ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಆರ್‌ಎಸ್ ಜಲಾಶಯದಲ್ಲಿ ವಿಶ್ವದರ್ಜೆಯ ಕಾವೇರಿ ಬೃಂದಾವನ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ನಿರ್ಧಾರದಿಂದ ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಹಾಗೂ ಸ್ಥಳೀಯ ಉದ್ಯೋಗ ಸೃಷ್ಟಿಗೆ ಅನುಕೂಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.ಕೆಆರ್‌ಎಸ್ ಜಲಾಶಯದಲ್ಲಿ ಪಿಪಿಪಿ ಮಾದರಿಯಲ್ಲಿ ವಿಶ್ವ ದರ್ಜೆಯ ಕಾವೇರಿ ಬೃಂದಾವನ ರೂಪಿಸಲು ನಿರ್ಧರಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಕಾವೇರಿ ಕೊಳ್ಳದ ಹಾಗೂ ಮಂಡ್ಯ ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ. ದೇಶದ ಏಳು ಪ್ರಮುಖ ನದಿಗಳಲ್ಲಿ ಕಾವೇರಿ ನದಿಯೂ ಒಂದು. ಕಾವೇರಿಗೆ ಪೂಜನೀಯ ಸ್ಥಾನವಿದ್ದು, ಅದರ ಹೆಸರಿನಲ್ಲಿ ಬೃಂದಾವನ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿಶ್ವದರ್ಜೆಯ ಬೃಂದಾವನ ನಿರ್ಮಾಣ ಮಾಡುವುದರಿಂದ ಈ ಭಾಗದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉತ್ತಮ ಹೆಜ್ಜೆ ಇಟ್ಟಂತಾಗುತ್ತದೆ. ಸ್ಥಳೀಯವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಜಿಲ್ಲೆಯ ಜನರ ಮಟ್ಟಿಗೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಗ್ಯಾಸ್ ಬಳಕೆದಾರರು ಇಕೆವೈಸಿ ಮಾಡಿಸಿಕೊಳ್ಳಿ: ಎಚ್.ತ್ಯಾಗರಾಜು
ಪಾಂಡವಪುರ:ಗ್ಯಾಸ್ ಬಳಕೆದಾರರು ಇ-ಕೆವೈಸಿ ಮಾಡಿಸಿಕೊಳ್ಳುದರಿಂದ ಡಿಜಿಟಲ್ ಹಣಕಾಸು, ವ್ಯವಹಾರಗಳು ಸುಲಭವಾಗುತ್ತದೆ ಎಂದು ಪಟ್ಟಣದ ಪ್ರಕಾಶ್ ಗ್ಯಾಸ್ ಏಜೆನ್ಸಿ ಮಾಲೀಕ ಎಚ್.ತ್ಯಾಗರಾಜು ತಿಳಿಸಿದ್ದಾರೆ.ಇ-ಕೆವೈಸಿಯಿಂದ ಅಧಿಕೃತ ಸಂಸ್ಥೆಗಳು ಮತ್ತು ಏಜೆಂಟರು, ಗ್ರಾಹಕರ ಗುರುತು ಮತ್ತು ವಿಳಾಸವನ್ನು ಆಧಾರ್ ದೃಢೀಕರಣದ ಮೂಲಕ ಪರಿಶೀಲಿಸಿ ವ್ಯವಹಾರ ಮಾಡಬಹುದು. ಕಂಪನಿಯವರು ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆಗೆ ಆಗಮಿಸುತ್ತಾರೆ. ಈ ವೇಳೆ ಕಂಪನಿಯಿಂದಲೇ 150 ರು.ಗಳಿಗೆ ಗ್ಯಾಸ್ ಟ್ಯೂಬ್‌ಅನ್ನು ಒದಗಿಸುತ್ತಾರೆ. ಇದು ಐದು ವರ್ಷಗಳ ಬಾಳಿಕೆ ಬರುವುದಲ್ಲದೆ ವಿಮೆ ಸೌಲಭ್ಯವನ್ನು ಹೊಂದಿರುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಫೋನ್ ನಂಬರ್‌ನ್ನು ಅಪ್ಡೇಟ್ ಇರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
;Resize=(128,128))
;Resize=(128,128))