ಸಾರಾಂಶ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸಕ್ತ ದೆಹಲಿ ನಿವಾಸಿ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಪ್ರೊ.ರಾಮಚಂದ್ರಪ್ಪ, ಡಾ.ಪಿವಿ ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಾಣ್ಣ ಕಲ್ಲೂರು ಅವರನ್ನು ನೇಮಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಇದರಲ್ಲಿ ತುಳು, ಕೊಂಕಣಿ ಹಾಗೂ ಬ್ಯಾರಿ ಅಕಾಡೆಮಿಗೆ ದ.ಕ. ಜಿಲ್ಲೆಗೆ ಸಿಂಹಪಾಲು ದೊರೆತಿದ್ದು, ಈ ಮೂರು ಅಕಾಡೆಮಿಗಳಿಗೆ ಅಧ್ಯಕ್ಷರಾಗಿ ಮಂಗಳೂರಿನವರಿಗೆ ಅವಕಾಶ ಲಭಿಸಿದೆ.ತುಳು ಅಕಾಡೆಮಿಗೆ ತಾರಾನಾಥ ಗಟ್ಟಿ ಕಾಪಿಕಾಡ್: ಮಂಗಳೂರಿನ ಹಿರಿಯ ಪತ್ರಕರ್ತ ತಾರನಾಥ ಗಟ್ಟಿ ಕಾಪಿಕಾಡ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಅಕಾಡೆಮಿ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಪೃಥ್ವಿರಾಜ್, ಕುಂಬ್ರ ದುರ್ಗಾಪ್ರಸಾದ್ ರೈ, ಮೋಹನದಾಸ್ ಕೊಟ್ಟಾರಿ, ಅಕ್ಷಯಾ ಆರ್. ಶೆಟ್ಟಿ, ಶೈಲೇಶ್ ಸುವರ್ಣ, ಕಿಶೋರ್ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ ಮತ್ತು ಉಡುಪಿ ಜಿಲ್ಲೆಯಿಂದ ಸಂತೋಷ್ ಶೆಟ್ಟಿ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಇವರ ಅವಧಿ ಮೂರು ವರ್ಷಗಳ ವರೆಗೆ ಇರುತ್ತದೆ.ಕೊಂಕಣಿ ಅಕಾಡೆಮಿಗೆ ಜೋಕಿಂ ಸ್ಟಾನ್ಸಿ ಆಲ್ವಾರಿಸ್: ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಕಿಂ ಸ್ವಾನ್ಸಿ ಆಲ್ವಾರಿಸ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅಕಾಡೆಮಿ ಸದಸ್ಯರಾಗಿ ಬೆಂಗಳೂರಿನ ಪ್ರಕಾಶ್ ಮಾಡ್ತಾ, ದ.ಕ. ಜಿಲ್ಲೆಯಿಂದ ರೊನಾಲ್ಡ್ ಕ್ರಾಸ್ತಾ, ಡಾ.ವಿಜಯಲಕ್ಷ್ಮೀ ನಾಯಕ್, ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ಸಮರ್ಥ ಭಟ್, ಯಲ್ಲಾಪುರದ ಸುನಿಲ್ ಸಿದ್ದಿ, ಉತ್ತರ ಕನ್ನಡ ಜಿಲ್ಲೆಯ ಜೇಮ್ಸ್ ಲೋಪಿಸ್, ಕಾರ್ಕಳ ತಾಲೂಕಿನ ದಯಾನಂದ ಮುಡೇಕರ್, ಚಿಕ್ಕಮಗಳೂರಿನ ಪ್ರಮೋದ್ ಪಿಂಟೋ ಅವರನ್ನು ನೇಮಕ ಮಾಡಲಾಗಿದೆ.ಬ್ಯಾರಿ ಅಕಾಡೆಮಿಗೆ ಉಮ್ಮರ್:ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಮಂಗಳೂರಿನ ಲೇಖಕ, ಪತ್ರಕರ್ತ ಉಮ್ಮರ್ ಯು.ಎಚ್ ಅವರನ್ನು ನೇಮಕ ಮಾಡಲಾಗಿದೆ. ಅಕಾಡೆಮಿ ಸದಸ್ಯರಾಗಿ ಚಿಕ್ಕಮಗಳೂರಿನ ಬಿ.ಎಸ್. ಮೊಹಮ್ಮದ್, ಬೆಂಗಳೂರಿನ ಹಪ್ಪಾ ಬಾನು, ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾರಾ ಅಲಿ ಪರ್ಲಡ, ಶಮೀರಾ ಜಹಾನ್, ಯುಎಚ್ ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕ್ಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್, ಅಮೀದ್ ಹಸನ್ ಮಾಡೂರು, ಉಡುಪಿ ಜಿಲ್ಲೆಯಿಂದ ಶಮೀರ್ ಮುಲ್ಕಿ ಅವರನ್ನು ನೇಮಿಸಲಾಗಿದೆ.ಯಕ್ಷಗಾನ ಅಕಾಡೆಮಿಗೆ ಶಿವರಾಮ ಶೆಟ್ಟಿ:
ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ನೇಮಿಸಲಾಗಿದೆ. ಅಕಾಡೆಮಿ ಸದಸ್ಯರಾಗಿ ರಾಘವ ಎಚ್., ಕೃಷ್ಣಪ್ಪ ಪೂಜಾರಿ, ಗುರುರಾಜ ಭಟ್, ವಿನಯಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಮೂಲ್ಕಿ ಮೋಹನ ಕೊಪ್ಪಳ, ಸತೀಶ್ ಅಡಪ ಸಂಕಬೈಲು, ರಾಜೇಶ್ ಕಳಾಯಿ, ದಯಾನಂದ, ಜಿವಿಎಸ್ ಉಳ್ಳಾಲ್ ಅವರನ್ನು ನೇಮಕ ಮಾಡಲಾಗಿದೆ.ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸಕ್ತ ದೆಹಲಿ ನಿವಾಸಿ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಪ್ರೊ.ರಾಮಚಂದ್ರಪ್ಪ, ಡಾ.ಪಿವಿ ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಾಣ್ಣ ಕಲ್ಲೂರು ಅವರನ್ನು ನೇಮಿಸಲಾಗಿದೆ.