ಗ್ಯಾರಂಟಿ ಯೋಜನೆ ಯಶಸ್ವಿಗೊಳಿಸೋಣ

| Published : Mar 17 2024, 02:00 AM IST

ಸಾರಾಂಶ

ಇಂಡಿ: ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಲಿ ಎನ್ನುವ ಉದ್ದೇಶದಿಂದ ಸರ್ಕಾರ ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಗಳನ್ನು ಅನುಷ್ಠಾನಕ್ಕೆ ತಂದಿದೆ.

ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಲಿ ಎನ್ನುವ ಉದ್ದೇಶದಿಂದ ಸರ್ಕಾರ ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿಗಳನ್ನು ಅನುಷ್ಠಾನಕ್ಕೆ ತಂದಿದೆ. ಸಮಿತಿಯ ಅಧ್ಯಕ್ಷರು, ಸದಸ್ಯರು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಜೊತೆ ತಾವು ಕೈಜೋಡಿಸಿ, ಯೋಜನೆಗಳು ಯಶಸ್ವಿಗೊಳಿಸೋಣ ಎಂದು ತಾಪಂ ಇಒ ಕು.ನೀಲಗಂಗಾ ಹೇಳಿದರು.

ರಾಜ್ಯ ಸರ್ಕಾರದ ಬಹುಮುಖ್ಯ ಸಮಾಜಮುಖಿ ಯೋಜನೆಯಾದ 5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ತಾಪಂ ಇಒ ಸದಸ್ಯ ಕಾರ್ಯದರ್ಶಿಯನ್ನಾಗಿ ಒಳಗೊಂಡು ಸರ್ಕಾರೇತರ ಸಮಿತಿಯನ್ನು ರಚಿಸಿ ಅಪರ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದರಿಂದ ತಾಲೂಕು ಮಟ್ಟದ ಸಮಿತಿ ಅಧ್ಯಕ್ಷ, ಸದಸ್ಯರಿಗೆ ಆದೇಶ ಪ್ರತಿಯನ್ನು ನೀಡಿ, ಸನ್ಮಾನಿಸಿ ಅವರು ಮಾತನಾಡಿದರು.

ತಾಪಂ ಎಡಿ(ನರೇಗಾ) ಸಂಜಯ ಖಡಗೇಕರ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಬಡವರು, ದುರ್ಬಲರು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕಿಸಿಕೊಡಲು ಪ್ರಯತ್ನಿಸಬೇಕು. ಪ್ರತಿನಿಧಿಗಳಾಗಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ, ರಾಜ್ಯದಲ್ಲಿಯೇ ಪಂಚ ಗ್ಯಾರಂಟಿ ಯೋಜನೆಯ ಲಾಭ ಪಡೆದ ಫಲಾನುಭವಿಗಳ ಸಂಖ್ಯೆಯಲ್ಲಿ ಇಂಡಿಯೇ ಪ್ರಥಮ ಎನ್ನುವಂತೆ ಶ್ರಮವಹಿಸಲು ಎಲ್ಲರು ಕೆಲಸ ಮಾಡೋಣ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ನೇಮಕವಾದ ಪ್ರಶಾಂತ ಕಾಳೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಡವರು, ದುರ್ಬಲ ವರ್ಗದವರು ಹಾಗೂ ಯಾವುದೇ ಸಮಾಜದಲ್ಲಿನ ಅತ್ಯಂತ ಹಿಂದುಳಿದ ಕುಟುಂಬಗಳಿಗೆ ನೆರವು ನೀಡಬೇಕು. ಬಡವರ ಸಹಾಯಕ್ಕೆ ಬರಬೇಕು ಎಂಬ ಉದ್ದೇಶದಿಂದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದರ ಫಲವಾಗಿ ಇಂದು ರಾಜ್ಯದ ಹಲವು ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಹಲವು ಕುಟುಂಗಳಿಗೆ ಅನುಕೂಲವಾಗಿದೆ. ಯೋಜನೆಗಳಿಗೆ ಪ್ರಚಾರದ ಕೊರತೆ ಕಾಣುತ್ತಿದ್ದು, ಸಮಿತಿಗೆ ಆಯ್ಕೆಯಾದ ನಾವೆಲ್ಲ 5 ಯೋಜನೆಗಳ ಪ್ರಚಾರದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಯೋಜನೆಯ ಲಾಭ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ಸರ್ಕಾರದ ನಿರ್ದೇಶನದಂತೆ ಕಾರ್ಯಪ್ರವೃತ್ತರಾಗೊಣ, ಶಾಸಕರು ನಮ್ಮ ವಿಶ್ವಾಸವಿಟ್ಟು ಸಮಿತಿಗೆ ನೇಮಕ ಮಾಡಿದ್ದರಿಂದ ಎಲ್ಲರ ಪರವಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ, ಅಪ್ಪಾಶ ಲಾಳಸೇರಿ, ರಾಜಕುಮಾರ, ಬಸವರಾಜ ಬಬಲಾದಿ, ಪ್ರಭಾಕರ ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಜಾವೀದ ಮೋಮಿನ, ಅವಿನಾಸ ಬಗಲಿ, ಭೀಮಣ್ಣ ಕವಲಗಿ, ಸದಾಶಿವ ಪ್ಯಾಟಿ, ಸುನೀಲ ಅತನೂರ, ದತ್ತು ಕೋಳಿ, ರಾಜು ಹಿರೇಬೇವನೂರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಸದಸ್ಯರಾದ ಮಹೇಶ ಹೊನ್ನಬಿಂದಗಿ, ಸಂಜೀವಕುಮಾರ ನಾಯ್ಕೋಡಿ, ಸತೀಶ ಹತ್ತಿ, ನಿರ್ಮಲಾ ತಳಕೇರಿ,ಶೈಲಜಾ ಜಾಧವ, ಶಶಿಕುಮಾರ ಮಠ, ಸಿದ್ದು ಕಟ್ಟಿಮನಿ, ಪ್ರಭು ಕುಂಬಾರ, ಸಂಕೇತ ಜೋಶಿ, ಮಲ್ಲೇಶಿ ಭೋಸಗಿ, ರುದ್ರುಗೌಡ ಅಲಗೊಂಡ, ಭೀಮರಾಯ ಮೇತ್ರಿ, ಸೋಮಣ್ಣ ಪ್ರಚಂಡಿ, ಅಜೀತ ಜೀರಗೆ ಇತರರು ಇದ್ದರು.

---

ಕೋಟ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿನ ಬಡವರ ಹಿತ ಕಾಪಾಡುವ ಉದ್ದೇಶದಿಂದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಪ್ರಚಾರದ ಜೊತೆಗೆ ಯೋಜನೆಗಳು ಎಲ್ಲರಿಗೂ ದೊರಕುವ ಹಾಗೆ ಸಮಿತಿಯ ಸದಸ್ಯರು ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರು ಮಾಡಬೇಕು.

-ಇಲಿಯಾಸ ಬೋರಾಮಣಿ ಗ್ಯಾರಂಟಿ ಯೋಜನೆಯ ಜಿಲ್ಲಾ ಸಮಿತಿ ಅಧ್ಯಕ್ಷ.