ಶಿಕ್ಷಣ ಇಲಾಖೆಯ ನಿರಂತರ ಕಾರ್ಯಕ್ಕೆ ಮೆಚ್ಚುಗೆ: ಕೆ.ಎಸ್.ಸುರೇಶ್

| Published : Jan 12 2025, 01:17 AM IST

ಶಿಕ್ಷಣ ಇಲಾಖೆಯ ನಿರಂತರ ಕಾರ್ಯಕ್ಕೆ ಮೆಚ್ಚುಗೆ: ಕೆ.ಎಸ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

Appreciation for the continuous work of the Education Department: K.S. Suresh

-ತಳಕು ಹೋಬಳಿ ಕ್ಲಸ್ಟರ್ ಮಟ್ಟದ ಶಿಕ್ಷಕರ ಆರೋಗ್ಯ ತಪಾಸಣಾ ಶಿಬಿರ

----

ಕನ್ನಡಪ್ರಭವಾರ್ತೆ ಚಳ್ಳಕೆರೆ

ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರ ಆರೋಗ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಾಗೂ ಗುರುಸ್ಪಂದನಾ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.

ಅವರು ತಾಲೂಕಿನ ಹೊಸಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಳಕು ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಶಿಕ್ಷಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ನಿತ್ಯಪರಿಶ್ರಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸ್ವಾಭಾವಿಕ, ಈ ಹಿನ್ನೆಲೆ ಶಿಕ್ಷಣ ಇಲಾಖೆ ಪ್ರತಿವರ್ಷ ಎರಡು ಬಾರಿ ಶಿಕ್ಷಕರ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಮೂಲಕ ಶಿಕ್ಷಕರಿಗೂ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ತಳಕು ಕ್ಲಸ್ಟರ್ ಮಟ್ಟದ ಗುರುವಂದನಾ ಕಾರ್ಯಕ್ರಮ ನಡೆಸುತ್ತಿರುವ ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.

ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ ತಳಕು ಹೋಬಳಿಯ ೮ ಕ್ಟಸ್ಟರ್‌ನ ೨೫೦ಕ್ಕೂ ಹೆಚ್ಚು ಶಿಕ್ಷಕರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದೆ. ಡಾ.ತಿಪ್ಫೇಸ್ವಾಮಿ, ಡಾ.ರವಿಕಿರಣ್ ತಂಡ ತಪಾಸಣಾ ಕಾರ್ಯ ಯಶಸ್ವಿಯಾಗಿ ಪೂರೈಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಕೆ.ಎಸ್.ಶ್ರೀಕಾಂತ್ ವಹಿಸಿದ್ದರು, ಅಕ್ಷರದಾಸೋಹ ಅಧಿಕಾರಿ ಜಿ.ಟಿ.ಮಂಜುನಾಥಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷೆ ಸಣ್ಣಸೂರಮ್ಮ, ಕಾರ್ಯದರ್ಶಿ ಹನುಮಂತರಾಯ, ಡಿ.ಮಹಲಿಂಗಪ್ಪ, ಎಸ್.ತಿಪ್ಪೇಸ್ವಾಮಿ, ಈರಣ್ಣ, ಸಿಆರ್‌ಪಿ ತಿಪ್ಪೇಸ್ವಾಮಿ, ಎನ್.ಮಾರಣ್ಣ, ವಿಷ್ಣುವರ್ಧನ್, ಶಿವಣ್ಣ, ರಾಜಣ್ಣ, ಸುರೇಶ್, ತಿಪ್ಪೇಸ್ವಾಮಿ, ಚಿಟ್ಟಿಬಾಬು, ವಾಣಿ, ಇಂಪನ, ರೇಖಾ,ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಇದ್ದರು.

----

ಪೋಟೋ: ಚಳ್ಳಕೆರೆ ತಾಲೂಕಿನ ಹೊಸಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಳಕು ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಶಿಕ್ಷಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಗುರುಸ್ಪಂದನಾ ಕಾರ್ಯಕ್ರಮವನ್ನು ಬಿಇಒ ಕೆ.ಎಸ್.ಸುರೇಶ್ ಉದ್ಘಾಟಿಸಿದರು.

೧೧ಸಿಎಲ್‌ಕೆ೨