ನಾಟಕಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

| Published : Aug 12 2024, 12:46 AM IST

ಸಾರಾಂಶ

ರಾಮನಗರ: ವಕೀಲರು ಮತ್ತು ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಮಯಾಭಾವ ಕಡಿಮೆ, ಆದರೂ ಜಿಲ್ಲಾ ಕೇಂದ್ರದ ವಕೀಲರು ಬಿಡುವಿನ ವೇಳೆಯಲ್ಲಿ ಪೌರಾಣಿಕ ನಾಟಕ ಕಲಿತು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಹೇಳಿದರು

ರಾಮನಗರ: ವಕೀಲರು ಮತ್ತು ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಮಯಾಭಾವ ಕಡಿಮೆ, ಆದರೂ ಜಿಲ್ಲಾ ಕೇಂದ್ರದ ವಕೀಲರು ಬಿಡುವಿನ ವೇಳೆಯಲ್ಲಿ ಪೌರಾಣಿಕ ನಾಟಕ ಕಲಿತು ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಹೇಳಿದರು.

ನಗರದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಶ್ರೀ ರಾಮಾಂಜನೇಯ ಯುದ್ದ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕದ ಪಾತ್ರಗಳು ಕೇವಲ ಪಾತ್ರವಾಗಿ ಉಳಿಯಬಾರದು, ಆ ಪಾತ್ರಗಳ ಸಂದೇಶಗಳನ್ನು ಮನುಷ್ಯರು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.

ಹನುಮಂತ ರಾಮನ ಪರಮ ಭಕ್ತ, ಆದರೆ ಹನುಮಂತ ರಾಮನ ವಿರುದ್ದವೇ ಯುದ್ದ ಮಾಡುವ ಪರಿಸ್ಥಿತಿ ಬರುತ್ತದೆ. ಕಾರಣ ಹನುಮಂತ ರಾಜನಿಗೆ ನೀಡಿದ ವಚನವೆ ಆಗಿತ್ತು. ಅಂದರೆ ಕೊಟ್ಟ ಮಾತಿಗೆ ತಪ್ಪಬಾರದು ಎಂಬುದೇ ಈ ನಾಟಕದ ಸಂದೇಶ ಎಂದು ಹೇಳಿದರು.

ಇಂದಿನ ಮಕ್ಕಳಿಗೆ ನಾಟಕ ಕಲೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಟಕದ ವೀಕ್ಷಣೆಗೆ ಆಗಮಿಸುವ ಪ್ರತಿಯೊಬ್ಬರು ತಮ್ಮ ಮಕ್ಕಳಿಗೂ ನಾಟಕ ತೋರಿಸಬೇಕಿದೆ. ಸಿನಿಮಾ, ಯಕ್ಷಗಾನ ಮತ್ತು ಇತರೆ ಕಲೆಗಳಿಗಿಂತ ನಾಟಕವನ್ನು ರಸಭರಿತವಾದ ಕಲೆ ಎಂದೇ ಕರೆಯುತ್ತಾರೆ. ಹಾಗಾಗಿ ರಂಗಭೂಮಿ ನಾಟಕ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಲೇ ಈವತ್ತಿಗೂ ನಾಟಕ ಜೀವಂತವಾಗಿ ಉಳಿದಿದೆ. ಇಂತಹ ನಾಟಕವನ್ನು 3 ತಿಂಗಳ ಕಾಲ ಕಲಿತು ಪ್ರದರ್ಶನ ಮಾಡುತ್ತಿರುವ ವಕೀಲರು ಅಭಿನಂದನಾರ್ಹರು ಎಂದು ರೇಣುಕಾ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ನಾಟಕದ ನಿರ್ದೇಶಕ ಮತ್ತು ಹಾರ್ಮೋನಿಯಂ ಮಾಸ್ಟರ್ ಸಚ್ಚಿದಾನಂದ ಮೂರ್ತಿ ಅವರಿಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಕಲಾ ತಪಸ್ವಿ ಎಂಬ ಬಿರುದು ನೀಡಿ ಗೌರವಿಸಲಾಯಿತು.

ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಬೈರೇಗೌಡ, ನಾಟಕ ರಚನೆಕಾರ ಸುಗ್ಗನಹಳ್ಳಿ ರಾಮಯ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣಗೌಡ, ನ್ಯಾಯಾಧೀಶರಾದ ಎಂ.ಡಿ.ಮಹರ್ಕರ್, ಜಿ.ರಾಘವೇಂದ್ರ, ಸಿ.ಲೋಕೇಶ್, ಸವಿತಾ ಪಿ.ಆರ್., ಬಿ.ಟಿ.ಮಹೇಶ್, ಎಚ್. ಅವಿನಾಶ್ ಚಿಂಧು, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಟಿ.ತಿಮ್ಮೇಗೌಡ, ಉಪಾಧ್ಯಕ್ಷ ವಿ.ಚಂದ್ರಶೇಖರ್, ಖಜಾಂಚಿ ಮಂಜೇಶ್ ಗೌಡ, ಸಮಾಜ ಸೇವಕ ಚಿಕ್ಕಣ್ಣಯ್ಯ, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಮಾಗಡಿ ತಾಲೂಕು ಅಧ್ಯಕ್ಷ ಪಾಪಣ್ಣ, ಕನಕಪುರ ವಕೀಲರ ಸಂಘದ ಪದಾಧಿಕಾರಿಗಳು, ನಾಟಕದ ವ್ಯವಸ್ಥಾಪಕರಾದ ಬಿ.ಧನಂಜಯ, ಎಚ್.ಬಿ. ಶಿವಣ್ಣ, ಗೋಪಾಲಗೌಡ, ಹಿರಿಯ ವಕೀಲರಾದ ಹನುಮಂತರಾಜು, ಜೆ.ಕೆ.ರಂಗಸ್ವಾಮಿ, ಸಿ.ಚಿಕ್ಕಪ್ಪಾಜಿ, ಕೆ.ಶಾಂತಯ್ಯ, ಶಂಕರಯ್ಯ,ಅಶೋಕ್, ಶಶಿಧರ್, ಚಂದ್ರಶೇಖರ್ ಆರ್., ಅನಿಲ್ ಕುಮಾರ್, ನಿರಂಜನ್. ಹಾಗು ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.(ಈ ಫೋಟೋ ಸುದ್ದಿಗೆ ಬಳಸಿ)

11ಕೆಆರ್ ಎಂಎನ್ 3,4.ಜೆಪಿಜಿ

ರಾಮನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ರಾಮಾಂಜನೇಯ ಯುದ್ದ ಅಥವಾ ಭಕ್ತಿ ವಿಜಯ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ.ರೇಣುಕಾ ಚಾಲನೆ ನೀಡಿದರು.

(ಈ ಫೋಟೋವನ್ನು ಪ್ಯಾನಲ್‌ನಲ್ಲಿ ಬಳಸಿ)

ರಾಮನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಶ್ರೀ ರಾಮಾಂಜನೇಯ ಯುದ್ದ ಪೌರಾಣಿಕ ನಾಟಕ ಪ್ರದರ್ಶಿಸಿದರು. ನ್ಯಾಯಾಧೀಶರಾದ ಬಿ.ವಿ.ರೇಣುಕಾ, ಎಂ.ಡಿ.ಮಹರ್ಕರ್, ರಾಘವೇಂದ್ರ, ಲೋಕೇಶ್, ಸವಿತಾ , ಮಹೇಶ್, ಅವಿನಾಶ್ ಚಿಂಧು ಇತರರು ಪಾಲ್ಗೊಂಡಿದ್ದರು.