ಸುಸೂತ್ರ ಚುನಾವಣೆಗೆ 19ಕ್ಕೂ ಹೆಚ್ಚು ನೋಡಲ್‌ ಅಧಿಕಾರಿಗಳ ನೇಮಕ

| Published : Feb 22 2024, 01:48 AM IST

ಸಾರಾಂಶ

ಜಿಲ್ಲೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 19 ವಿವಿಧ ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.

ಧಾರವಾಡ: ಚುನಾವಾಣಾ ಆಯೋಗದ ನಿರ್ದೇಶನದಂತೆ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯನ್ನು ಪಾರದರ್ಶಕ, ನಿಯಮಾನುಸಾರ ಮತ್ತು ಕಾಲಕಾಲಕ್ಕೆ ಆಯೋಗ ನೀಡುವ ಸೂಚನೆಗಳನ್ನು ಜಾರಿಗೊಳಿಸಿ ಚುನಾವಣೆ ನಡೆಸಲು ಜಿಲ್ಲೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 19 ವಿವಿಧ ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.

ನೊಡಲ್ ಅಧಿಕಾರಿಗಳಾಗಿ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮೋನಾ ರೌತ (ಮಾದರಿ ನೀತಿ ಸಂಹಿತೆ ಮೇಲ್ವಿಚಾರಣೆ ಹಾಗೂ ಮಾಧ್ಯಮ ಪ್ರಮಾಣೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣೆ), ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ್ ಎಂ. ಬ್ಯಾಕೋಡ್ (ಗ್ರಾಮೀಣ ಜಿಲ್ಲಾ ಕಾನೂನು ಮತ್ತು ಸುವ್ಯವಸ್ಥೆ) ಮಹಾನಗರ ಉಪ ಪೊಲೀಸ್ ಆಯುಕ್ತ ರಾಜೀವ್ ಎಂ. (ಮಹಾನಗರ ಕಾನೂನು ಸುವ್ಯವಸ್ಥೆ ಮತ್ತು ಇತರೆ), ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಭಜಂತ್ರಿ (ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ಮತ ಎಣಿಕೆ ಕೆಂದ್ರ ಮತ್ತು ಮತ ಯಂತ್ರಗಳ ಭದ್ರತಾ ಕೊಠಡಿ ಮೇಲ್ವಿಚಾರಣೆ), ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. (ತರಬೇತಿ ನಿರ್ವಹಣೆ), ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್. (ಚುನಾವಣಾ ಸಂಬಂಧಿತ ಸಾಮಗ್ರಿ ನಿರ್ವಹಣೆ), ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ (ಸಾರಿಗೆ ನಿರ್ವಹಣೆ), ಎನ್‌ಐಸಿಯ ಜಿಲ್ಲಾ ಮಾಹಿತಿ ಅಧಿಕಾರಿ ಮೀನಾಕುಮಾರಿ (ಸೈಬರ್ ಸುರಕ್ಷತೆ ಮತ್ತು ಐಟಿ ಹಾಗೂ ಗಣಕೀಕರಣ), ಜಿಪಂ ಸಿಇಒ ಸ್ವರೂಪ ಟಿ.ಕೆ. (ಸ್ವಿಪ್ ಚಟುವಟಿಕೆ), ಜಿಪಂ ಯೋಜನಾಧಿಕಾರಿ ದೀಪಕ ಮಡಿವಾಳರ (ಇವಿಎಂ ನಿರ್ವಹಣೆ). ಕವಿವಿ ಕುಲಸಚಿವ ಎ. ಚನ್ನಪ್ಪ ಹಾಗೂ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಲೆಕ್ಕಾಧಿಕಾರಿ ಜ್ಯೋತಿ ಕುಂದರ (ವೆಚ್ಚ ಮೇಲ್ವಿಚಾರಣೆ), ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಮೋಹನ ಶಿವಣ್ಣನವರ (ಪೋಸ್ಟಲ್ ಬ್ಯಾಲೆಟ್ ಮತ್ತು ಇಟಿಪಿಬಿಎಸ್ ಹಾಗೂ ಮತಪತ್ರ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಹಾಗೂ ವಾರ್ತಾ ಸಹಾಯಕ ಅಧಿಕಾರಿ ಸುರೇಶ ಹಿರೇಮಠ (ಮಾಧ್ಯಮ), ಕಾನೂನು ವಿವಿ ಕುಲಸಚಿವೆ ಅನುರಾಧಾ ವಸ್ತ್ರದ (ಮತದಾರರ ಪಟ್ಟಿ), ಕೃಷಿ ವಿವಿ ಕುಲಸಚಿವೆ ಜಯಲಕ್ಷ್ಮೀ (ಚುನಾವಣಾ ದೂರುಗಳ ಮತ್ತು ಮತದಾರರ ಸಹಾಯವಾಣಿ ನಿರ್ವಹಣೆ), ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಡಾ. ಭೀಮಪ್ಪ (ಚುನಾವಣಾ ವೀಕ್ಷಕರ ನಿರ್ವಹಣೆ), ಪಿಎಂಜಿಎಸ್‌ವೈ ಯೋಜನೆ ತಾಂತ್ರಿಕ ಸಹಾಯಕ ಅನೀಸ್ ನಾಯ್ಕ್ (ಸಿ-ವಿಜಿಲ್ ಇತರೆ), ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯಪಾಲಕ ಅಭಿಯಂತರ ಸುರೇಶ ಹಿರೇಮಠ (ವೆಬ್ ಕಾಸ್ಟಿಂಗ್ ಮತ್ತು ಜಿಪಿಎಸ್ ಅಳವಡಿಕೆ ಮೇಲ್ವಿಚಾರಣೆ) ನೇಮಿಸಲಾಗಿದೆ.