದಾರೆ. ಅಲ್ಲಿನ ಕಲುಷಿತ ವಾತಾವರಣ ನೋಡಿ ಪಂಚಾಯತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಮುನ್ನ ಎಚ್ಚರಗೊಳ್ಳಬೇಕು ಎಂದು ಹೇಳಿದರು.
ಸದಸ್ಯ ಕೆ.ಬಿ.ಬಾಲರಾಜು ಮಾತನಾಡಿ, ಕುದೂರು ಗ್ರಾಮದ ಅಭಿವೃದ್ಧಿಗೆ ಪಂಚಾಯ್ತಿ ಆಸ್ತಿಯನ್ನು ಅಡವಿಟ್ಟು ಬಿಡಿಸಿಸಿ ಬ್ಯಾಂಕಿನಿಂದ ಸಾಲ ಪಡೆಯಬೇಕು ಎಂದಾಗ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಆಗ ಬ್ಯಾಂಕಿನ ಸಾಲವನ್ನು ತೀರಿಸುವ ಮಾರ್ಗ ಹೇಗೆಂದು ವಿವರಿಸಿದ ನಂತರ ಸಾಲದ ಪ್ರಯತ್ನ ಮಾಡಿ ಇಲ್ಲದೇ ಹೋದರೆ ಪಂಚಾಯ್ತಿಯನ್ನು ಕುದೂರು ಇತಿಹಾಸದಲ್ಲೇ ಮೊದಲ ಬಾರಿಗೆ ಸಾಲದ ಸುಳಿಗೆ ಸಿಲುಕಿದ ಅಪಕೀರ್ತಿ ತಮಗೆ ಸಲ್ಲುತ್ತದೆ ಎಂದು ಮನವರಿಕೆ ಮಾಡಲಾಯಿತು.ಮಾದಕ ವಸ್ತು ನಿಯಂತ್ರಣಕ್ಕೆ ಸಹಕರಿಸಿ:
ಕುದೂರು ಗ್ರಾಮದಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾನೂನಿನ ಸಲಹೆ ಪಡೆದು ಅದನ್ನು ನಿಯಂತ್ರಿಸುವ ಕೆಲಸ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಒಟ್ಟಾಗಿ ಪೊಲೀಸರಿಗೆ ಸಹಕರಿಸಬೇಕಿದೆ ಎಂದು ಗ್ರಾಪಂ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ್ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ರಮ್ಯಾಜ್ಯೋತಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಕಾರ್ಯದರ್ಶಿ ವೆಂಕಟೇಶ್ ಹಾಜರಿದ್ದರು.
4ಕೆಆರ್ ಎಂಎನ್ 8.ಜೆಪಿಜಿಕುದೂರು ಗ್ರಾಮಪಂಚಾಯ್ತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.