ಹಿರಿಯ ಮಹಿಳಾ ಅಧಿಕಾರಿಗಳ ವಾಹನಗಳಿಗೆ ಮಹಿಳಾ ಚಾಲಕರನ್ನು ನೇಮಿಸಬೇಕು, ಭದ್ರತೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷನಿ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಹಿರಿಯ ಮಹಿಳಾ ಅಧಿಕಾರಿಗಳ ವಾಹನಗಳಿಗೆ ಮಹಿಳಾ ಚಾಲಕರನ್ನು ನೇಮಿಸಬೇಕು, ಭದ್ರತೆಗಾಗಿ ಮಹಿಳಾ ಪೊಲೀಸರನ್ನು ನಿಯೋಜಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷನಿ ಗೌಡ ತಿಳಿಸಿದರು.

ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರೂಪ್‌ ''''''''''''''''ಡಿ''''''''''''''''ಯಿಂದ ಹಿಡಿದು ಮೇಲಾಧಿಕಾರಿವರೆಗೆ ಪುರುಷ ಮೇಲಾಧಿಕಾರಿಗಳಿಂದ ಮಹಿಳಾ ನೌಕರರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ ನಿಲ್ಲಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ಬಹು ದಿನಗಳ ಬೇಡಿಕೆಯಂತೆ ಋತುಚಕ್ರದ ರಜೆಗಾಗಿ ಹೋರಾಟ ನಡೆಯುತ್ತಿತ್ತು. ನಮ್ಮ ಬೇಡಿಕೆಯಂತೆ ರಾಜ್ಯ ಸರ್ಕಾರ ಋತುಚಕ್ರದ ರಜೆಗಳು ನೀಡಲು ಸಮ್ಮತಿಸಿತಲ್ಲದೆ, ಪ್ರತಿ ವರ್ಷ ಸೆ. 13ರಂದು ಮೇರಿ ದೇವಾಸಿಯಾ ಅವರ ಜನ್ಮದಿನದಂದು ಸರ್ಕಾರಿ ಮಹಿಳಾ ನೌಕರರ ಸಂಘದ ಸಂಸ್ಥಾಪನಾ ದಿನವನ್ನಾಗಿ ಆಚರಿಸಲು ಒಪ್ಪಿಕೊಂಡಿದೆ ಎಂದರು.

ರಾಜ್ಯದಲ್ಲಿ ಇಲ್ಲಿಯವರೆಗೆ 50 ಲಕ್ಷ ಮಹಿಳಾ ಸರ್ಕಾರಿ ನೌಕರರಿಂದ ಸದಸ್ಯತ್ವ ಪಡೆಯಲಾಗಿದ್ದು, ಇನ್ನು 2 ಕೋಟಿ ಮಹಿಳೆಯರು ಕೇವಲ 100 ರು. ಸಂದಾಯ ಮಾಡಿ ಆಯಾ ಜಿಲ್ಲಾ ಅಧ್ಯಕ್ಷರು ಹಾಗೂ ತಾಲೂಕು ಘಟಕದ ಅಧ್ಯಕ್ಷರನ್ನು ಸಂಪರ್ಕಿಸಿ ಸದಸ್ಯತ್ವ ಪಡೆದುಕೊಳ್ಳುವಂತೆ ಕರೆ ನೀಡಿದರು.

ರಾಜ್ಯದಲ್ಲಿ ಶೇ. 52ರಷ್ಟು ಮಹಿಳಾ ನೌಕರರರು ಎಲ್ಲ ಕ್ಷೇತ್ರಗಳಲ್ಲಿ ಅಥವಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಈ ಪುರುಷ ಪ್ರಧಾನ ಸಮಾಜದಲ್ಲಿ ಸ್ವಂತದ ಧ್ವನಿ ಎತ್ತುವ ಅಧಿಕಾರ ಇಲ್ಲದೆ ಇದ್ದ ಕಾರಣ ಈ ಹಿಂದೆ ನೂರು ವರ್ಷಗಳ ಕೆಳಗೆ ಮೇರಿ ದೇವಾಸಿಯಾ ಅವರು ಸೈಕಲ್‌ ತುಳಿದು ಮಹಿಳಾ ನೌಕರರರನ್ನು ಸಂಘಟಿಸುವ ಕಾರ್ಯ ಮಾಡಿದ್ದರು. ತದನಂತರ ಅವರ ವಾರಸುದಾರರಾಗಿ ಈ ಸಂಘಟನೆ ಮುಂದುವರೆಸಿಕೊಂಡು ಹೋಗುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ ಎಂದರು. ಸಂಘದ ರಾಜ್ಯ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ, ಬ್ರಿಮ್ಸ್‌ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಉಮಾ ದೇಶಮುಖ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಆಶಾರಾಣಿ, ಜಿಲ್ಲಾಧ್ಯಕ್ಷೆ ಪಾರ್ವತಿ ಸೋನಾರೆ, ಜಿಲ್ಲಾ ಉಪಾಧ್ಯಕ್ಷೆ ವಿಜಯಶೀಲಾ, ಪ್ರಧಾನ ಕಾರ್ಯದರ್ಶಿ ಗೀತಾ ಗಡ್ಡಿ, ಸಹಕಾರ ಇಲಾಖೆ ಉಮಾ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

30ಕ್ಕೆ ಜಿಲ್ಲಾ ಮಹಿಳಾ ನೌಕರರ ಸಂಘ ಉದ್ಘಾಟನೆ

ಜ. 30ರಂದು ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕವು ಉದ್ಘಾಟನೆಗೊಳ್ಳಲಿದ್ದು, ಜೊತೆಗೆ ಸಂಘದ ಸಮ್ಮೇಳನ ಕೂಡ ಆಯೋಜಿಸಲಾಗಿದೆ ಎಂದು ರೋಷನಿ ಗೌಡ ತಿಳಿಸಿದರು.