ಕೋವಿಡ್‌ ಸಂದರ್ಭ ಸಲ್ಲಿಸಿದ ಸೇವೆಗೆ ಗೌರವ ಶ್ಲಾಘನೀಯ

| Published : Oct 30 2023, 12:31 AM IST

ಸಾರಾಂಶ

ಚಂದ್ರಗುತ್ತಿ ಶ್ರೀ ರೇಣುಕಾಂಬ ಸಭಾಭವನದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸೊರಬ

ಸ್ಪೂರ್ತಿ ಸ್ನೇಹ ಬಳಗದಿಂದ ಕಳೆದ ಒಂದು ವರ್ಷದಿಂದ ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಸ್ನೇಹಿತರು ಒಗ್ಗೂಡಿ ಎರಡನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಬಳಗ ಅಧ್ಯಕ್ಷೆ ವೀಣಾ ಶಶಿಧರ್ ಹೆಗಡೆ ಹೇಳಿದರು.

ಚಂದ್ರಗುತ್ತಿ ಶ್ರೀ ರೇಣುಕಾಂಬ ಸಭಾಭವನದಲ್ಲಿ 1992-93ರಿಂದ 1994-95ರ ಮುಕ್ತ ಮನಸ್ಸಿನ ಸ್ಪೂರ್ತಿ ಸ್ನೇಹಿತರ ಬಳಗದವರಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಪೂರ್ತಿ ಸ್ನೇಹಿತರ ಬಳಗವು ಮೊದಲನೇ ವರ್ಷದ ಪ್ರಾರಂಭದಲ್ಲಿ ಗುರುಗಳ ಆಶೀರ್ವಾದದೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗುರುಗಳ ಆಶೀರ್ವಾದ ಪಡೆದು ನಾವು ಪ್ರಾರಂಭಿಸಿದ ಸ್ಪೂರ್ತಿ ಸ್ನೇಹಿತರ ಬಳಗದ ಎರಡನೇ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದೆವು. ನಮ್ಮ ಸ್ಪೂರ್ತಿ ಸ್ನೇಹಿತರ ಬಳಗದ ಸದಸ್ಯರ ಸೇವೆ ಗುರುತಿಸಿ ಸನ್ಮಾನಿಸಿದ್ದು ಶ್ಲಾಘನೀಯ ಎಂದರು.

ಮುಂದಿನ ದಿನಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಗುವುದು. ಜೊತೆಗೆ ಸಮಾಜದಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತ ಮುಂದುವರಿಯುತ್ತೇವೆ ಎಂದು ತಿಳಿಸಿದರು.

ಸ್ನೇಹ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ನೇಹಿತರ ಬಳಗದ ಉಪಾಧ್ಯಕ್ಷ ಶಿವಕುಮಾರ್ ಅಂಕರವಳ್ಳಿ ಮತ್ತು ವಿಜಯ ಕೆ. ಆಚಾರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ ಸ್ಪೂರ್ತಿ ಸ್ನೇಹಿತರ ಬಳಗದ ಸದಸ್ಯರಾದ ದಿನೇಶ್ ಅಂಚೆ, ಶರದ್ ನಾಯಕ್, ಪಾರ್ವತಿ ಬಿ.ಕೆ. ಅವರನ್ನು ಸನ್ಮಾನಿಸಲಾಯಿತು.

ಸ್ಪೂರ್ತಿ ಸ್ನೇಹಿತರ ಬಳಗದವರಾದ ಬಿ.ಮಂಜಪ್ಪ, ಸಿ.ಡಿ. ದೇವರಾಜ್, ಜಿ.ಎನ್. ಪ್ರಕಾಶ್, ಸುಮಾ, ಪಿ.ಕೆ. ನೀಲಮ್ಮ, ಬಂಗಾರಮ್ಮ, ದಿನೇಶ ಅಂಚೆ, ಶ್ರೀಧರ್ ಆಚಾರಿ, ವಿಶ್ವನಾಥ್ ಕಾಮತ್, ಎಸ್.ಕೆ. ನಟರಾಜ್, ಪ್ರಶಾಂತ್ ಜೆ.ಎಸ್.ನಾಯ್ಕ್, ಶರತ್ ನಾಯಕ್, ಶ್ರೀದೇವಿ, ಹೆಚ್.ಎಂ. ಕನ್ನಪ್ಪ, ಸಣ್ಣಪ್ಪ, ವಿಶ್ವನಾಥ್ ಆಚಾರಿ ಸೇರಿದಂತೆ ಸ್ಪೂರ್ತಿ ಸ್ನೇಹಿತರ ಬಳಗದವರು ಉಪಸ್ಥಿತರಿದ್ದರು.

- - - -29ಕೆಪಿಸೊರಬ02:

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಸ್ಪೂರ್ತಿ ಸ್ನೇಹ ಬಳಗದಿಂದ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕೋವಿಡ್ ಜನಸ್ನೇಹಿ ಕಾರ್ಯ ಮಾಡಿದ ಬಳಗದ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.