ಪ್ರಪ್ರಥಮ ಬಾರಿಗೆ ಗಣೇಶೋತ್ಸವದಲ್ಲಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಮೆಚ್ಚುಗೆ

| Published : Sep 09 2024, 01:33 AM IST

ಪ್ರಪ್ರಥಮ ಬಾರಿಗೆ ಗಣೇಶೋತ್ಸವದಲ್ಲಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಪ್ರಪ್ರಥಮ ಬಾರಿಗೆ ಗಣೇಶೋತ್ಸವದಲ್ಲಿ ಕಸಾಪ ಹೋಬಳಿ ಘಟಕದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ ಎಂದು ಕಸಾಪ ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅರ್ಥಪೂರ್ಣ ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅಂಬರೀಶ ಭಂಡಿಗಡಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಪ್ರಪ್ರಥಮ ಬಾರಿಗೆ ಗಣೇಶೋತ್ಸವದಲ್ಲಿ ಕಸಾಪ ಹೋಬಳಿ ಘಟಕದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ ಎಂದು ಕಸಾಪ ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹರಿಹರಪುರ ಹೋಬಳಿ ಘಟಕದಿಂದ ಶ್ರೀ ವಿಘ್ನೇಶ್ವರ ಸ್ನೇಹ ಬಳಗ ರುದ್ರಾಕ್ಷಿಬೈಲು ಭಂಡಿಗಡಿ ಇವರ ೧೬ನೇ ವರ್ಷದ ಗಣೇಶೋತ್ಸವದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ರಸಪ್ರಶ್ನೆ ಅಂತಹ ಕಾರ್ಯಕ್ರಮಗಳಿಂದ ನಮ್ಮ ಜ್ಞಾನವೃದ್ಧಿಯಾಗುತ್ತದೆ ವಿದ್ಯಾರ್ಥಿಗಳು ನಿರಂತರ ಪತ್ರಿಕೆ ಓದುವ ಹವ್ಯಾಸ ರೂಡಿಸಿಕೊಳ್ಳುವುದು ಶೈಕ್ಷಣಿಕ ಜೀವನಕ್ಕೆ ಅನುಕೂಲ ಎಂದರು.ಶ್ರೀ ವಿಘ್ನೇಶ್ವರ ಸ್ನೇಹ ಬಳಗದ ಗೌರವಾಧ್ಯಕ್ಷ ಬಿ.ಎಚ್. ದಿವಾಕರ್ ಭಟ್ ಭಂಡಿಗಡಿ ಮಾತನಾಡಿ ಹರಿಹರಪುರ ಕಸಾಪ ಹೋಬಳಿ ಘಟಕದ ವಿಭಿನ್ನ ಹೊಸ ಕಾರ್ಯಕ್ರಮ ಜನರಿಗೆ ತಲುಪುತ್ತಿದೆ. ಗಣೇಶೋತ್ಸವದಲ್ಲಿ ಕನ್ನಡ ರಸಪ್ರಶ್ನೆ ಹಮ್ಮಿಕೊಂಡಿ ರುವುದು ಒಂದು ವಿಶೇಷ ಎಂದರು.ಕಸಾಪ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಶಶಿಶೇಖರ್ ಹೊರಕೊಡಿಗೆ ಮಾತನಾಡಿ ಹರಿಹರಪುರ ಹೋಬಳಿ ಯಾದ್ಯಂತ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗಿದೆ ಎಂದರು.ಕಸಾಪ ಹೋಬಳಿ ಘಟಕದ ಪ್ರಧಾನ ಸಂಚಾಲಕ ಶುಕುರ್ ಅಹಮದ್ ಮಾತನಾಡಿ ಗಣೇಶೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ಯೋಧರಿಗೆ ಮಾಜಿ ಸೈನಿಕರಿಗೆ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಕ್ಕೆ ಶ್ರೀ ವಿಘ್ನೇಶ್ವರ ಸ್ನೇಹ ಬಳಗ ರುದ್ರಾಕ್ಷಿಬೈಲು ಮಾದರಿ ಎಂದರು. ಶ್ರೀ ವಿಘ್ನೇಶ್ವರ ಸ್ನೇಹ ಬಳಗದ ಸರ್ವ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.