ಸಾರಾಂಶ
ಸರಕಾರಿ ಭೂಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಆ ಸ್ಥಳದಲ್ಲಿ ಕುರಿಗಳನ್ನು ಮೇಯಿಸಲು ಅನುಮತಿ ಕಲ್ಪಿಸುವಂತೆ ಒತ್ತಾಯಿಸಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸರಕಾರಿ ಭೂಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಆ ಸ್ಥಳದಲ್ಲಿ ಕುರಿಗಳನ್ನು ಮೇಯಿಸಲು ಅನುಮತಿ ಕಲ್ಪಿಸುವಂತೆ ಒತ್ತಾಯಿಸಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಅವರು, ಹುಣಸಗಿ ತಾಲೂಕಿನ ಹೆಬ್ಬಾಳ ಬಿ. ಗ್ರಾಮದ ವ್ಯಾಪ್ತಿಯಲ್ಲಿ ಸರಕಾರಿ ಜಾಗವನ್ನು ಕೆಲ ವ್ಯಕ್ತಿಗಳು ವಶಪಡಿಸಿಕೊಂಡು ದನಕರು ಹಾಗೂ ಕುರಿಗಳಿಗೆ ಮೇಯಿಸಲು ಅಡ್ಡಿಪಡಿಸಿ ಜಾತಿನಿಂದನೆ ಹಾಗೂ ಅವಾಚ ಶಬ್ದಗಳಿಂದ ನಿಂದಿಸಿ, ದಬ್ಬಾಳಿಕೆ ಮಾಡುತ್ತಾರೆ ಎಂದು ದೂರಿದರು. ಗುಡ್ಡಗಾಡು ಪ್ರದೇಶ ಹಾಗೂ ಸರಕಾರಿ ಭೂಮಿಗಳಲ್ಲಿ ಮಾತ್ರ ಕುರಿಗಳನ್ನು ಮೇಯಿಸಲು ಅನುಕೂಲಕರವಾದ ಸ್ಥಳವಿದೆ. ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ, ಕುರಿಗಾಹಿಗಳಿಗೆ ಮೇಯಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮಗ್ಗ, ಹೊನ್ನೇಶ್ ಬಳಿಚಕ್ರ, ಬಸವರಾಜ್ ಕಾವಲಿ, ಹಣಮಂತರಾಯಗೌಡ ಮಾಲಿಪಾಟೀಲ್, ಜೆಕ್ಕಪ್ಪ ಪೂಜಾರಿ, ಕುರಿಗಾಹಿಗಳಾದ ಯಲ್ಲಾಲಿಂಗ, ಅಮರಪ್ಪ, ಬೊಮ್ಮಣ್ಣ, ಜೋಗಪ್ಪ ಸೇರಿದಂತೆ ಇತರರಿದ್ದರು.-----
15ವೈಡಿಆರ್7ಸರಕಾರಿ ಭೂಪ್ರದೇಶದಲ್ಲಿ ಕುರಿಗಾಹಿಗಳಿಗೆ ಮೇಯಿಸಲು ಅನುಮತಿ ಕಲ್ಪಿಸಬೇಕೆಂದು ಕುರುಬ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.