ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ-2026ನ್ನು ಸ್ಥಗಿತಗೊಳಿಸಿ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಅಭಿವೃದ್ದಿಗೆ ಪೂರಕ ನೀತಿ ಅಳವಡಿಸಿ ಅನುಷ್ಠಾನಕ್ಕೆ ತರಬೇಕೆಂದು ನಗರದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಜಿಲ್ಲಾ ಪತ್ರಿಕೆಗಳು ಮನವಿ ಸಲ್ಲಿಸಿದವು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ-2026ನ್ನು ಸ್ಥಗಿತಗೊಳಿಸಿ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಅಭಿವೃದ್ದಿಗೆ ಪೂರಕ ನೀತಿ ಅಳವಡಿಸಿ ಅನುಷ್ಠಾನಕ್ಕೆ ತರಬೇಕೆಂದು ನಗರದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಜಿಲ್ಲಾ ಪತ್ರಿಕೆಗಳು ಮನವಿ ಸಲ್ಲಿಸಿದವು.ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳುತ್ತಿರುವಾಗ, ಹೊಸ ಜಾಹೀರಾತು ನೀತಿಯಿಂದಾಗಿ ಪತ್ರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿದಂತಾಗಿದೆ. ಹೀಗಾಗಿ ತಕ್ಷಣವೇ ಹೊಸ ಜಾಹೀರಾತು ನೀತಿ ನಿಲ್ಲಿಸಬೇಕು. ಪತ್ರಿಕೆಗಳಿಗೆ ಪೂರಕವಾಗುವ ನೀತಿ ತರಬೇಕೆಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಬೇಕು ಎಂದು ಮನವಿಮಾಡಿತು.ಈ ವೇಳೆ ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಸಂಪಾದಕರಾದ ಇರ್ಪಾನ್ ಶೇಖ, ಮೋಹನ ಕುಲಕರ್ಣಿ, ಪಾಂಡುರಂಗ ಮಮದಾಪುರ, ಮಹೇಶ ಶೆಟಗಾರ, ಮಾಧವರಾವ ಕುಲಕರ್ಣಿ, ಸುಶೀಲೇಂದ್ರ ನಾಯಕ, ಕೌಶಲ್ಯ ಪನಾಳಕರ, ಸಂಜಯ ಕೊಂಡಗೂಳಿ, ಸೀತಾರಾಮ ಕುಲಕರ್ಣಿ, ಇಂದುಶೇಖರ ಮಣೂರ, ಸಂಜೀವ ಕುಲಕರ್ಣಿ, ಶರದಕುಮಾರ ಅರ್ಜುಣಗಿ, ಸಿದ್ದಣ್ಣ ವಿಜಾಪುರ, ಅವಿನಾಶ ಬಿದರಿ, ಚಿದಂಬರ ಕುಲಕರ್ಣಿ, ಪವನ ಕುಲಕರ್ಣಿ, ಶರಣು ಮಸಳಿ, ವಿನೋದ ಸಾರವಾಡ, ಕೆ.ಕೆ.ಕುಲಕರ್ಣಿ, ಗುರು ಗದ್ದನಕೇರಿ, ಫಯಾಜ್ ಕಲಾದಗಿ, ಪುಂಡಲಿಕ ಮುರಾಳ ಉಪಸ್ಥಿತರಿದ್ದರು.